• Home
  • »
  • News
  • »
  • jobs
  • »
  • Government Jobs: ಜನವರಿಯಿಂದ ಜೂನ್​ವರೆಗೆ ಯಾವೆಲ್ಲಾ ಸರ್ಕಾರಿ ಹುದ್ದೆಗಳ ಪರೀಕ್ಷೆಗಳಿವೆ ನೋಡಿ

Government Jobs: ಜನವರಿಯಿಂದ ಜೂನ್​ವರೆಗೆ ಯಾವೆಲ್ಲಾ ಸರ್ಕಾರಿ ಹುದ್ದೆಗಳ ಪರೀಕ್ಷೆಗಳಿವೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗವನ್ನು ಅರಸುತ್ತಾ ಇರುವವರಿಗೆ ಗುಡ್​ನ್ಯೂಸ್​. ಯಾಕಂದ್ರೆ ಹೊಸ ವರ್ಷದ ಸಮಯದಲ್ಲಿ ವಿನೂತನ ಜಾಬ್​ ಆಫರ್​ಗಳು ಬಂದಿದೆ, ಹಾಗಾದ್ರೆ ಯಾವಗ, ಎಲ್ಲಿ ಪರೀಕ್ಷೆಗಳು ನಡೆಯಲಿವೆ ತಿಳಿಯಿರಿ ಈ ಲೇಖನದ ಮೂಲಕ.

  • Trending Desk
  • 5-MIN READ
  • Last Updated :
  • Share this:

ನಮಗೆಲ್ಲಾ ಗೊತ್ತಿರುವಂತೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಎಸ್ಎಸ್‌ಸಿ(SSC), ಐಬಿಪಿಎಸ್(IBPS), ಆರ್‌ಆರ್‌‌ಬಿ(RRB), ಯುಪಿಎಸ್‌ಸಿ(UPSC) ಮತ್ತು ಇತರ ಪರೀಕ್ಷೆಗಳನ್ನು ನಡೆಸುತ್ತವೆ. ಅನೇಕ ವರ್ಷಗಳಿಂದ ವಿದ್ಯಾರ್ಥಿಗಳು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿರುತ್ತಾರೆ ಅಂತ ಹೇಳಬಹುದು.ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬಯಸುವ ಅಭ್ಯರ್ಥಿಗಳು ಪರೀಕ್ಷೆಯ ದಿನಾಂಕದ ಅಧಿಕೃತ ಪ್ರಕಟಣೆಗಾಗಿ ತುಂಬಾನೇ  ಕಾತುರತೆಯಿಂದ ಕಾಯುತ್ತಿರುತ್ತಾರೆ ಅಂತ ಹೇಳಬಹುದು. ಪರೀಕ್ಷೆಯ ದಿನಾಂಕ ಯಾವಾಗ ಬಿಡುಗಡೆ ಮಾಡುತ್ತಾರೆ ಅಂತ ಕಾಯುವ ವಿದ್ಯಾರ್ಥಿಗಳು (Students) ಅನಿರೀಕ್ಷಿತ ತೊಂದರೆಗಳನ್ನು ತಪ್ಪಿಸಲು ಅವರ ತಯಾರಿಯ ವೇಳಾಪಟ್ಟಿಯನ್ನು (Timetable) ಯೋಜಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಸಮಯವನ್ನು ವಿಭಜಿಸುವುದು ಉತ್ತಮ ಉಪಾಯವಾಗಿದೆ.


ಪರೀಕ್ಷೆಯ ದಿನಾಂಕಗಳನ್ನು ತಿಳಿದುಕೊಳ್ಳುವುದು ಪರೀಕ್ಷೆಗೆ ಮುಂಚಿತವಾಗಿ ಹೇಗೆ ತಯಾರಿ ನಡೆಸಬೇಕು ಮತ್ತು ಪರೀಕ್ಷೆಗೆ ಇನ್ನೆಷ್ಟು ದಿನಗಳು ಬಾಕಿ ಇವೆ ಎಂದು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ. 2023 ರಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಎಲ್ಲಾ ಅವಕಾಶಗಳ ಬಗ್ಗೆ ತಿಳಿಯಲು ಮುಂಬರುವ ಸರ್ಕಾರಿ ಪರೀಕ್ಷೆಗಳ ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಇಂದೇ ತಯಾರಿಯನ್ನು ಪ್ರಾರಂಭಿಸಿ.


ಜನವರಿ 2023


  • ರಾಜಸ್ಥಾನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪದವೀಧರರಿಗೆ: 6 ರಿಂದ 9 ಜನವರಿ 2023

  • ಗುಜರಾತ್ ಪಂಚಾಯತ್ ಸರ್ವೀಸ್ ಸೆಲೆಕ್ಷನ್ ಬೋರ್ಡ್ (ಜಿಪಿಎಸ್‌ಎಸ್‌ಬಿ) ಜೂನಿಯರ್ ಕ್ಲರ್ಕ್: 8 ಜನವರಿ 2023

  • ಆಂಧ್ರಪ್ರದೇಶ ಲೋಕಸೇವಾ ಆಯೋಗ (ಎಪಿಪಿಎಸ್‌ಸಿ) ಗ್ರೂಪ್ 1: 8 ಜನವರಿ 2023

  • ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ (ಟಿಎಸ್‌ಪಿಎಸ್‌ಸಿ) ವಿಸ್ತರಣಾ ಅಧಿಕಾರಿ: 8 ಜನವರಿ 2023


    Which govt exam conduct every year, 2023 New Job offers, New year Government job, What are the government exams in 2022, What is the next government exam, Will there be any exam in 2022, Kannada News, Karnataka News, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಆಯೋಜಿಸಲಾದ ಪರೀಕ್ಷೆಗಳು ಯಾವುದು, 2023ರ ಉದ್ಯೋಗದ ಆಫರ್​ಗಳು, ಹೊಸ ವರ್ಷದ ವಿನೂತನ ಜಾಬ್​ ಆಫರ್ಸ್​, ಯಾವೆಲ ಉದ್ಯೋಗದ ಪರೀಕ್ಷೆಗಳು ನಡೆಯಲಿವೆ
    ಸಾಂದರ್ಭಿಕ ಚಿತ್ರ

  • ರಾಜಸ್ಥಾನ ಲೋಕಸೇವಾ ಆಯೋಗ (ಆರ್‌ಪಿಎಸ್‌ಸಿ) 2ನೇ ದರ್ಜೆ: 8 ರಿಂದ 14 ಜನವರಿ 2023

  • ಎಸ್ಎಸ್‌ಸಿ ಜಿಡಿ ಕಾನ್ಸ್ಟೇಬಲ್: ಜನವರಿ 10 ರಿಂದ 14 ಫೆಬ್ರವರಿ 2023

  • ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಕಲಾ ಸಂಸ್ಕೃತಿ ಅಧಿಕಾರಿ: 19 ಜನವರಿ 21, 2023

  • ಕೇರಳ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಿರಿಯ ಎಂಜಿನಿಯರ್ (ಜೆಇ): 21 ಜನವರಿ 2023

  • ಕೇರಳ ರಾಜ್ಯ ಅರ್ಹತಾ ಪರೀಕ್ಷೆ (ಎಸ್‌ಇಟಿ): 22 ಜನವರಿ 2023


ಫೆಬ್ರವರಿ 2023

  • ಗೇಟ್ 2023: 4, 5, 11 ಮತ್ತು 12 ಫೆಬ್ರವರಿ 2023

  • ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಜೆಎಸ್ಎಸ್‌ಸಿ) ಮುನ್ಸಿಪಲ್ ಸರ್ವೀಸಸ್: 5 ಫೆಬ್ರವರಿ 2023

  • ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಜೆಎಸ್ಎಸ್‌ಸಿ) ಸಿಜಿಎಲ್: 12 ಫೆಬ್ರವರಿ 2023

  • ಎಸ್‌ಬಿಐ ಸ್ಪೆಷಲಿಸ್ಟ್ ಆಫೀಸರ್ (ಎಸ್ಒ): ಇನ್ನೂ ದಿನಾಂಕ ಪ್ರಕಟಿಸಿಲ್ಲ


ಮಾರ್ಚ್ 2023

  • ರಾಜಸ್ಥಾನ ಲೋಕಸೇವಾ ಆಯೋಗ (ಆರ್‌ಪಿಎಸ್‌ಸಿ) ಔದ್ಯೋಗಿಕ ಚಿಕಿತ್ಸಕ: 19 ಮಾರ್ಚ್ 2023

  • ತ್ರಿಪುರಾ ಲೋಕಸೇವಾ ಆಯೋಗ (ಟಿಪಿಎಸ್‌ಸಿ) ಪರ್ಸನಲ್ ಅಸಿಸ್ಟೆಂಟ್: 26 ಮಾರ್ಚ್ 2023


ಏಪ್ರಿಲ್ 2023

  • ಮಧ್ಯಪ್ರದೇಶ ರಾಜ್ಯ ಅರ್ಹತಾ ಪರೀಕ್ಷೆ (ಎಂಪಿ-ಎಸ್‌ಇಟಿ): 9 ಏಪ್ರಿಲ್ 2023

  • ರಾಜಸ್ಥಾನ ಲೋಕಸೇವಾ ಆಯೋಗ (ಆರ್‌ಪಿಎಸ್‌ಸಿ) ಹಿರಿಯ ಪಿಇಟಿ: 30 ಏಪ್ರಿಲ್ 2023

  • ರಾಜಸ್ಥಾನ ಲೋಕಸೇವಾ ಆಯೋಗ (ಆರ್‌ಪಿಎಸ್‌ಸಿ) ಕಾರ್ಯನಿರ್ವಾಹಕ ಅಧಿಕಾರಿ: 30 ಏಪ್ರಿಲ್ 2023


ಮೇ 2023

ಜೂನ್ 2023

  • ರಾಜಸ್ಥಾನ ಅಸಿಸ್ಟೆಂಟ್ ಟೌನ್ ಪ್ಲಾನರ್: 16 ಜೂನ್ 2023

  • ರಾಜಸ್ಥಾನ ಲೋಕಸೇವಾ ಆಯೋಗ (ಆರ್‌ಪಿಎಸ್‌ಸಿ) ಆಹಾರ ಸುರಕ್ಷತಾ ಅಧಿಕಾರಿ: ಜೂನ್ 2023 (ತಾತ್ಕಾಲಿಕ)


2023 ರಲ್ಲಿ ನೀವು ಸರ್ಕಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಮಗೆ ಉತ್ತಮ ಅವಕಾಶವಿದೆ, ಏಕೆಂದರೆ ಈ ವರ್ಷ ಅನೇಕ ಪರೀಕ್ಷೆಗಳಿವೆ. ನೀವು ಆಯ್ಕೆ ಮಾಡಿದ ವೃತ್ತಿಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ನಿಮ್ಮ ತಯಾರಿಯನ್ನು ಸಾಧ್ಯವಾದಷ್ಟು ಬೇಗನೇ ಪ್ರಾರಂಭಿಸಿ.

First published: