SEBI Recruitment 2022: ಸೆಕ್ಯುರಿಟಿ & ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (The Security and Exchange Board of India- SEBI) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 120 ಆಫೀಸರ್ ಗ್ರೇಡ್ ಎ (ಅಸಿಸ್ಟೆಂಟ್ ಮ್ಯಾನೇಜರ್-Assistant Manager) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ www.sebi.gov.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಸೆಕ್ಯುರಿಟಿ & ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ- SEBI |
ಹುದ್ದೆಯ ಹೆಸರು |
ಆಫೀಸರ್ ಗ್ರೇಡ್ ಎ |
ಒಟ್ಟು ಹುದ್ದೆಗಳು |
120 |
ವಿದ್ಯಾರ್ಹತೆ |
ಬಿಇ, ಬಿ.ಟೆಕ್, ಎಲ್ಎಲ್ಬಿ, ಸಿಎ, ಎಂಎಸ್ಸಿ, ಎಂಎ, ಎಂಕಾಂ, ಎಂಸಿಎ, ಪದವಿ, ಸ್ನಾತಕೋತ್ತರ ಪದವಿ |
ಉದ್ಯೋಗದ ಸ್ಥಳ |
ಭಾರತದಲ್ಲಿ ಎಲ್ಲಿ ಬೇಕಾದರೂ |
ವೇತನ |
ಮಾಸಿಕ ₹ 28,150-55,600 |
ಅರ್ಜಿ ಸಲ್ಲಿಕೆ ಬಗೆ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
05/01/2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
24/01/2022 |
ಹುದ್ದೆಯ ಮಾಹಿತಿ:
ಜನರಲ್ -80
ಲೀಗಲ್-16
ಇನ್ಫರ್ಮೇಶನ್ ಟೆಕ್ನಾಲಜಿ-14
ರಿಸರ್ಚ್-07
ಅಧಿಕೃತ ಭಾಷೆ-03
ಒಟ್ಟು 130 ಹುದ್ದೆಗಳು
ಇದನ್ನೂ ಓದಿ: HALನಲ್ಲಿ ಖಾಲಿ ಇರುವ 150 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇವತ್ತೇ ಕೊನೆ ದಿನ, ಈಗಲೇ Apply ಮಾಡಿ
ವಿದ್ಯಾರ್ಹತೆ:
ಆಫೀಸರ್ ಗ್ರೇಡ್ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ ಬಿಇ, ಬಿ.ಟೆಕ್, ಎಲ್ಎಲ್ಬಿ, ಸಿಎ, ಎಂಎಸ್ಸಿ, ಎಂಎ, ಎಂಕಾಂ, ಎಂಸಿಎ, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24/01/2022
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ/EWS- 1000 ರೂ.
SC/ST/PWD-100 ರೂ.
ವಯೋಮಿತಿ:
ಆಫೀಸರ್ ಗ್ರೇಡ್ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷ ಮೀರಿರಬಾರದು.
ಉದ್ಯೋಗದ ಸ್ಥಳ:
ಆಫೀಸರ್ ಗ್ರೇಡ್ ಎ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.
ಇದನ್ನೂ ಓದಿ: Karnataka Jobs: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 1419 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 1,41,300
ವೇತನ:
ಆಫೀಸರ್ ಗ್ರೇಡ್ ಎ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 28,150-55,600 ವೇತನ ನೀಡಲಾಗುತ್ತದೆ.
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಪರೀಕ್ಷೆ(ಹಂತ-1,2)
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ