District Court Recruitment: ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ; ಪಿಯುಸಿ ಆಗಿದ್ರೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 27 ಆಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಪಾವತಿ ಮಾಡಲು ಕಡೆಯ ದಿನಾಂಕ ಜುಲೈ 28 ಆಗಿದೆ

ಶಿವಮೊಗ್ಗ ಜಿಲ್ಲಾ ನ್ಯಾಯಾಲಯ

ಶಿವಮೊಗ್ಗ ಜಿಲ್ಲಾ ನ್ಯಾಯಾಲಯ

  • Share this:
    ಶಿವಮೊಗ್ಗ​ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ (Shimoga District Court) ಘಟಕದ ವಿವಿಧ ಕೋರ್ಟ್​ನಲ್ಲಿ ಟೈಪಿಸ್ಟ್​ (Typist) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನಾಲ್ಕು ಶೀಘ್ರ ಲಿಪಿಕಾರ ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಆನ್​ಲೈನ್​ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 27 ಆಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಪಾವತಿ ಮಾಡಲು ಕಡೆಯ ದಿನಾಂಕ ಜುಲೈ 28 ಆಗಿದೆ



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಶಿವಮೊಗ್ಗ ಜಿಲ್ಲಾ ನ್ಯಾಯಾಲಯ
    ಹುದ್ದೆಶೀಘ್ರ ಲಿಪಿಗಾರ
    ಹುದ್ದೆಗಳ ಸಂಖ್ಯೆ4
    ಕಾರ್ಯ ನಿರ್ವಹಣೆ ಸ್ಥಳಶಿವಮೊಗ್ಗ
    ವೇತನ27650-52650 ರೂ ಮಾಸಿಕ

    ವಿದ್ಯಾರ್ಹತೆ
    ಪದವಿ ಪೂರ್ವ ಶಿಕ್ಷಣ ಪರೀಕ್ಷ ಮಂಡಳಿಯು ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮಾ ಕಮರ್ಷಿಯಲ್​ ಪ್ರಾಕ್ಟೀಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಅಭ್ಯರ್ಥಿಯು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಇಂಗ್ಲಿಷ್​ ಟೈಪಿಂಗ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕಲು.

    ವಯಸ್ಸಿನ ಮಿತಿ: ಶಿವಮೊಗ್ಗ ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯುಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

    ವಯಸ್ಸಿನ ಸಡಿಲಿಕೆ:
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಪ್ರವರ್ಗ 1 ಅಭ್ಯರ್ಥಿಗಳು: 05 ವರ್ಷಗಳು
    ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 03 ವರ್ಷಗಳು

    ಇದನ್ನು ಓದಿ: ಬೀದರ್​ ಜಿಲ್ಲಾ ನ್ಯಾಯಾಲಯದಲ್ಲಿ 32 ಹುದ್ದೆಗಳಿಗೆ ನೇಮಕಾತಿ; ಪಿಯುಸಿ ಆದವರಿಗೆ ಅವಕಾಶ

    ಅರ್ಜಿ ಶುಲ್ಕ:
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಹಾಗೂ ಪ್ರವರ್ಗ 1 ಅಭ್ಯರ್ಥಿಗಳು: ಶುಲ್ಕ ವಿನಾಯಿತಿ ನೀಡಲಾಗಿದೆ.
    ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 100 ರೂ
    ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 100 ರೂ

    ಪಾವತಿ ವಿಧಾನ: ಆನ್‌ಲೈನ್ ಅಥವಾ ಚಲನ್

    ಆಯ್ಕೆ ಪ್ರಕ್ರಿಯೆ:
    ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್​ 29, 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಜುಲೈ 2022
    ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 28 ಜುಲೈ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: districts.ecourts.gov.in

    ಇದನ್ನು ಓದಿ: ಏರ್​ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ನೇಮಕಾತಿ; ಪಿಯುಸಿ ಆದವರಿಗೆ ಅವಕಾಶ

    ಅರ್ಜಿ ಸಲ್ಲಿಕೆ ವಿಧಾನ (How To Apply)

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: