SEBI Recruitment 2021: ಸೆಬಿಯಲ್ಲಿ ಫೈನಾನ್ಸಿಯಲ್ ಕಂಟೆಂಟ್ ರೈಟರ್ ಹುದ್ದೆ ಖಾಲಿ, ತಿಂಗಳಿಗೆ ₹ 45,000 Stipend

SEBI Recruitment 2021: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು SEBI ತನ್ನ ಅರ್ಹತಾ ಮಾನದಂಡಗಳು, ಸಲ್ಲಿಸಿದ ಸಾಕ್ಷ್ಯಚಿತ್ರ ಪುರಾವೆಗಳು ಮತ್ತು ಕೌಶಲ್ಯಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡುತ್ತದೆ

SEBI

SEBI

  • Share this:
ದಿ ಸೆಕ್ಯುರಿಟಿ & ಎಕ್ಸ್​ಚೇಂಜ್ ಬೋರ್ಡ್​ ಆಫ್ ಇಂಡಿಯಾ ( The Security and Exchange Board of India- SEBI) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಫೈನಾನ್ಸಿಯಲ್ ಕಂಟೆಂಟ್ ರೈಟರ್ ಇಂಟರ್ನ್(Financial Content Writer Intern)​​ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ ಮಾಡಿದೆ. ಮುಂಬೈ ಕಚೇರಿ(Mumbai Office)ಯಲ್ಲಿ ಉದ್ಯೋಗ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. SEBI ಯು ‘ವರ್ಚುಯಲ್ ಮ್ಯೂಸಿಯಂ ಆಫ್ ಇಂಡಿಯನ್ ಸೆಕ್ಯುರಿಟೀಸ್ ಮಾರ್ಕೆಟ್‘(Virtual Museum of Indian Securities Market ) ಎಂಬ ವೆಬ್​ ಆಧಾರಿತ ಇಂಟರ್ನ್​ಶಿಪ್​ ಪ್ರೋಗ್ರಾಮ್(Web-bases Internship Programme)​ನ್ನು ಆರಂಭಿಸಿದೆ.

ಈ ಇಂಟರ್ನ್​ಶಿಪ್​ ಅವಕಾಶಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 30, 2021 ಕೊನೆಯ ದಿನಾಂಕ. ಇಂಟರ್ನ್​ಶಿಪ್​ ಪ್ರೋಗ್ರಾಂನ ಅವಧಿ ನೇಮಕಾತಿ ದಿನಾಂಕದಿಂದ 12 ತಿಂಗಳುಗಳಾಗಿರುತ್ತದೆ.

ಇಂಟರ್ನ್​ಗಳಿಗೆ ಸೆಬಿಯು ತಿಂಗಳಿಗೆ ₹45,000(ವಸತಿ ರಹಿತ) ಸ್ಟೆಫಂಡ್ ನೀಡುತ್ತದೆ. ಅಥವಾ ವಸತಿ ಸೌಲಭ್ಯ ಬೇಕು ಎಂದರೆ ತಿಂಗಳಿಗೆ ₹35,000 ರೂ. ಸ್ಟೆಫಂಡ್ ನೀಡುತ್ತದೆ.

ಈ ಕಾರ್ಯಕ್ರಮವು ವ್ಯಕ್ತಿಗಳಿಗೆ ಸಂಶೋಧನೆ ಆಧಾರಿತ ಮೂಲ ವಿಷಯ ಬರವಣಿಗೆಯನ್ನು ರಚಿಸಲು ಅವಕಾಶವನ್ನು ನೀಡುತ್ತದೆ. ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವಾಗ ಸೆಕ್ಯುರಿಟೀಸ್ ಮಾರ್ಕೆಟ್, ವಿಷಯ ಬರವಣಿಗೆ ಕೌಶಲ್ಯಗಳ ಬಗ್ಗೆ ಅವರ ಜ್ಞಾನವನ್ನು ಹೆಚ್ಚಿಸುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳನ್ನು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸೆಬಿಯ ಆರ್ಥಿಕ ಮತ್ತು ನೀತಿ ವಿಶ್ಲೇಷಣೆ (ಡಿಇಪಿಎ) ಅಡಿಯಲ್ಲಿ ಕೆಲಸ ಮಾಡಲು ನೇಮಿಸಲಾಗುತ್ತದೆ.

ಅರ್ಹತೆ:

1.ವಯೋಮಿತಿ- ಅಭ್ಯರ್ಥಿಗಳು ಮಾರ್ಚ್​ 31,2021 ಕ್ಕೆ 30 ವರ್ಷ ವಯಸ್ಸಿನ ಭಾರತೀಯ ಪ್ರಜೆಯಾಗಿರಬೇಕು.

2.ವಿದ್ಯಾರ್ಹತೆ- ಅರ್ಥಶಾಸ್ತ್ರ/ವ್ಯಾಪಾರ/ಹಣಕಾಸು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ/ ತತ್ಸಮಾನ ಪದವಿ ಪಡೆದಿರಬೇಕು. ಅಥವಾ ಸ್ನಾತಕೋತ್ತರ ಮಟ್ಟದಲ್ಲಿ ಕನಿಷ್ಠ ಶೇ. 60 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಕಳೆದ ಐದು ವರ್ಷಗಳಲ್ಲಿ ನಿಯತಕಾಲಿಕಗಳು ಅಥವಾ ಪ್ರತಿಷ್ಠಿತ ಪ್ರಕಟಣೆಗಳಲ್ಲಿ ಸೆಕ್ಯುರಿಟೀಸ್ ಮಾರ್ಕೆಟ್, ಅರ್ಥಶಾಸ್ತ್ರ, ವ್ಯವಹಾರ ಅಥವಾ ಹಣಕಾಸು ಕುರಿತು ಲೇಖನಗಳನ್ನು ಪ್ರಕಟಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು SEBI ತನ್ನ ಅರ್ಹತಾ ಮಾನದಂಡಗಳು, ಸಲ್ಲಿಸಿದ ಸಾಕ್ಷ್ಯಚಿತ್ರ ಪುರಾವೆಗಳು ಮತ್ತು ಕೌಶಲ್ಯಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡುತ್ತದೆ. ವರ್ಚುವಲ್ ಮೋಡ್‌ನಲ್ಲಿ ಪ್ರಾಥಮಿಕ ಸಂದರ್ಶನಗಳಿಗೆ ಹಾಜರಾಗಲು ಅಭ್ಯರ್ಥಿಗಳನ್ನು ಕೇಳಬಹುದು ಮತ್ತು ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು. ವೈಯಕ್ತಿಕ ಸಂದರ್ಶನದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.

ಇತರೆ ಸಾಮಾನ್ಯ ನಿಯಮಗಳು ಮತ್ತು ನಿಬಂಧನೆಗಳು:

  • ಅಪೂರ್ಣ ಅಪ್ಲಿಕೇಶನ್​ಗಳು ಮತ್ತು ದಾಖಲೆ ಸಾಕ್ಷ್ಯಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

  • ಅಭ್ಯರ್ಥಿಯು ಕೆಲಸಕ್ಕೆ ಸೇರಿದ 12 ತಿಂಗಳ ಅವಧಿ(ಒಂದು ವರ್ಷ)ಯನ್ನು ಅಗತ್ಯವಾಗಿ ಪೂರ್ಣಗೊಳಿಸಬೇಕಾಗುತ್ತದೆ.

  • ಒಂದು ವೇಳೆ ಅವನು/ಅವಳು ಮಧ್ಯದಲ್ಲಿ ಕೆಲಸ ತೊರೆಯಲು ನಿರ್ಧರಿಸಿದರೆ, ಕನಿಷ್ಠ ಒಂದು ತಿಂಗಳ ನೋಟಿಸ್ ಪೀರಿಯಡ್ ಮಾಡಬೇಕು.

  • ಯಾವುದೇ ಸಂದರ್ಭದಲ್ಲಿ, ಅಭ್ಯರ್ಥಿಯು ನೋಟಿಸ್ ಪೀರಿಯಡ್ ಅವಧಿಯನ್ನು ಪೂರೈಸಲು ಸಾಧ್ಯವಾಗದಿದ್ದರೆ ಅವನು/ಅವಳು ಒಂದು ತಿಂಗಳ ಸ್ಟೈಫಂಡ್​ಗೆ ಸಮನಾದ ಮೊತ್ತವನ್ನು ಪಾವತಿಸಬೇಕಾಗುತ್ತದೆ.

  • ಯಾವುದೇ ಕಾರಣವನ್ನು ನೀಡದೆ ಒಂದು ತಿಂಗಳ ಸೂಚನೆ ಅವಧಿಯೊಂದಿಗೆ ಇಂಟರ್ನ್​ಶಿಪ್​ ಅನ್ನು ಕೊನೆಗೊಳಿಸುವ ಹಕ್ಕನ್ನು ಸೆಬಿ ಹೊಂದಿದೆ.

  • ಇಂಟರ್ನ್​ಗಳು ಒಂದು ವರ್ಷದಲ್ಲಿ 12 ದಿನಗಳ ರಜೆಗೆ ಅರ್ಹರಾಗಿರುತ್ತಾರೆ ಮತ್ತು ಇಂಟರ್ನ್​ಗಳು ತೆಗೆದುಕೊಂಡ ಹೆಚ್ಚುವರಿ ರಜೆಗಳಿಗೆ ಸ್ಟೆಫಂಡ್​ನಲ್ಲಿ ಕಡಿತ ಮಾಡಲಾಗುತ್ತದೆ. ಅಲ್ಲದೇ ಬಳಕೆಯಾಗದ ರಜೆಗಳು ವರ್ಷದ ಕೊನೆಯಲ್ಲಿ Lapse ಆಗುತ್ತವೆ.

  • ಯಾವುದೇ ಮಾನ್ಯ ವಿವರಣೆಯಿಲ್ಲದೆ 8 ದಿನಗಳ ನಿರಂತರ ಅವಧಿಗೆ (ವಾರಾಂತ್ಯ ಅಥವಾ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಿಲ್ಲ) ಅನಧಿಕೃತ ಅನುಪಸ್ಥಿತಿಯು ಸ್ವಯಂಚಾಲಿತವಾಗಿ ಇಂಟರ್ನ್‌ಶಿಪ್ ಮುಕ್ತಾಯಕ್ಕೆ ಕಾರಣವಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಈ 'ಅರ್ಜಿ ನಮೂನೆ' ಅನ್ನು ಭರ್ತಿ ಮಾಡುವ ಮೂಲಕ ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಭೌತಿಕವಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಮತ್ತು ಸಹಿ ಮಾಡಿದ ಪ್ರತಿಯನ್ನು ಅಂಚೆ ಮೂಲಕ ಸೆಬಿಗೆ ಸಲ್ಲಿಸಬೇಕು. ಕೆಳಗಿನ ಅಂಚೆ ವಿಳಾಸ -

Deputy General Manager, Department of Economic and Policy Analysis –II Securities and Exchange Board of India SEBI Bhavan – II Plot No. C 4-A, ‘G’ Block, Bandra Kurla Complex Bandra (E), Mumbai 400051

ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಕೊನೆಯ ದಿನಾಂಕ ಅಂದರೆ ಅಕ್ಟೋಬರ್ 30 ರಂದು ಪೋಸ್ಟ್ ಮಾಡಬೇಕು. ಈ ದಿನಾಂಕದ ನಂತರ ಬಂದ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿಯನ್ನು ಒಳಗೊಂಡಿರುವ ಲಕೋಟೆಯಲ್ಲಿ ‘ಇಂಟರ್ನ್‌ಶಿಪ್ ಪ್ರೋಗ್ರಾಂ - 2021 ಅಡಿಯಲ್ಲಿ ಹಣಕಾಸು ವಿಷಯ ಬರಹಗಾರರ ಅರ್ಜಿ’ ಎಂದು ಸ್ಪಷ್ಟವಾಗಿ ನಮೂದಿಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: