SBI PO Recruitment 2021: ಎಸ್​ಬಿಐನಲ್ಲಿ 2056 ಪ್ರೊಬೆಷನರಿ ಹುದ್ದೆಗಳು ಖಾಲಿ, ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

ಪ್ರಾಥಮಿಕ/ ಪ್ರಿಲಿಮಿನಿರಿ ಪರೀಕ್ಷೆ ನವೆಂಬರ್/ಡಿಸೆಂಬರ್-2021ರಲ್ಲಿ ನಡೆಯಲಿದೆ. ಪ್ರಾಥಮಿಕ ಪರೀಕ್ಷೆಯ ಫಲಿತಾಂಶ ಡಿಸೆಂಬರ್​ ಅಂತ್ಯದ ವೇಳೆಗೆ ಪ್ರಕಟವಾಗಲಿದೆ.

ಎಸ್​​ಬಿಐ

ಎಸ್​​ಬಿಐ

  • Share this:
SBI PO Recruitment 2021: ಸ್ಟೇಟ್ ಬ್ಯಾಂಕ್ ಇಂಡಿಯಾ (The State Bank of India-SBI) ಖಾಲಿ ಇರುವ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಎಸ್​ಬಿಐ ಖಾಲಿ ಇರುವ ಪ್ರೊಬೆಷನರಿ ಆಫೀಸರ್ಸ್​(Probationary Officers) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆದಿದೆ. ಒಟ್ಟು 2000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು. ಅಕ್ಟೋಬರ್ 5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಎಸ್​ಬಿಐ(SBI)ನ ಅಧಿಕೃತ ವೆಬ್​ಸೈಟ್​​​ sbi.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಯನ್ನು  ಭಾರತದ ಯಾವುದೇ ಸ್ಥಳಕ್ಕಾದರೂ ಕೆಲಸಕ್ಕೆ ನಿಯೋಜಿಸಬಹುದಾಗಿದೆ.

SBI PO Recruitment 2021: ಹುದ್ದೆಯ ಬಗ್ಗೆ ಮಾಹಿತಿ























ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಯ ಹೆಸರು ಪ್ರೊಬೆಷನರಿ ಆಫೀಸರ್
ಒಟ್ಟು ಹುದ್ದೆಗಳು 2,056
ಅರ್ಜಿ ಸಲ್ಲಿಕೆ ಆರಂಭ 05/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/10/2021



ಖಾಲಿ ಇರುವ 2,056 ಹುದ್ದೆಗಳಲ್ಲಿ, ಪರಿಶಿಷ್ಟ ಜಾತಿ(SC)-324, ಪರಿಶಿಷ್ಟ ಪಂಗಡ(ST)-162, ಇತರೆ ಹಿಂದುಳಿದ ವರ್ಗ (OBC)-560, ಇಡಬ್ಲ್ಯೂಎಸ್(EWS)​- 200, ಜನರಲ್ ಕ್ಯಾಟಗರಿಗೆ(General category)-810 ಹುದ್ದೆಗಳು ಖಾಲಿ ಇವೆ.

ಅರ್ಜಿ ಸಲ್ಲಿಸುವುದು ಹೇಗೆ? How to Apply

  • ಅಭ್ಯರ್ಥಿಗಳು ಆನ್​ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 25.

  • ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ವ್ಯಾಲಿಡ್ ಇ-ಮೇಲ್ ಐಡಿ ಮತ್ತು ಮೊಬೈಲ್​ ನಂಬರ್​ನ್ನು ಹೊಂದಿರಬೇಕು. ಫಲಿತಾಂಶ ಪ್ರಕಟವಾಗುವವರೆಗೂ ಆ ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಆಕ್ಟೀವ್ ಇರಬೇಕು.

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಎಸ್​ಬಿಐನ ಅಧಿಕೃತ ವೆಬ್​ಸೈಟ್​ ಆದ https://bank.sbi/careers ಅಥವಾ https://www.sbi.co.in/careers ಗೆ ಭೇಟಿ ನೀಡಬೇಕು.

  • ಬಳಿಕ, ಅಲ್ಲಿ, 'Online Application' ಆಯ್ಕೆ ಮಾಡಿ, Current Openings ಮೇಲೆ ಕ್ಲಿಕ್ ಮಾಡಬೇಕು.

  • ಬಳಿಕ ಅಭ್ಯರ್ಥಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.

  • ಹೆಸರು ನೊಂದಾಯಿಸಿಕೊಂಡ ಬಳಿಕ, ಅಭ್ಯರ್ಥಿಗಳು ಆನ್​ಲೈನ್​ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕು. ಪಾವತಿ ಮುಗಿದ ಬಳಿಕ ಜನರೇಟ್ ಆಗಿರುವ ಇ-ರೆಸಿಪ್ಟ್​​ ಹಾಗೂ ಅಪ್ಲಿಕೇಶನ್​ನ್ನು ಪ್ರಿಂಟ್ ತೆಗೆದುಕೊಳ್ಳಬೇಕು. ಅಭ್ಯರ್ಥಿಗಳು ಪ್ರಿಂಟ್​ಔಟ್​ ತೆಗೆದುಕೊಂಡ ಅಪ್ಲಿಕೇಶನ್​ನ್ನು ಬ್ಯಾಂಕ್​ಗೆ ಕಳುಹಿಸುವ ಅಗತ್ಯವಿಲ್ಲ.

  • ಅರ್ಜಿ ಸಲ್ಲಿಸುವಾಗ ಹಾಗೂ ಶುಲ್ಕ ಪಾವತಿಸುವಾಗ ಯಾವುದೇ ತೊಂದರೆ ಎದುರಾದರೆ, ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಸಹಾಯವಾಣಿ, 022-22820427(ಕೆಲಸದ ದಿನಗಳಲ್ಲಿ ಬೆಳಗ್ಗೆ 11-ಸಂಜೆ 6ವರೆಗೆ) ಗೆ ಕರೆ ಮಾಡಬಹುದಾಗಿದೆ.


ಆಯ್ಕೆ ಪ್ರಕ್ರಿಯೆ ಹೇಗೆ? Selection Process

ಪ್ರಾಥಮಿಕ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ಎರಡೂ ಸಹ ಇರುತ್ತವೆ. ಬಳಿಕ ಸಂದರ್ಶನ ಇರುತ್ತದೆ.

ವಿದ್ಯಾರ್ಹತೆ: Education Qualification

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು. ಅಂತಿಮ ವರ್ಷ/ ಸೆಮಿಸ್ಟರ್​​ನಲ್ಲಿರುವವರು ಸಹ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಸಂದರ್ಶನಕ್ಕೆ ಕರೆದರೆ, ಅವರು ಡಿಸೆಂಬರ್ 31, 2021 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ದಾಖಲೆ ಸಲ್ಲಿಸಬೇಕು. ಚಾರ್ಟಡ್ ಅಕೌಂಟೆಂಟ್​ಗಳು ಅಥವಾ ವೆಚ್ಚ ಲೆಕ್ಕಾಧಿಕಾರಿಗಳು ಕೂಡ ಅರ್ಜಿ ಸಲ್ಲಿಬಹುದು.

ವಯೋಮಿತಿ: Age Limit

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ವರ್ಷದವರಿಗಿಂತ ಕೆಳಗಿನವರಾಗಿರಬಾರದು. ಏಪ್ರಿಲ್​ 1, 2021ಕ್ಕೆ 30 ವರ್ಷ ಮೀರಿರಬಾರದು. ಅಂದರೆ ಅಭ್ಯರ್ಥಿಗಳು ಏಪ್ರಿಲ್​ 2, 1991ಕ್ಕಿಂತ ಮುಂಚೆ ಜನಿಸಿರಬಾರದು ಹಾಗೂ ಏಪ್ರಿಲ್​ 1, 2000ದ ಬಳಿಕ ಹುಟ್ಟಿರಬಾರದು. ಕೆಲವು ವರ್ಗಳ ಅಭ್ಯರ್ಥಿಗಳಿಗೆ (ಎಸ್​ಸಿ, ಎಸ್​ಟಿ, ಒಬಿಸಿ, ಪಿಡಬ್ಲ್ಯೂಡಿ ಇತ್ಯಾದಿ) ವಯೋಮಿತಿ ಸಡಿಲಿಕೆ ಇದೆ

ಪರೀಕ್ಷೆ ಯಾವಾಗ? Exam Date

ಪ್ರಾಥಮಿಕ/ ಪ್ರಿಲಿಮಿನಿರಿ (Preliminary Exam) ಪರೀಕ್ಷೆ ನವೆಂಬರ್/ಡಿಸೆಂಬರ್-2021ರಲ್ಲಿ ನಡೆಯಲಿದೆ. ಪ್ರಾಥಮಿಕ ಪರೀಕ್ಷೆಯ ಫಲಿತಾಂಶ ಡಿಸೆಂಬರ್​ ಅಂತ್ಯದ ವೇಳೆಗೆ ಪ್ರಕಟವಾಗಲಿದೆ.

ಮುಖ್ಯ ಪರೀಕ್ಷೆ ಡಿಸೆಂಬರ್ 2021ಕ್ಕೆ ನಡೆಯಲಿದೆ. ಇದರ ಫಲಿತಾಂಶ ಜನವರಿ 2022ಕ್ಕೆ ಪ್ರಕಟವಾಗಲಿದೆ. ಗುಂಪು ಚಟುವಟಿಕೆ/ ಸಂದರ್ಶನವು ಫೆಬ್ರವರಿ-2022 2/3ನೇ ವಾರದಲ್ಲಿ ನಡೆಯಲಿದೆ. ಅಂತಿಮ ಫಲಿತಾಂಶ ಫೆಬ್ರವರಿ/ಮಾರ್ಚ್​-2022ಕ್ಕೆ ಪ್ರಕಟವಾಗಲಿದೆ.

ಪ್ರಿಲಿಮಿನರಿ ಪರೀಕ್ಷೆಯ ಅಡ್ಮಿಟ್ ಕಾರ್ಡ್​ ನವೆಂಬರ್ ಮೊದಲ/ಎರಡನೇ ವಾರ ಲಭ್ಯವಾಗಲಿದ್ದು, ಅಭ್ಯರ್ಥಿಗಳು ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.
Published by:Latha CG
First published: