SBI Recruitment 2021: ಸ್ಟೇಟ್ ಬ್ಯಾಂಕ್​​ನಲ್ಲಿ 606 ಹುದ್ದೆ ಖಾಲಿ ಇದೆ, ಯಾವುದೇ ಪರೀಕ್ಷೆ ಬರೆಯಬೇಕಿಲ್ಲ!

SBI Recruitment 2021: ಅರ್ಜಿ ಹಾಕುವ ಮುನ್ನ ಸಂಪೂರ್ಣ ಅಧಿಸೂಚನೆಯನ್ನು ಓದಿ. ವಿದ್ಯಾರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇನ್ನೂ ಹೆಚ್ಚಿನ ವಿವರಗಳನ್ನು ಆ ಅಧಿಸೂಚನೆಯಲ್ಲಿ ತಿಳಿದುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಸಿಹಿ ಸುದ್ದಿ ಇದೆ. ಸ್ಟೇಟ್ ಬ್ಯಾಂಕ್​ ಆಫ್​ ಇಂಡಿಯಾ ಹಲವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಸ್​ಬಿಐ ಮ್ಯಾನೇಜರ್(SBI Manager), ಡೆಪ್ಯುಟಿ ಮ್ಯಾನೇಜರ್(Deputy Manager), ಎಕ್ಸಿಕ್ಯೂಟಿವ್(Executive), ಇನ್ವೆಸ್ಟ್​ಮೆಂಟ್ ಆಫೀಸರ್(Investment Officer), ರಿಲೇಶನ್​ಶಿಪ್​ ಮ್ಯಾನೇಜರ್(Relationship Manager), ಸೆಂಟ್ರಲ್​ ರಿಸರ್ಚ್ ಟೀಮ್(Central Research Team), ಕಸ್ಟಮರ್ ರಿಲೇಶನ್​ಶಿಪ್​​ ಎಕ್ಸಿಕ್ಯೂಟಿವ್​ ಹುದ್ದೆ(Customer Relationship Executive Jobs)ಗಳನ್ನು ಭರ್ತಿ ಮಾಡಲು ಎಸ್​ಬಿಐ(SBI) ಅರ್ಜಿ ಆಹ್ವಾನಿಸಿದೆ.

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ಹೆಚ್ಚಿನ ವಿವರಗಳಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 18ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕುವ ಮುನ್ನ ಸಂಪೂರ್ಣ ಅಧಿಸೂಚನೆಯನ್ನು ಓದಿ. ವಿದ್ಯಾರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಇನ್ನೂ ಹೆಚ್ಚಿನ ವಿವರಗಳನ್ನು ಆ ಅಧಿಸೂಚನೆಯಲ್ಲಿ ತಿಳಿದುಕೊಳ್ಳಬಹುದು.

























































ಎಸ್​ಬಿಐ ನೇಮಕಾತಿ 2021 ಸಂಪೂರ್ಣ ಮಾಹಿತಿ
ನೇಮಕಾತಿ SBI Recruitment 2021: 606 ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಎಕ್ಸಿಕ್ಯೂಟಿವ್, ಇನ್ವೆಸ್ಟ್​ಮೆಂಟ್​ ಆಫೀಸರ್, ರಿಲೇಶನ್​ಶಿಪ್ ಮ್ಯಾನೇಜರ್, ಸೆಂಟ್ರಲ್ ರಿಸರ್ಚ್​ ಟೀಂ, ಕಸ್ಟಮರ್ ರಿಲೇಶನ್​ಶಿಪ್​ ಎಕ್ಸಿಕ್ಯೂಟಿವ್ ಹುದ್ದೆಗಳು.
ಸಂಸ್ಥೆ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ
ನೇಮಕಾತಿ ಎಸ್​ಬಿಐ ನೇಮಕಾತಿ
ಅಡ್ವರ್ಟೈಸ್ ನಂಬರ್ CRPD/SCO-WEALTH/2021-22/17
ಹುದ್ದೆಯ ಹೆಸರು  ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಎಕ್ಸಿಕ್ಯೂಟಿವ್, ಇನ್ವೆಸ್ಟ್​ಮೆಂಟ್​ ಆಫೀಸರ್, ರಿಲೇಶನ್​ಶಿಪ್ ಮ್ಯಾನೇಜರ್, ಸೆಂಟ್ರಲ್ ರಿಸರ್ಚ್​ ಟೀಂ, ಕಸ್ಟಮರ್ ರಿಲೇಶನ್​ಶಿಪ್​ ಎಕ್ಸಿಕ್ಯೂಟಿವ್ ಹುದ್ದೆಗಳು.
ಒಟ್ಟು ಹುದ್ದೆಗಳು 606
ವಿದ್ಯಾರ್ಹತೆ ಡಿಪ್ಲೋಮಾ, ಎಂಬಿಎ, ಪಿಜಿಡಿಎಂ, ಬ್ಯಾಚಲರ್ ಡಿಗ್ರಿ
ಕೆಲಸದ ಸ್ಥಳ ಕೊಲ್ಕತ್ತಾ, ಮುಂಬೈ
ಸಂಬಳ ಸಂಸ್ಥೆಯ ನಿಯಮಾನುಸಾರ
ಅರ್ಜಿ ಸಲ್ಲಿಕೆ ಆನ್​ಲೈನ್​
ಅರ್ಜಿ ಸಲ್ಲಿಕೆ ಪ್ರಾರಂಭ 28/09/2021
ಕೊನೆಯ ದಿನಾಂಕ 18/10/2021



ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 28/09/2021

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/10/2021


ಒಟ್ಟು 606 ಖಾಲಿ ಹುದ್ದೆಗಳಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಇರುವ ಹುದ್ದೆಗಳ ವಿವರ ಇಂತಿದೆ.







































ಹುದ್ದೆಯ ಹೆಸರು  ಹುದ್ದೆಗಳ ಸಂಖ್ಯೆ
ರಿಲೇಶನ್​ಶಿಪ್ ಮ್ಯಾನೇಜರ್ 334
ಕಸ್ಟಮರ್ ರಿಲೇಶನ್​ಶಿಪ್​ ಎಕ್ಸಿಕ್ಯೂಟಿವ್ 217
ಇನ್ವೆಸ್ಟ್​ಮೆಂಟ್​ ಆಫೀಸರ್ 12
ಸೆಂಟ್ರಲ್​ ರಿಸರ್ಚ್​ ಟೀಂ 04
ಎಕ್ಸಿಕ್ಯೂಟಿವ್ 01
ಮ್ಯಾನೇಜರ್ 12
ಡೆಪ್ಯುಟಿ ಮ್ಯಾನೇಜರ್ 26
ಒಟ್ಟು 606



ವಿದ್ಯಾರ್ಹತೆ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ/ಸ್ನಾತಕೋತ್ತರ/ ಡಿಪ್ಲೋಮಾ/ಎಂಬಿಎ/ಪಿಜಿಡಿಎಂ ಪದವಿ ಪಡೆದಿರಬೇಕು.

  • ವಿದ್ಯಾರ್ಹತೆ ಮಾಹಿತಿಗಾಗಿ ಅಡ್ವರ್ಟೈಸ್​​ಮೆಂಟ್​​ನ್ನು ಚೆಕ್ ಮಾಡಿ.


ವಯೋಮಿತಿ:

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 20-45 ವರ್ಷದೊಳಗಿನವರಾಗಿಬೇಕು.



ಕೆಲಸದ ಸ್ಥಳ:

  • ಪಶ್ಚಿಮ ಬಂಗಾಳದ ಕೊಲ್ಕತ್ತಾ

  • ಮಹಾರಾಷ್ಟ್ರದ ಮುಂಬೈ


ಆಯ್ಕೆ ವಿಧಾನ

ದಾಖಲಾತಿಗಳ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: