ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ (State Bank Of India) ಬೆಂಗಳೂರು, ಮುಂಬೈ ಶಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 32 ಎಜಿಎಂ, ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಈಗಾಗಲೇ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 12 ಆಗಿದೆ.
ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಗಳ ಸಂಖ್ಯೆ: 32
ಉದ್ಯೋಗ ಸ್ಥಳ: ಮುಂಬೈ - ವಡೋದರಾ - ಬೆಂಗಳೂರು
ಹುದ್ದೆಯ ಹೆಸರು: ಎಜಿಎಂ, ಡೆಪ್ಯುಟಿ ಮ್ಯಾನೇಜರ್
ವೇತನ: 48170-100350 ರೂ ಪ್ರತಿ ತಿಂಗಳು
ಹುದ್ದೆ |
ಹುದ್ದೆ ಸಂಖ್ಯೆ |
ವಯೋಮಿತಿ |
ವೇತನ |
ಎಜಿಎಂ (ಐಟಿ-ಟೆಕ್ ಕಾರ್ಯಾಚರಣೆಗಳು) |
2 |
ಗರಿಷ್ಠ 45 |
89890-100350 ರೂ ಮಾಸಿಕ |
ಎಜಿಎಂ (IT-ಇನ್ಬೌಂಡ್ ಇಂಜಿನಿಯರ್) |
1 |
ಗರಿಷ್ಠ 45 |
89890-100350 ರೂ ಮಾಸಿಕ |
ಎಜಿಎಂ (IT-ಔಟ್ಬೌಂಡ್ ಇಂಜಿನಿಯರ್) |
1 |
ಗರಿಷ್ಠ 45 |
89890-100350 ರೂ ಮಾಸಿಕ |
ಎಜಿಎಂ (IT ಭದ್ರತಾ ತಜ್ಞರು) |
1 |
ಗರಿಷ್ಠ 45 |
89890-100350 ರೂ ಮಾಸಿಕ |
ಮ್ಯಾನೇಜರ್ (ಐಟಿ ಭದ್ರತಾ ತಜ್ಞರು) |
2 |
ಗರಿಷ್ಠ 38 |
63840-78230 ರೂ ಮಾಸಿಕ |
ಉಪ ವ್ಯವಸ್ಥಾಪಕರು (ನೆಟ್ವರ್ಕ್ ಇಂಜಿನಿಯರ್) |
10 |
ಗರಿಷ್ಠ 35 |
48170-69810 ರೂ ಮಾಸಿಕ |
ಉಪ ವ್ಯವಸ್ಥಾಪಕರು (ಸೈಟ್ ಇಂಜಿನಿಯರ್ ಕಮಾಂಡ್ ಸೆಂಟರ್) |
10 |
ಗರಿಷ್ಠ 35 |
48170-69810 ರೂ ಮಾಸಿಕ |
ಉಪ ವ್ಯವಸ್ಥಾಪಕರು (ಸಂಖ್ಯಾಶಾಸ್ತ್ರಜ್ಞ) |
6 |
ಗರಿಷ್ಠ 35 |
48170-69810 ರೂ ಮಾಸಿಕ |
ವಿದ್ಯಾರ್ಹತೆ: ಅಧಿಸೂಚನೆ ಅನ್ವಯ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ ಅಥವಾ ಬಿಟೆಕ್ ಪದವಿ ಪಡೆದಿರಬೇಕು. ಉಪ ವ್ಯವಸ್ಥಾಪಕರು (ಸಂಖ್ಯಾಶಾಸ್ತ್ರಜ್ಞ) ಹುದ್ದೆಗೆ ಪದವಿ ಹೊಂದಿರಬೇಕು.
ಇದನ್ನು ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ; 2410 ಹುದ್ದೆಗಳ ನೇಮಕಾತಿ
ವಯೋಮಿತಿ ಸಡಿಲಿಕೆ:
ಹಿಂದುಳಿದ ಅಭ್ಯರ್ಥಿಗಳು: 03 ವರ್ಷಗಳು
ಪ. ಜಾ, ಪ. ಪಂ ಅಭ್ಯರ್ಥಿಗಳು: 05 ವರ್ಷಗಳು
ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ:
ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಸಾಮಾನ್ಯ, ಹಿಂದುಳಿದ ಅಭ್ಯರ್ಥಿಗಳಿಗೆ: ರೂ.750 ರೂ
ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಕಿರುಪಟ್ಟಿ ಮತ್ತು ಸಂದರ್ಶನ
ಪ್ರಮುಖ ದಿನಾಂಕ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 21, 2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಜೂನ್ 12, 2022
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್:
ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
sbi.co.in
ಇದನ್ನು ಓದಿ: 98 ವೈದ್ಯ ಹುದ್ದೆಗಳ ನೇಮಕಾತಿಗೆ ಒಎನ್ಜಿಸಿ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
-ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
-ಆನ್ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- ವಿಜ್ಞಾನಿ ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್ ಅನ್ನು ಕ್ಲಿಕ್ ಮಾಡಿ ಆನ್ಲೈನ್ನಲ್ಲಿ ಅನ್ವಯಿಸಿ -
ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. - ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ