Spices Board Recruitment 2022: ಭಾರತೀಯ ಮಸಾಲೆ ಮಂಡಳಿ(Spices Board of India)ಯಲ್ಲಿ 20 ರಿಸರ್ಚ್ ಟ್ರೇನಿ(Research Trainee) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇಡುಕ್ಕಿ, ಸಕಲೇಶಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಡಿಸೆಂಬರ್ 7ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಭಾರತೀಯ ಮಸಾಲೆ ಮಂಡಳಿ |
ಹುದ್ದೆ | ರಿಸರ್ಚ್ ಟ್ರೇನಿ |
ಒಟ್ಟು ಹುದ್ದೆ | 20 |
ವಿದ್ಯಾರ್ಹತೆ | ಎಂಎಸ್ಸಿ |
ವೇತನ | ಮಾಸಿಕ ₹ 21,000 |
ಉದ್ಯೋಗದ ಸ್ಥಳ | ಸಕಲೇಶಪುರ, ಇಡುಕ್ಕಿ, ಗ್ಯಾಂಗ್ಟಾಕ್ |
ಅರ್ಹತಾ ಮಾನದಂಡಗಳೇನು?
ಶೈಕ್ಷಣಿಕ ಅರ್ಹತೆ:
ಭಾರತೀಯ ಮಸಾಲೆ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಎಸ್ಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಭಾರತೀಯ ಮಸಾಲೆ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಶೈಕ್ಷಣಿಕ ಅರ್ಹತೆ
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ: JOBS: ರಾಮನಗರದಲ್ಲಿ ಫೀಲ್ಡ್ ರಿಸರ್ಚ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದೆ, ತಿಂಗಳಿಗೆ ₹ 28,000 ಸಂಬಳ
ಸಂದರ್ಶನ ನಡೆಯುವ ಸ್ಥಳ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ, ರೆಸ್ಯೂಮ್ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 7ರಂದು ಬೆಳಗ್ಗೆ 10 ಗಂಟೆಗೆ ಈ ಕೆಳಕಂಡ ಸ್ಥಳದಲ್ಲಿ ಹಾಜರಿರಬೇಕು.
ರಿಸರ್ಚ್ ಟ್ರೇನಿ (ಇಡುಕ್ಕಿ)-ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ ಮಸಾಲೆ ಮಂಡಳಿ, ಕೈಲಾಸನಾಡು P.O., ಮೈಲಡುಂಪಾರ, ಇಡುಕ್ಕಿ, ಕೇರಳ - 685553
ರಿಸರ್ಚ್ ಟ್ರೇನಿ(ಸಕಲೇಶಪುರ)- ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ ಸಾಂಬಾರ ಮಂಡಳಿ ಡೊನಿಗಲ್ ಪಿ.ಒ., ಸಕಲೇಶಪುರ, ಕರ್ನಾಟಕ - 573134
ರಿಸರ್ಚ್ ಟ್ರೇನಿ(ಗ್ಯಾಂಗ್ಟಾಕ್)-ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ, ಮಸಾಲೆ ಮಂಡಳಿ, ತಾಡಾಂಗ್ ಗ್ಯಾಂಗ್ಟಾಕ್, ಸಿಕ್ಕಿಂ - 737102
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 23/11/2022
ಸಂದರ್ಶನ ನಡೆಯುವ ದಿನಾಂಕ: 07/12/2022
ಇದನ್ನೂ ಓದಿ: BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ 260 ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೆಚ್ಚಿನ ವಿವರಗಳಿಗಾಗಿ,
ಇಡುಕ್ಕಿ ಸ್ಥಳಕ್ಕಾಗಿ ಸಂಪರ್ಕ ದೂರವಾಣಿ ಸಂಖ್ಯೆ: 04868-237268, 237206, 237207,
ಸಕಲೇಶಪುರ ಸ್ಥಳಕ್ಕೆ ದೂರವಾಣಿ ಸಂಖ್ಯೆ: 08173-244281, 8547138279
ಗ್ಯಾಂಗ್ಟಾಕ್ ಸ್ಥಳಕ್ಕಾಗಿ ದೂರವಾಣಿ ಸಂಖ್ಯೆ: 03592-231307 ಸಂಪರ್ಕಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ