SAI Recruitment: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿದೆ ವಿವಿಧ ಹುದ್ದೆ; ತಿಂಗಳಿಗೆ 67 ಸಾವಿರ ವೇತನ

ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ.

ಬೇಗ ಅರ್ಜಿ ಹಾಕಿ

ಬೇಗ ಅರ್ಜಿ ಹಾಕಿ

  • Share this:
    ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (Sports Authority of India) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನಿರ್ದೇಶಕ, ಉಪ ನಿರ್ದೇಶಕ (Director, Deputy Director) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಒಟ್ಟು 30 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 8 ಆಗಿದೆ.

    ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಈಗಾಗಲೇ ಸರ್ಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ, ನಿವೃತ್ತರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಸಂಸ್ಥೆಯ ಹೆಸರು: ಭಾರತೀಯ ಕ್ರೀಡಾ ಪ್ರಾಧಿಕಾರ
    ಹುದ್ದೆಯ ಹೆಸರು: ನಿರ್ದೇಶಕ, ಉಪ ನಿರ್ದೇಶಕ
    ಹುದ್ದೆಗಳ ಸಂಖ್ಯೆ: 30
    ಉದ್ಯೋಗ ಸ್ಥಳ: ನವದೆಹಲಿ
    ವೇತನ: 67700-209200 ರೂ ಪ್ರತಿ ತಿಂಗಳು

































    ಹುದ್ದೆಹುದ್ದೆ ಸಂಖ್ಯೆವಯೋಮಿತಿವೇತನ
    ಉಪನಿರ್ದೇಶಕರು  67700-2087008ಭಾರತೀಯ ಕ್ರೀಡಾ ಪ್ರಾಧಿಕಾರ ನಿಯಮ ಅನುಸಾರ67700-208700 ರೂ ಮಾಸಿಕ
    ನಿರ್ದೇಶಕ 66ಭಾರತೀಯ ಕ್ರೀಡಾ ಪ್ರಾಧಿಕಾರ ನಿಯಮ ಅನುಸಾರ78800-209200 ರೂ ಮಾಸಿಕ
    ಉಪ ನಿರ್ದೇಶಕರು (ಸಮಾಲೋಚಕರು)10ಗರಿಷ್ಠ 64 ವರ್ಷಭಾರತೀಯ ಕ್ರೀಡಾ ಪ್ರಾಧಿಕಾರ ನಿಯಮ ಅನುಸಾರ
    ನಿರ್ದೇಶಕರು (ಸಮಾಲೋಚಕರು)6ಗರಿಷ್ಠ 64 ವರ್ಷಭಾರತೀಯ ಕ್ರೀಡಾ ಪ್ರಾಧಿಕಾರ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ಭಾರತೀಯ ಕ್ರೀಡಾ ಪ್ರಾಧಿಕಾರ ನಿಯಮ ಅನುಸಾರ

    ಇದನ್ನು ಓದಿ: ಸ್ಟೆನೋಗ್ರಾಫರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ ಎಸ್​ಎಸ್​ಸಿ; ಪಿಯುಸಿ ಆಗಿದ್ರೆ ಸಾಕು

    ವಯೋಮಿತಿ ಸಡಿಲಿಕೆ:
    ಭಾರತೀಯ ಕ್ರೀಡಾ ಪ್ರಾಧಿಕಾರದ ನಿಯಮಗಳ ಪ್ರಕಾರ

    ಅರ್ಜಿ ಸಲ್ಲಿಕೆ: ಆಫ್​ಲೈಮ್​

    ಆಯ್ಕೆ ಪ್ರಕ್ರಿಯೆ
    ಸಂದರ್ಶನ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18 ಆಗಸ್ಟ್​​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08 ಸೆಪ್ಟೆಂಬರ್​ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ - ನಿರ್ದೇಶಕರು, ಉಪ ನಿರ್ದೇಶಕರು: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: sportsauthorityofindia.nic.in

    ಅರ್ಜಿ ಸಲ್ಲಿಕೆ ವಿಳಾಸ
    ಡೈ. ನಿರ್ದೇಶಕರು (ನೇಮಕಾತಿ), ಭಾರತೀಯ ಕ್ರೀಡಾ ಪ್ರಾಧಿಕಾರ, ಪ್ರಧಾನ ಕಛೇರಿ, ಗೇಟ್ ನಂ.10 (ಪೂರ್ವ ದ್ವಾರ), ಜವಾಹರಲಾಲ್ ನೆಹರು ಕ್ರೀಡಾಂಗಣ, ಲೋಧಿ ರಸ್ತೆ, ನವದೆಹಲಿ-110003

    ಇದನ್ನು ಓದಿ: ಸಿಸ್ಟಂ ಇಂಜಿನಿಯರ್​ ಹುದ್ದೆಗೆ ಅರ್ಜಿ ಆಹ್ವಾನ; ಬಿಇ ಪದವೀಧರರಿಗೆ ಅವಕಾಶ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ:

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕಕ್ಕೂ ಮುನ್ನ ಸಲ್ಲಿಸಿ.
    Published by:Seema R
    First published: