South Eastern Railway Recruitment 2021: ಮಾಸಿಕ ವೇತನ ₹ 34,800, ಆಗ್ನೇಯ ರೈಲ್ವೆಯಲ್ಲಿ ಉದ್ಯೋಗ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸೌತ್ ಈಸ್ಟರ್ನ್ ರೈಲ್ವೆ(ಆಗ್ನೇಯ ರೈಲ್ವೆ) (South Eastern Railway)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 11 ಸೀನಿಯರ್ ಇನ್​ಸ್ಟ್ರಕ್ಟರ್(Senior Instructor) ಹಾಗೂ ಜೂನಿಯರ್ ಇನ್​ಸ್ಟ್ರಕ್ಟರ್(Junior Instructor)​ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ನಾತಕೋತ್ತರ ಪದವಿ(Master's Degree) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆಫ್​ಲೈನ್​(ಪೋಸ್ಟ್​)(Offline) ಮೂಲಕ ನವೆಂಬರ್ 18ರವರೆಗೆ ಅರ್ಜಿ ಹಾಕಬಹುದಾಗಿದೆ. ಅಕ್ಟೋಬರ್ 21ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಗ್ನೇಯ ರೈಲ್ವೆಯ ಅಧಿಕೃತ ವೆಬ್​ಸೈಟ್​ ser.indianrailways.gov.in ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆ ಆಗ್ನೇಯ ರೈಲ್ವೆ
ಹುದ್ದೆಯ ಹೆಸರು ಸೀನಿಯರ್ ಇನ್​ಸ್ಟ್ರಕ್ಟರ್, ಜೂನಿಯರ್ ಇನ್​ಸ್ಟ್ರಕ್ಟರ್
ಒಟ್ಟು ಹುದ್ದೆಗಳು:  11
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ
ಕೆಲಸದ ಸ್ಥಳ ಖರಗ್​ಪುರ
ಸಂಬಳ ಮಾಸಿಕ ₹9,300-34,800
ಅರ್ಜಿ ಸಲ್ಲಿಸುವ ವಿಧಾನ ಆಫ್​ಲೈನ್(ಪೋಸ್ಟಲ್)
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 21/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18/11/2021



ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/11/2021

ಇದನ್ನೂ ಓದಿ:KRCL Recruitment 2021: ಕೊಂಕಣ ರೈಲ್ವೆಯಲ್ಲಿ 139 ಅಪ್ರೆಂಟಿಸ್ ಹುದ್ದೆಗಳು ಖಾಲಿ; BE, B. Tech ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 55 ವರ್ಷ ಇರಬೇಕು.

ವೇತನ:

ಸೀನಿಯರ್ ಇನ್​ಸ್ಟ್ರಕ್ಟರ್ ಹಾಗೂ ಜೂನಿಯರ್ ಇನ್​ಸ್ಟ್ರಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ₹9,300-34,800 ವೇತನ ನೀಡಲಾಗುತ್ತದೆ.



ಉದ್ಯೋಗದ ಸ್ಥಳ:

ಆಯ್ಕೆಯಾದ ಅಭ್ಯರ್ಥಿಯನ್ನು ಪಶ್ಚಿಮ ಬಂಗಾಳದ ಖರಗ್​ಪುರದಲ್ಲಿ ಕೆಲಸಕ್ಕೆ ನೇಮಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


ಇದನ್ನೂ ಓದಿ:Fisheries Department: ತಿಂಗಳಿಗೆ ₹ 58,100 ಸಂಬಳ, 8ನೇ ತರಗತಿ ಪಾಸಾದವರಿಗೆ ಮೀನುಗಾರಿಕಾ ಇಲಾಖೆಯಲ್ಲಿ ಬಂಪರ್ ಉದ್ಯೋಗ

ಅರ್ಜಿ ಸಲ್ಲಿಸುವ ಬಗೆ:

  • ಮೊದಲಿಗೆ ಸೌತ್​ ಈಸ್ಟರ್ನ್ ರೈಲ್ವೆಯ ಅಧಿಕೃತ ವೆಬ್​ಸೈಟ್​ ser.indianrailways.gov.in ಗೆ ಭೇಟಿ ನೀಡಬೇಕು.

  • ಅಲ್ಲಿ ಕಾಣಸಿಗುವ “Recruitment/ Career/ Advertisement menu” ಲಿಂಕ್​ ಮೇಲೆ ಕ್ಲಿಕ್ ಮಾಡಿ.

  • ಖಾಲಿ ಇರುವ ಹುದ್ದೆಗಳ ನೋಟಿಫಿಕೇಶನ್​ಗಾಗಿ ಸರ್ಚ್ ಮಾಡಿ, ಅದರ ಮೇಲೆ ಕ್ಲಿಕ್ ಮಾಡಿ.

  • ಅಧಿಕೃತ ನೋಟಿಫಿಕೇಶನ್​ನ ಲಿಂಕ್​ನ್ನು ಡೌನ್​ಲೋಡ್ ಮಾಡಿಕೊಳ್ಳಿ.

  • ನೋಟಿಫಿಕೇಶನ್​ನಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ.

  • ಕೆಳಗೆ ನೀಡಲಾಗಿರುವ Official Online Apply/ Registration ಲಿಂಕ್ ಮೇಲೆ ಕ್ಲಿಕ್ ಮಾಡಿ.

  • ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ

  • ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾದ ಫಾರ್ಮ್ಯಾಟ್ ಹಾಗೂ ಸೈಜಿನಲ್ಲಿ ಅಪ್​ಲೋಡ್ ಮಾಡಿ.

  • ಕೊನೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಸಬ್​ಮಿಟ್ ಕೊಡಿ.

  • ಬಳಿಕ ಸಂಸ್ಥೆ ಅರ್ಜಿ ಶುಲ್ಕ ಕೇಳಿದ್ದರೆ, ಪಾವತಿಸಿ.

  • ಕೊನೆಯಲ್ಲಿ ಅರ್ಜಿಯನ್ನು ಸಬ್​ಮಿಟ್ ಮಾಡಿ, ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: