ಅಮೆರಿಕನ್ ಮೂಲದ ಪ್ರಖ್ಯಾತ ಸಾಫ್ಟ್ವೇರ್ ಮಲ್ಟಿ ನ್ಯಾಷನಲ್ ಕಂಪನಿ ಅಡೋಬ್ನಲ್ಲಿ (Adobe) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1981 ಹುದ್ದೆಗಳಿಗೆ ಈ ವರೆಗೆ ಅರ್ಜಿ ಕರೆಯಲಾಗಿದ್ದು, ಬೆಂಗಳೂರು ಸೇರಿದಂತೆ ದೇಶದ ವಿವಿಧ ಮೂಲೆಗಳಲ್ಲಿ ಅರ್ಜಿಗೆ ಆಹ್ವಾನಿಸಿದೆ. ಐಟಿ ಕ್ಷೇತ್ರದಲ್ಲಿ ಡಿಪ್ಲೊಮ, ಡಿಗ್ರಿ, ಸ್ನಾತಕೋತ್ತರ ಪದವಿ ಪಾಸ್ ಮಾಡಿದವರು ಹುದ್ದೆಗಳ ಕುರಿತು, ಹುದ್ದೆಗಳ ಲೊಕೇಶನ್ ಕುರಿತು ಮಾಹಿತಿ ತಿಳಿದು ಅರ್ಜಿ ಹಾಕಬಹುದು.
ಖಾಸಗಿ ಅದರಲ್ಲೂ ಐಟಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ ಆಗಿದೆ. ಅಭ್ಯರ್ಥಿಗಳು ಲೋಕೇಶನ್ವಾರು / ಪಾರ್ಟ್ ಟೈಮ್ / ಫುಲ್ ಟೈಮ್ ಹುದ್ದೆಗಳನ್ನು ಹುಡುಕಿ ಅರ್ಜಿ ಸಲ್ಲಿಬಹುದಾಗಿದೆ.
ಹುದ್ದೆಗಳ ವಿವರ |
ಮಾಹಿತಿ |
ಸಂಸ್ಥೆ |
ಅಡೋಬ್ |
ಹುದ್ದೆಗಳು |
ಐಟಿ ಕ್ಷೇತ್ರದ ವಿವಿಧ ಹುದ್ದೆಗಳು |
ಒಟ್ಟು ಹುದ್ದೆ |
1981 |
ವಿದ್ಯಾರ್ಹತೆ |
ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ |
ಅರ್ಜಿ ಸಲ್ಲಿಕೆ |
ಆನ್ಲೈನ್ |
ವಿದ್ಯಾರ್ಹತೆ |
ನಿರ್ದಿಷ್ಟಪಡಿಸಿದ ಹುದ್ದೆಗೆ ಅರ್ಹ ಪದವಿ |
ಉದ್ಯೋಗ ಸ್ಥಳ |
ಭಾರತದಾದ್ಯಂತ |
ಹುದ್ದೆಗಳ ವಿವರ
ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್- ಸೊಲೂಷನ್ ಕನ್ಸಲ್ಟಂಟ್- ರಿಸರ್ಚ್ ಇಂಜಿನಿಯರ್ -ML, 3D ಗ್ರಾಫಿಕ್ಸ್- ಸೇಲ್ಸ್, ಸೊಲೂಷನ್ ಸ್ಪೆಷಿಯಲಿಸ್ಟ್- ಎಂಜಿಆರ್, ಸಾಫ್ಟ್ವೇರ್ ಡೆವಲಪ್ಮೆಂಟ್- ಸೀನಿಯರ್ ಪ್ರಾಡಕ್ಟ್ ಮ್ಯಾನೇಜರ್- ಕಂಪ್ಯೂಟರ್ ಸೈಂಟಿಸ್ಟ್- ಸೀನಿಯರ್ ಪ್ರಾಡಕ್ಟ್ ಮ್ಯಾನೇಜರ್, ಡಾಕ್ಯುಮೆಂಟ್ ಕ್ಲೌಡ್ ಕೋರ್ ಎಐ- ಪ್ರಾಡಕ್ಟ್ ಮ್ಯಾನೇಜರ್- ಟೆಕ್ನಿಕಲ್ ಸಪೋರ್ಟ್ ಇಂಜಿನಿಯರ್- ಸೀನಿಯರ್ ಸಿ++ ಸಾಫ್ಟ್ವೇರ್ ಇಂಜಿನಿಯರ್, ಫೋಟೋಶಾಪ್- ಟೆಕ್ನಿಕಲ್ ಅಕೌಂಟ್ ಮ್ಯಾನೇಜರ್- ಪಾಟ್ನರ್ ಸೇಲ್ಸ್ ಅಕೌಂಟ್ ಮ್ಯಾನೇಜರ್- ಸೀನಿಯರ್ ಡೆವಲಪರ್ ಅಡ್ವೋಕೇಟ್- ಡೆವಲಪರ್ ರಿಲೇಷನ್ಸ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ https://adobe.wd5.myworkdayjobs.com/external_experienced
ಅರ್ಜಿ ಸಲ್ಲಿಸುವ ವಿಧಾನ
https://adobe.wd5.myworkdayjobs.com/external_experienced ಈ ವೆಬ್ಸೈಟ್ಗೆ ಭೇಟಿ ನೀಡಿ
-ಲಿಂಕ್ ಓಪನ್ ಆದ ಬಳಿಕ ಸ್ಥಳಾಧರಿತ, ಪಾರ್ಟ್ ಟೈಮ್, ಫುಲ್ ಟೈಮ್ ಹುದ್ದೆಗಳನ್ನು ಹುಡುಕಬಹುದು.
ಇದನ್ನು ಓದಿ: ತುಮಕೂರು ಕೋರ್ಟ್ನಲ್ಲಿ 51 ಹುದ್ದೆ ನೇಮಕಾತಿ; ಎಸ್ಎಸ್ಎಲ್ಸಿ ಆಗಿದ್ರೆ ಸಾಕು
-ಹುದ್ದೆ ಲಭ್ಯತೆ ಆಧಾರತದ ಮೇಲೆ ಅಭ್ಯರ್ಥಿಗಳು ಮುಂದುವರೆಯಬಹುದಾಗಿದ
ಅಭ್ಯರ್ಥಿಗಳು ನಿಗದಿಪಡಿಸಿದ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆ ಹೊರಡಿಸಿರುವ ಅಧಿಸೂಚನೆ ಮತ್ತು ಅರ್ಹತಾ ಮಾನದಂಡವನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ಇದನ್ನು ಓದಿ: ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ
-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.
-ಬಳಿಕ ಅರ್ಜಿ ಸಲ್ಲಿಸಲು ಬಯಸಿದರೆ ಅಪ್ಲೇ ಎಂಬಲ್ಲಿ ಕ್ಲಿಕ್ ಮಾಡಿ ಮುಂದುವರೆಯಿರು.
ನಂತರ ತೆರೆಯುವ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ, ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ