ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India) ವಿವಿಧ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ನಿರ್ದೇಶಕ, ಉಪ ನಿರ್ದೇಶಕ ಸೇರಿದಂತೆ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮೂರು ವರ್ಷದ ಅವಧಿಗೆ ಈ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಸಂಸ್ಥೆಯ ಹೆಸರು: ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: ಭಾರದಾದ್ಯಂತ
ಹುದ್ದೆಯ ಹೆಸರು: ನಿರ್ದೇಶಕ, ಉಪ ನಿರ್ದೇಶಕ
ವೇತನ: ರೂ.67700-209200 ರೂ ಮಾಸಿಕ
ಹುದ್ದೆ | ಹುದ್ದೆ ಸಂಖ್ಯೆ | ವೇತನ |
ಉಪನಿರ್ದೇಶಕರು | 10 | 67700-208700 ರೂ ಮಾಸಿಕ |
ನಿರ್ದೇಶಕ | 2 | 78800-209200 ರೂ ಮಾಸಿಕ |
ವಯಸ್ಸಿನ ಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 26-ಜೂನ್-2022 ರಂತೆ 56 ವರ್ಷಗಳು.
ಅನುಭವ
ಕ್ರೀಡಾ ಆಡಳಿತ ಅಥವಾ ಆಡಳಿತ ವಿಷಯದಲ್ಲಿ ಮೂರು ವರ್ಷ ಅನುಭವ ಅಥವಾ ಹಣಕಾಸು ಆಡಳಿತದಲ್ಲಿ ಮೂರು ವರ್ಷದ ಅನುಭವ
ವಯೋಮಿತಿ ಸಡಿಲಿಕೆ:
ಭಾರತೀಯ ಕ್ರೀಡಾ ಪ್ರಾಧಿಕಾರದ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕ
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26 ಮೇ 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಜೂನ್ 2022
ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಉಪ ನಿರ್ದೇಶಕರು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ನಿರ್ದೇಶಕ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sportsauthorityofindia.nic.in
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ವಿಳಾಸಕ್ಕೆ 20 ಜೂನ್ 2022ರೊಳಗೆ ಸಲ್ಲಿಸಬೇಕು
ನಿರ್ದೇಶಕರು (ನೇಮಕಾತಿ), ಭಾರತೀಯ ಕ್ರೀಡಾ ಪ್ರಾಧಿಕಾರ, ಪ್ರಧಾನ ಕಛೇರಿ, ಗೇಟ್ ಸಂಖ್ಯೆ. 10 (ಪೂರ್ವ ಗೇಟ್), ಜವಾಹರಲಾಲ್ ನೆಹರು ಕ್ರೀಡಾಂಗಣ, ಲೋಧಿ ರಸ್ತೆ, ನವದೆಹಲಿ - 110003
ಅರ್ಜಿ ಸಲ್ಲಿಕೆ ವಿಧಾನ
ವೆಬ್ಸೈಟ್ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ಸಮೂನೆಯನ್ನು ಅಭ್ಯರ್ಥಿಗಳು ಭರ್ತಿ ಮಾಡಬೇಕು.
ಅರ್ಜಿಯಲ್ಲಿ ಫೋಟೋ, ಸಹಿ. ಅಂಕ ಪ್ರಮಾಣ ಪತ್ರ, ಇನ್ನಿತತೆ ಅವಶ್ಯಕತ ಪ್ರಮಾಣ ಪತ್ರಗಳನ್ನು ಕೂಡ ಕಡ್ಡಾಯವಾಗಿ ಸಲ್ಲಿಸಬೇಕು.
ಹುದ್ದೆಗೆ ಅರ್ಹವಾದ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹೊಂದಿರಬೇಕು. ಈಗಾಗಲೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ