Jobs in Bengaluru: ಬೆಂಗಳೂರಲ್ಲಿ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ: ಕೂಡಲೇ ಅರ್ಜಿ ಸಲ್ಲಿಸಿ

ದ್ವಿತೀಯ ದರ್ಜೆ ಸಹಾಯಕರು ಮತ್ತು ವಸೂಲಾತಿ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಪದವೀಧರರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ. ಮಹಾಲಕ್ಷ್ಮೀಪುರ ಶ್ರೀ ವಾಸವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಬೆಂಗಳೂರು, ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರು ಮತ್ತು ವಸೂಲಾತಿ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

ಸಂಸ್ಥೆಯ ಹೆಸರು:  ಮಹಾಲಕ್ಷ್ಮೀಪುರ ಶ್ರೀ ವಾಸವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ
ಹುದ್ದೆಯ ಹೆಸರು:  ದ್ವಿತೀಯ ದರ್ಜೆ ಸಹಾಯಕರು, ವಸೂಲಾತಿ ಸಿಬ್ಬಂದಿ
ಹುದ್ದೆಗಳ ಸಂಖ್ಯೆ:  ನಿಗದಿಪಡಿಸಿಲ್ಲ
ಉದ್ಯೋಗ ಸ್ಥಳ: ಬೆಂಗಳೂರು























ಅರ್ಹತೆದ್ವಿತೀಯ ದರ್ಜೆ ಸಹಾಯಕರ ಹುದ್ದೆವಸೂಲಾತಿ ಸಿಬ್ಬಂದಿ ಹುದ್ದೆ
ಶಿಕ್ಷಣಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಕಾಂ, ಬಿಬಿಎ, ಮತ್ತು ಬಿಬಿಎಂ ಪದವಿ ಅಥವಾ ಮೇಲ್ಪಟ್ಟ ಪದವಿಯನ್ನು ಪಡೆದಿರಬೇಕು.ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಮೇಲ್ಪಟ್ಟ ಪದವಿಯನ್ನು ಪಡೆದಿರಬೇಕು.
ಕೌಶಲಗಳುಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಓದುವ ಹಾಗೂ ಬರೆಯುವ ಕ್ಷಮತೆ ಇರತಕ್ಕದ್ದು ಹಾಗೂ ಕಂಪ್ಯೂಟರ್ ಅನುಭವ ಇರತಕ್ಕದ್ದು.ಕಂಪ್ಯೂಟರ್ ಅನುಭವ ಹೊಂದಿರತಕ್ಕದ್ದು.
ವಯೋಮಿತಿ35 ವರ್ಷಗಳನ್ನು ಮೀರಿರಬಾರದುಗರಿಷ್ಠ 35 ವರ್ಷಗಳ ಒಳಗಿರಬೇಕು.

ಅರ್ಜಿ ಸಲ್ಲಿಕೆ ವಿಧಾನ: ವಸೂಲಾತಿ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ದ್ವಿಚಕ್ರವಾಹನ ಚಾಲಾಯಿಸುವ ಡ್ರೈವಿಂಗ್ ಲೈಸನ್ಸ್‌ ಹೊಂದಿರಬೇಕು. ಇವುಗಳ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ತೇರ್ಗಡೆಯಾದ ವಿದ್ಯಾರ್ಹತೆ ಮತ್ತು ಅನುಭವ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಸ್ವಿವಿವರಗಳೊಂದಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ಇದನ್ನೂ ಓದಿ: Govt Jobs: ಕೋಲಾರ, ಗದಗ, ಚಾಮರಾಜನಗರದಲ್ಲಿ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಕೊನೆ ದಿನ ಸನ್ನಿಹಿತ

 ಅರ್ಜಿ ಸಲ್ಲಿಸಬೇಕಾದ ವಿಳಾಸ : ಕಾರ್ಯದರ್ಶಿ ರವರು, ಮಹಾಲಕ್ಷ್ಮೀಪುರ ಶ್ರೀ ವಾಸವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಮಹಾಲಕ್ಷ್ಮೀ ಬಡಾವಣೆ, ಬೆಂಗಳೂರು - 560086.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-08-2022

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ವಿದ್ಯಾರ್ಹತೆ ದಾಖಲೆ
ಕಾರ್ಯಾನುಭವ ದಾಖಲೆ
ಪಾಸ್‌ಪೋರ್ಟ್‌ ಫೋಟೋ
ಇತರೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
Published by:Kavya V
First published: