• Home
  • »
  • News
  • »
  • jobs
  • »
  • Railway Jobs: SSLC, PUC ಪಾಸಾದವ್ರಿಗೆ ರೈಲ್ವೆ ಇಲಾಖೆಯಲ್ಲಿದೆ ಉದ್ಯೋಗ- ಹುಬ್ಬಳ್ಳಿಯಲ್ಲಿ ಕೆಲಸ

Railway Jobs: SSLC, PUC ಪಾಸಾದವ್ರಿಗೆ ರೈಲ್ವೆ ಇಲಾಖೆಯಲ್ಲಿದೆ ಉದ್ಯೋಗ- ಹುಬ್ಬಳ್ಳಿಯಲ್ಲಿ ಕೆಲಸ

ರೈಲ್ವೆ ಇಲಾಖೆ

ರೈಲ್ವೆ ಇಲಾಖೆ

ಒಟ್ಟು 13 ಕಲ್ಚರಲ್, ಸ್ಕೌಟ್ಸ್​ & ಗೈಡ್ಸ್ ಕೋಟಾ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಡಿಸೆಂಬರ್ 19, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಬೇಕು.

  • News18 Kannada
  • Last Updated :
  • Hubli-Dharwad (Hubli), India
  • Share this:

    South Western Railway Recruitment 2022: ರೈಲ್ವೆ ಇಲಾಖೆಯ ನೌಕರಿ ಹುಡುಕುತ್ತಿರುವವರಿಗೆ ಇಲ್ಲೊಂದು ಗುಡ್​​ನ್ಯೂಸ್(Good news) ಇದೆ. ನೈರುತ್ಯ ರೈಲ್ವೆ (South Western Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಕಲ್ಚರಲ್, ಸ್ಕೌಟ್ಸ್​ & ಗೈಡ್ಸ್ ಕೋಟಾ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಡಿಸೆಂಬರ್ 19, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಬೇಕು.


    ಹುದ್ದೆಯ ಕುರಿತಾದ ಮಾಹಿತಿ ಇಲ್ಲಿದೆ:

    ಸಂಸ್ಥೆ ನೈರುತ್ಯ ರೈಲ್ವೆ
    ಹುದ್ದೆಕಲ್ಚರಲ್, ಸ್ಕೌಟ್ಸ್​ & ಗೈಡ್ಸ್ ಕೋಟಾ ಹುದ್ದೆಗಳು
    ಒಟ್ಟು ಹುದ್ದೆ13
    ಉದ್ಯೋಗದ ಸ್ಥಳಹುಬ್ಬಳ್ಳಿ
    ವೇತನನಿಯಮಾನುಸಾರ

    ಎಷ್ಟೆಷ್ಟು ಹುದ್ದೆಗಳಿವೆ?


    ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))-1
    ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ಕೊಳಲು))-1
    ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)-3
    ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-1)-8


    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ:


    ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))- 12 ನೇ ತರಗತಿ
    ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ಕೊಳಲು))- 10ನೇ ತರಗತಿ
    ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)- 10ನೇ, 12ನೇ ತರಗತಿ
    ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-1)- 10ನೇ ತರಗತಿ, ITI


    ಇದನ್ನೂ ಓದಿ: Government Job: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್​​ನಲ್ಲಿ SSLC ಪಾಸಾದವರಿಗೆ ಉದ್ಯೋಗ, ಸಂಬಳ 47,000


    ವಯೋಮಿತಿ ಎಷ್ಟಿರಬೇಕು?


    ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))- 18ರಿಂದ 30 ವರ್ಷ
    ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ಕೊಳಲು))-18ರಿಂದ 30 ವರ್ಷ
    ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)- 18ರಿಂದ 30 ವರ್ಷ
    ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-1)- 18ರಿಂದ 33 ವರ್ಷ


    ವಯೋಮಿತಿ ಸಡಿಲಿಕೆ:


    ಒಬಿಸಿ ಅಭ್ಯರ್ಥಿಗಳು: 3 ವರ್ಷ
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು- 10 ವರ್ಷ


    ಅರ್ಜಿ ಶುಲ್ಕ ಎಷ್ಟು?


    ಎಸ್​​ಸಿ/ಎಸ್​ಟಿ/ಮಾಜಿ ಸೈನಿಕ/ PWD/ ಮಹಿಳಾ, ಅಲ್ಪಸಂಖ್ಯಾತ & EBC ಅಭ್ಯರ್ಥಿಗಳು- 250 ರೂ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ
    ಪಾವತಿಸುವ ಬಗೆ: IPO


    ಆಯ್ಕೆ ಪ್ರಕ್ರಿಯೆ:


    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Job Search: ಕೇಂದ್ರ ಸರ್ಕಾರಿ ನೌಕರಿ ಬೇಕು ಅಂದ್ರೆ ಈಗಲೇ ಇ-ಮೇಲ್ ಮಾಡಿ, ಬೆಂಗಳೂರಿನಲ್ಲಿ ಉದ್ಯೋಗ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸ್ವಯಂ ದೃಢೀಕರಿಸಿದ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಡಿಸೆಂಬರ್ 19, 2022ಕ್ಕೆ ಮುನ್ನ ಕಳುಹಿಸಬೇಕು.


    ಅಸಿಸ್ಟೆಂಟ್ ಪರ್ಸನಲ್ ಆಫೀಸರ್/Rectt,
    ರೈಲ್ವೆ ನೇಮಕಾತಿ ಸೆಲ್
    ನೈರುತ್ಯ ರೈಲ್ವೆ
    2ನೇ ಮಹಡಿ
    ಹಳೇ ಜಿಎಂ ಕಚೇರಿ ಕಟ್ಟಡ
    ಕ್ಲಬ್ ರೋಡ್
    ಕೇಶ್ವಾಪುರ್
    ಹುಬ್ಬಳ್ಳಿ-580023


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 19/12/2022

    Published by:Latha CG
    First published: