Jobs in Sirsi: ಶಿರಸಿಯ ಕೆಡಿಸಿಸಿ ಬ್ಯಾಂಕ್​ನಲ್ಲಿ ಹುದ್ದೆ; ಅರ್ಜಿ ಸಲ್ಲಿಕೆಗೆ ಇನ್ನೆರಡೇ ದಿನ ಬಾಕಿ

ಕಿರಿಯ ಗುಮಾಸ್ತರು ಮತ್ತು ಕಿರಿಯ ಮೇಲ್ವಿಚಾರಕರ  ಹುದ್ದೆಗಳು ಸೇರಿದಂತೆ ಒಟ್ಟು 41 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:

    ಉತ್ತರ ಕನ್ನಡದ ಶಿರಸಿಯ ಕೆನರಾ ಡಿಸ್ಟ್ರಿಕ್ಟ್​ ಸೆಂಟ್ರಲ್​ ಕೋ-ಒಪರೇಟಿವ್​ ಬ್ಯಾಂಕ್​ ಲಿವಿಟೆಡ್​​​ನಲ್ಲಿ (Kanara District Central Cooperative Bank Ltd) ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಕಿರಿಯ ಗುಮಾಸ್ತರು ಮತ್ತು ಕಿರಿಯ ಮೇಲ್ವಿಚಾರಕರ (Junior Clerk)  ಹುದ್ದೆಗಳು ಸೇರಿದಂತೆ ಒಟ್ಟು 41 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಿರಸಿಯಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 10 ಆಗಿದೆ. ಈ ಹುದ್ದೆಗೆ ಅರ್ಜಿಯನ್ನು ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. 































    ಹುದ್ದೆಯ ಮಾಹಿತಿಹುದ್ದೆ ವಿವರ
    ಸಂಸ್ಥೆಕೆನರಾ ಡಿಸ್ಟ್ರಿಕ್ಟ್​ ಸೆಂಟ್ರಲ್​ ಕೋ-ಒಪರೇಟಿವ್​ ಬ್ಯಾಂಕ್​ ಲಿವಿಟೆಡ್
    ಹುದ್ದೆಯ ಹೆಸರುಕಿರಿಯ ಗುಮಾಸ್ತರು ಮತ್ತು ಕಿರಿಯ ಮೇಲ್ವಿಚಾರಕರು
    ಹುದ್ದೆಗಳ ಸಂಖ್ಯೆ41
    ಕಾರ್ಯ ನಿರ್ವಹಣೆ ಸ್ಥಳಶಿರಸಿ, ಉತ್ತರ ಕನ್ನಡ
    ವೇತನ27650-52650 ರೂ ಮಾಸಿಕ


    ಶೈಕ್ಷಣಿಕ ಅರ್ಹತೆ:
    ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಪದವಿಯಲ್ಲಿ ಶೇ 60ರಷ್ಟು ಗುಣಾಂಕ ಪಡೆದ ಪದವೀಧರರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
    ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್​ ಆಪರೇಟಿಂಗ್​ ಮತ್ತು ಅಪ್ಲಿಕೇಶನ್​ ಜ್ಞಾನ ಹೊಂದಿರಬೇಕು.


    ವಯೋಮಿತಿ: ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.


    ಇದನ್ನು ಓದಿ: ದೂರಸಂಪರ್ಕ ಇಲಾಖೆಯಲ್ಲಿ ಡಿಗ್ರಿ ಆದವರಿಗೆ ಉದ್ಯೋಗಾವಕಾಶ; ತಿಂಗಳಿಗೆ 75 ಸಾವಿರ ರೂ ವೇತನ


    ವಯೋಮಿತಿ ಸಡಿಲಿಕೆ:
    ಪ.ಜಾ, ಪ.ಪಂ ಮತ್ತು ಪ್ರವರ್ಗ-1 ಅಭ್ಯರ್ಥಿಗಳು: 05 ವರ್ಷಗಳು
    ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 03 ವರ್ಷಗಳು


    ಅರ್ಜಿ ಸಲ್ಲಿಕೆ ವಿಧಾನ: ಆಫ್​ಲೈನ್​


    ಅರ್ಜಿ ಶುಲ್ಕ:
    ಪ.ಜಾ, ಪ.ಪಂ ಮತ್ತು ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು: 295 ರೂ.
    ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 590 ರೂ


    ಅರ್ಜಿ ಶುಲ್ಕ ಪಾವತಿ ವಿಧಾನ: ಕೆಡಿಸಿಸಿ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಚಾಲ್ತಿ ಖಾತೆಗೆ 122000553848 ಜಮಾಪಡಿಸಿ, ಚಲನ್ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.


    ಅರ್ಜಿ ಪಡೆಯುವ ವಿಧಾನ
    ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಡಿಸಿಸಿ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ, ರೂ. 59 ಪಾವತಿಸಿ ಅರ್ಜಿ ನಮೂನೆಯನ್ನು ಪಡೆದು ನಂತರ ಅದನ್ನು ಸ್ವ-ಹಸ್ತಾಕ್ಷರದಿಂದ ಭರ್ತಿ ಮಾಡಿ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಲಕೋಟೆಯ ಮೇಲೆ “ಕಿರಿಯ ಗುಮಾಸ್ತ/ಕಿರಿಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ” ಅಂತಾ ಸ್ಪಷ್ಟವಾಗಿ ನಮೂದಿಸಿ ಕಛೇರಿಯ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಕಛೇರಿಗೆ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು


    ಇದನ್ನು ಓದಿ: ಬಿಇಎಲ್​ನಲ್ಲಿ 50 ಅಪ್ರೆಂಟಿಸ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಲಿಖಿತ ಪರೀಕ್ಷೆ ಇಲ್ಲ


    ಅರ್ಜಿ ಸಲ್ಲಿಸುವ ವಿಳಾಸ:
    ವ್ಯವಸ್ಥಾಪಕ ನಿರ್ದೇಶಕರು, ಕೆನರಾ ಡಿ.ಸಿ.ಸಿ ಬ್ಯಾಂಕ್ ಲಿ.,
    ಪ್ರಧಾನ ಕಛೇರಿ, ಹೊಸ ಮಾರುಕಟ್ಟೆ, ಶಿರಸಿ – 581 402 (ಉ.ಕ)


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19 ಆಗಸ್ಟ್​​​ 2022
    ಅರ್ಜಿ ಫಾರ್ಮ್​​ ಪಡೆಯಲು ಕೊನೆಯ ದಿನಾಂಕ: 8 ಸೆಪ್ಟೆಂಬರ್​ 2022
    ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್​ 2022


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ವೆಬ್‌ಸೈಟ್: www.kanaradccbank.com


    ಅರ್ಜಿ ಸಲ್ಲಿಕೆ ಪ್ರಕ್ರಿಯೆ


    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ


    - ನಿಗದಿತ ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ


    ಮೀಸಲಾತಿ ಪ್ರಮಾಣ ಸೇರಿದಂತೆ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಗತ್ಯ ಪ್ರಮಾಣ ಪತ್ರಗಳು ಲಗತ್ತಿಸಿ ಮೇಲಿನ ವಿಳಾಸಕ್ಕೆ ಸಲ್ಲಿಸಿ.

    Published by:Seema R
    First published: