Southern Railway Recruitment 2021: ಪಿಯುಸಿ ಪಾಸಾದವರಿಗೆ ದಕ್ಷಿಣ ರೈಲ್ವೆಯಲ್ಲಿ ಉದ್ಯೋಗ; ಮಾಸಿಕ ವೇತನ ₹ 30,000

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭಿಕ ಸಂಬಳವನ್ನು 7ನೇ ವೇತನ ಆಯೋಗದ 2-5ನೇ ಹಂತದವರೆಗೆ ನೀಡಲಾಗುತ್ತದೆ.

ರೈಲ್ವೆ ಇಲಾಖೆ

ರೈಲ್ವೆ ಇಲಾಖೆ

  • Share this:
Southern Railway Recruitment 2021: ದಕ್ಷಿಣ ರೈಲ್ವೆ(Southern Railway)ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಕ್ರೀಡಾಪಟು(Sports Persons)ಗಳ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಪಿಯುಸಿ ಹಾಗೂ ಯಾವುದೇ ಪದವಿ ಆಗಿರುವ ಅಭ್ಯರ್ಥಿಗಳು ಸ್ಪೋರ್ಟ್ಸ್​​ ಪರ್ಸನ್(Sports Person)​​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅಕ್ಟೋಬರ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 30, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಫ್​ಲೈನ್(Offline)​(ಪೋಸ್ಟ್​ ಮುಖಾಂತರ) ಮೂಲಕ ಅರ್ಹರು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆದಕ್ಷಿಣ ರೈಲ್ವೆ
ಹುದ್ದೆಯ ಹೆಸರು ಸ್ಪೋರ್ಟ್ಸ್​ ಆಫೀಸರ್
ಒಟ್ಟು ಹುದ್ದೆಗಳು21
ವಿದ್ಯಾರ್ಹತೆಯಾವುದೇ ಪದವಿ, 12ನೇ ತರಗತಿ
ಉದ್ಯೋಗದ ಸ್ಥಳಚೆನ್ನೈ
ವೇತನನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನಆಫ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ30/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30/11/2021





ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/10/2021

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2021


ಇದನ್ನೂ ಓದಿ: BHEL Recruitment 2021: ತಿಂಗಳಿಗೆ ₹ 83,000 ಸಂಬಳ, MBBS​ ಪದವೀಧರರಿಗೆ BHELನಲ್ಲಿ ಉದ್ಯೋಗ

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಡಿಡಿ(ಡಿಮ್ಯಾಂಡ್​ ಡ್ರಾಫ್ಟ್​​​) ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

  • ಸಾಮಾನ್ಯ/ OBC/ EWS ಅಭ್ಯರ್ಥಿಗಳಿಗೆ 500ರೂ. ಅರ್ಜಿ ಶುಲ್ಕ

  •  SC/ ST/ ಮಹಿಳಾ/ PWD/ Minortiy Community ಅಭ್ಯರ್ಥಿಗಳಿಗೆ-  250 ರೂ. ಅರ್ಜಿ ಶುಲ್ಕ


ಕ್ರೀಡೆಗೆ ಅನುಗುಣವಾಗಿ ದಕ್ಷಿಣ ರೈಲ್ವೆ ನೇಮಕಾತಿ 2021 ಹುದ್ದೆಯ ವಿವರಗಳು

ದಕ್ಷಿಣ ರೈಲ್ವೆಯು ಈ ಕೆಳಕಂಡ ಹುದ್ದೆಗಳಿಗೆ ಕ್ರೀಡಾಪಟುಗಳನ್ನು ನೇಮಿಸಿಕೊಳ್ಳುತ್ತದೆ.

ಅಥ್ಲೆಟಿಕ್ಸ್​ (ಪುರುಷರು)- 2

ಅಥ್ಲೆಟಿಕ್ಸ್​ (ಮಹಿಳೆಯರು) -2

ಬಾಸ್ಕೆಟ್​ಬಾಲ್(ಪುರುಷರು) -4

ಬಾಸ್ಕೆಟ್​ಬಾಲ್(ಮಹಿಳೆಯರು) -3

ಕ್ರಿಕೆಟ್​(ಮಹಿಳೆಯರು) -3

ಪವರ್​ಲಿಫ್ಟಿಂಗ್ (ಪುರುಷರು)- 1

ಸ್ವಿಮ್ಮಿಂಗ್ (ಪುರುಷರು) -1

ವಾಲಿಬಾಲ್(ಪುರುಷರು- 2

ವಾಲಿಬಾಲ್​(ಮಹಿಳೆಯರು) -3

ಒಟ್ಟು ಹುದ್ದೆಗಳು- 21 

ವೇತನ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭಿಕ ಸಂಬಳವನ್ನು 7ನೇ ವೇತನ ಆಯೋಗದ 2-5ನೇ ಹಂತದವರೆಗೆ ನೀಡಲಾಗುತ್ತದೆ.

  • ಲೆವೆಲ್-2: ಮಾಸಿಕ ₹19,000

  • ಲೆವೆಲ್​ 3: ಮಾಸಿಕ ₹21,700

  • ಲೆವೆಲ್​ 4: ಮಾಸಿಕ ₹ 25,500

  • ಲೆವೆಲ್ 5: ಮಾಸಿಕ ₹ 29,200




ಇದನ್ನೂ ಓದಿ: India Postal Recruitment 2021: SSLC, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ, ತಿಂಗಳಿಗೆ ₹81,000 ಸಂಬಳ



ವಯೋಮಿತಿ:

ಅಭ್ಯರ್ಥಿಗಳು 01/01/2022ಕ್ಕೆ 18-25 ವರ್ಷ ವಯೋಮಿತಿಯೊಳಗಿರಬೇಕು.

ಕ್ರೀಡಾ ಅಭ್ಯರ್ಥಿಗಳಿಗೆ ನೀಡಲಾಗಿರುವ ಅರ್ಹತಾ ಮಾನದಂಡಗಳು

ಒಲಿಂಪಿಕ್​ ಗೇಮ್ಸ್​​ನಲ್ಲಿ(ಸೀನಿಯರ್/ಕ್ಯಾಟಗರಿ-ಎ) ರಾಷ್ಟ್ರವನ್ನು ಪ್ರತಿನಿಧಿಸಿರಬೇಕು.

ಅಥವಾ

ವಿಶ್ವಕಪ್​ನಲ್ಲಿ (ಜೂನಿಯರ್/ಸೀನಿಯರ್/ಯೂತ್​ ಕ್ಯಾಟಗರಿ) ಅಥವಾವಿಶ್ವ ಚಾಂಪಿಯನ್​ಶಿಪ್​​ನಲ್ಲಿ (ಜೂನಿಯರ್/ಸೀನಿಯರ್​ ಕ್ಯಾಟಗರಿ) ಅಥವಾ ಕಾಮನ್​ ವೆಲ್ತ್​ನಲ್ಲಿ (ಸೀನಿಯರ್ ಕ್ಯಾಟಗರಿ) ಅಥವಾ ಏಸಿಯನ್ ಗೇಮ್ಸ್​​ನಲ್ಲಿ (ಸೀನಿಯರ್ ಕ್ಯಾಟಗರಿ) ಕನಿಷ್ಠ 3ನೇ ಸ್ಥಾನದಲ್ಲಿರಬೇಕು.

ವಿದ್ಯಾರ್ಹತೆ: 

ಮಾನ್ಯತೆ ಪಡೆದ ಬೋರ್ಡ್​ನಿಂದ ಕಡ್ಡಾಯವಾಗಿ 12ನೇ ತರಗತಿ ಪಾಸಾಗಿರಬೇಕು.

ಆಯ್ಕೆ ಪ್ರಕ್ರಿಯೆ

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ, ಶೈಕ್ಷಣಿಕ ಅರ್ಹತೆಗಳು ಮತ್ತು ಕ್ರೀಡಾ ಸಾಧನೆಗಳನ್ನು ತೋರಿಸುವ ಸ್ವಯಂ-ದೃಢೀಕರಿಸಿದ ಪ್ರಮಾಣ ಪತ್ರಗಳ ಪ್ರತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಸಹಾಯಕ ಸಿಬ್ಬಂದಿ ಅಧಿಕಾರಿ/ನೇಮಕಾತಿ
ರೈಲ್ವೆ ನೇಮಕಾತಿ ಸೆಲ್, 3 ನೇ ಮಹಡಿ
ನಂ.5, ಡಾ ಪಿವಿ ಚೆರಿಯನ್ ಕ್ರೆಸೆಂಟ್ ರಸ್ತೆ, ಎಗ್ಮೋರ್​
ಚೆನ್ನೈ

ಇವರಿಗೆ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲಾತಿಗಳನ್ನು ಕಳುಹಿಸಬೇಕು.



ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: