SBI Recruitment: ಎಸ್​ಬಿಐನಲ್ಲಿ 665 ಹುದ್ದೆಗೆ ಅರ್ಜಿ ಆಹ್ವಾನ: ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಭರ್ಜರಿ ಅವಕಾಶ

ಈ ಹುದ್ದೆಗಳನ್ನು ಎಸ್​ಬಿಐನ ವೆಲ್ತ್​​ ಮ್ಯಾನೇಜಮೆಂಟ್​ ಬ್ಯುಸಿನೆಟ್​ ಯುನಿಟ್​ ಅಡಿ ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. 

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಿಂದ (State Bank Of India) 665 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ಬ್ಯಾಂಕಿಂಗ್​ ಹುದ್ದೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ನೀಡಲಾಗಿದೆ. ಮುಂಬೈ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸ್ಪೆಷಲಿಸ್ಟ್​ ಆಫೀಸರ್ (Specialist Officer) ​ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 20 ಸೆಪ್ಟೆಂಬರ್​ ಆಗಿದೆ.

    ಈ ಹುದ್ದೆಗಳನ್ನು ಎಸ್​ಬಿಐನ ವೆಲ್ತ್​​ ಮ್ಯಾನೇಜಮೆಂಟ್​ ಬ್ಯುಸಿನೆಟ್​ ಯುನಿಟ್​ ಅಡಿ ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
    ಹುದ್ದೆಯ ಹೆಸರು: ಸ್ಪೇಷಲಿಸ್ಟ್​ ಅಧಿಕಾರಿ
    ಹುದ್ದೆಗಳ ಸಂಖ್ಯೆ: 714
    ಉದ್ಯೋಗ ಸ್ಥಳ: ಮುಂಬೈ ಸೇರಿದಂತೆ ದೇಶಾದ್ಯಂತ
    ವೇತನ: 36000-78230 ರೂ ಪ್ರತಿ ತಿಂಗಳು





































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ (ವಾರ್ಷಿಕ ಸಿಟಿಸಿಯಲ್ಲಿ)
    ಮ್ಯಾನೇಜರ್ (ಬ್ಯುಸಿನೆಸ್​ ಪ್ರೊಸೆಸ್​)1ಎಂಬಿಎ, ಪಿಜಿಡಿಎಂ18-22 ಲಕ್ಷ  ವಾರ್ಷಿಕ
    ಕೇಂದ್ರ ನಿರ್ವಹಣ ತಂಡ 2ಪದವಿಕೇಂದ್ರ ನಿರ್ವಹಣ ತಂಡ2 ಪದವಿ10-15 ಲಕ್ಷ ವಾರ್ಷಿಕ
    ಮ್ಯಾನೇಜರ್ (ವ್ಯಾಪಾರ ಅಭಿವೃದ್ಧಿ)2ಎಂಬಿಎ, ಪಿಜಿಡಿಎಂ18-22 ಲಕ್ಷ ವಾರ್ಷಿಕ
    ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್ (ವ್ಯಾಪಾರ)2ಎಂಬಿಎ, ಪಿಜಿಡಿಎಂ18-22 ಲಕ್ಷ ವಾರ್ಷಿಕ
    ಸಂಬಂಧ ನಿರ್ವಾಹಕ335ಪದವಿ5- 15 ಲಕ್ಷ ವಾರ್ಷಿಕ
    ಇನ್ವೆಸ್ಟ್​ ಅಧಿಕಾರಿ52ಪದವಿ12-18 ಲಕ್ಷ ವಾರ್ಷಿಕ
    ಹಿರಿಯ ಸಂಬಂಧ ವ್ಯವಸ್ಥಾಪಕ147ಪದವಿ10- 22 ಲಕ್ಷ ವಾರ್ಷಿಕ
    ಸಂಬಂಧ ನಿರ್ವಾಹಕ (ಟೀಮ್​ ಲಿಡ್​​)37ಪದವಿ10-28 ಲಕ್ಷ ವಾರ್ಷಿಕ
    ಪ್ರಾದೇಶಿಕ ಮುಖ್ಯಸ್ಥ12ಪದವಿ20-35 ಲಕ್ಷ ವಾರ್ಷಿಕ
    ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ752.50- 4 ಲಕ್ಷ ಪದವಿ2.50- 4 ಲಕ್ಷ ವಾರ್ಷಿಕ

    ವಯೋಮಿತಿ: ಅಧಿಕೃತ ನೇಮಕಾತಿ ಅನುಸಾರ ಅಭ್ಯರ್ಥಿಗಳು ಕನಿಷ್ಟ 20ರಿಂದ ಗರಿಷ್ಟ 50 ವರ್ಷಗಳ ವಯೋಮಿತಿ ಹೊಂದಿರಬೇಕು.

    ಇದನ್ನು ಓದಿ: ಕೆಪಿಎಸ್​ಸಿ ಗ್ರೂಪ್​ ಸಿ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಸೆಪ್ಟೆಂಬರ್​ 13ರವರೆಗಿದೆ ಅವಕಾಶ

    ಅರ್ಜಿ ಸಲ್ಲಿಕೆ: ಆನ್​ಲೈನ್​​

    ಅರ್ಜಿ ಶುಲ್ಕ:
    ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 750 ರೂ.

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ:
    ಶಾರ್ಟ್​ಲಿಸ್ಟ್​, ಸಂವಹನ, ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 31 ಆಗಸ್ಟ್​​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಸೆಪ್ಟೆಂಬರ್​​ 2022

    ಇದನ್ನು ಓದಿ: ನರೇಗಾ ಯೋಜನೆ ಅಡಿ ವಿವಿಧ ಜಿಲ್ಲಾ ಪಂಚಾಯತ್​ನಲ್ಲಿ ನೇಮಕಾತಿ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ – ಸಂಬಂಧ ನಿರ್ವಾಹಕ, ಸೀನಿಯರ್ ಸಂಬಂಧ ನಿರ್ವಾಹಕ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: sbi.co.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಇತ್ಯಾದಿ ದಾಖಲೆಗಳನ್ನು ಅರ್ಜಿಯಲ್ಲಿ ದಾಖಲಿಸಿ

    -ಅನ್ವಯಿಸಿದರೆ, ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: