Women Empowerment| ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟ ಸೌದಿ ಅರೇಬಿಯಾ; ವಿವಿಧ ಹುದ್ದೆಗಳಿಗೆ 600 ಮಹಿಳೆಯರ ನೇಮಕ

ಮೆಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿ-ಖಾನಾ-ಇ-ಕಾಬಾಕ್ಕೆ ಮಹಿಳಾ ಯಾತ್ರಾರ್ಥಿಗಳು ಮತ್ತು ಭೇಟಿ ನೀಡುವ ಪ್ರಯಾಣಿಕರಿಗೆ ಸಲಹೆ ಸೂಚನೆಗಳನ್ನು ನೀಡಲು, ಸೇವೆ ಸಲ್ಲಿಸಲು ನೂರಾರು ಮಹಿಳೆಯರನ್ನು ನೇಮಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಸೌದಿ ಅರೇಬಿಯಾವು (Saudi Arabia) ಮಹಿಳಾ ಸಬಲೀಕರಣದ (Women Empowerment) ಕಡೆಗೆ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಇದೀಗ ತರಬೇತಿಯನ್ನು ಪಡೆದಿರುವ ಸುಮಾರು 600 ಸೌದಿ ಅರೇಬಿಯನ್ ಮಹಿಳೆಯರು ಎರಡು ಭವ್ಯ ಮಸೀದಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಟ್ರಿಬ್ಯೂನ್ ವರದಿ ಮಾಡಿದೆ. ವರದಿಯ ಪ್ರಕಾರ, ಎರಡು ಪವಿತ್ರ ಮಸೀದಿಗಳ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿಯು ಇದುವರೆಗೆ ತನ್ನ ಏಜೆನ್ಸಿ ಅಥವಾ ಸಹಾಯಕ ಏಜೆನ್ಸಿಗಳ ಸುಮಾರು 600 ಮಹಿಳಾ ಉದ್ಯೋಗಿಗಳಿಗೆ ತರಬೇತಿ ನೀಡಿ ಉದ್ಯೋಗಕ್ಕೆ ನಿಯೋಜಿಸಿಕೊಂಡಿದೆ ಎಂದು ಹೇಳಿದೆ. ಮಹಿಳಾ ಅಭಿವೃದ್ಧಿ ವ್ಯವಹಾರಗಳ ಉಪ-ಅಧ್ಯಕ್ಷರಾದ ಅಲ್-ಅನೌದ್ ಅಲ್-ಅಬೌದ್ ನೇತೃತ್ವದ ಮಹಿಳಾ ಅಭಿವೃದ್ಧಿ ವ್ಯವಹಾರಗಳ ಏಜೆನ್ಸಿಯು ತರಬೇತಿ ಪಡೆದ ಆ ಮಹಿಳೆಯರಲ್ಲಿ 310 ಜನರನ್ನು ನೇಮಿಸಿಕೊಂಡಿದೆ.

ಮಹಿಳಾ ವೈಜ್ಞಾನಿಕ, ಬೌದ್ಧಿಕ ಮತ್ತು ಮಾರ್ಗದರ್ಶನ ವ್ಯವಹಾರಗಳ ಏಜೆನ್ಸಿಯಲ್ಲಿ ಸುಮಾರು 200 ಮಹಿಳೆಯರು ಕೆಲಸ ಮಾಡುತ್ತಾರೆ, ಉಳಿದವರು ಮಹಿಳಾ ಆಡಳಿತ ಮತ್ತು ಸೇವಾ ವ್ಯವಹಾರಗಳ ಏಜೆನ್ಸಿಯಲ್ಲಿ ಕಮೇಲಿಯಾ ಅಲ್-ದಾಡಿ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವರ್ಷದ ಆರಂಭದಲ್ಲಿ, ಇಸ್ಲಾಂನ ಪವಿತ್ರ ತಾಣವಾದ ಮೆಕ್ಕಾ ಮತ್ತು ಮದೀನಾದಲ್ಲಿ ಕಾವಲು ಕಾಯಲು ಸೌದಿಯು ಮಹಿಳಾ ಸೈನಿಕರನ್ನು ನೇಮಿಸಿತು. ಮಿಲಿಟರಿ ಖಾಕಿ ಸಮವಸ್ತ್ರ ಧರಿಸಿದ ಮಹಿಳೆಯರು ಮೊಟ್ಟಮೊದಲ ಬಾರಿಗೆ ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಭದ್ರತಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದ ಕಾರಣ, ಈ ಹೆಜ್ಜೆಯನ್ನು ವಿಶ್ವದಾದ್ಯಂತ ಪ್ರತಿಯೊಬ್ಬರು ಪ್ರಶಂಸಿಸಿದರು.

ಮೆಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿ-ಖಾನಾ-ಇ-ಕಾಬಾಕ್ಕೆ ಮಹಿಳಾ ಯಾತ್ರಾರ್ಥಿಗಳು ಮತ್ತು ಭೇಟಿ ನೀಡುವ ಪ್ರಯಾಣಿಕರಿಗೆ ಸಲಹೆ ಸೂಚನೆಗಳನ್ನು ನೀಡಲು, ಸೇವೆ ಸಲ್ಲಿಸಲು ನೂರಾರು ಮಹಿಳೆಯರನ್ನು ನೇಮಿಸಲಾಗಿದೆ.

ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ದೇಶದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿಷನ್ 2030 ಯೋಜನೆಗಳ ಭಾಗವಾಗಿಯೂ ಮಹಿಳೆಯರು ಮುಂದುವರೆಯಲಿದ್ದು, ಅವರಿಗಾಗಿಯೂ ಹಲವಾರು ಅವಕಾಶಗಳನ್ನು ತೆರೆಯಲಾಗಿದೆ.

ಈ ಹಿಂದೆ, ಸೌದಿ ರಕ್ಷಣಾ ಸಚಿವಾಲಯವು ಪುರುಷರು ಮತ್ತು ಮಹಿಳೆಯರು ಇಬ್ಬರೂ ವಿವಿಧ ಮಿಲಿಟರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿದ್ದರು. ಕಳೆದ ವರ್ಷ ಡಿಸೆಂಬರ್‍ನಲ್ಲಿ ಮಾತ್ರ, ಇರುಹರಂ ಕಚೇರಿಯು ಮಸೀದಿ-ಉಲ್-ಹರಾಮ್‍ನ ವಿವಿಧ ವಿಭಾಗಗಳಿಗೆ ಸುಮಾರು 1,500 ಮಹಿಳೆಯರನ್ನು ನೇಮಿಸಿಕೊಂಡಿದೆ.

ಇನ್ನೊಂದು ಮೊದಲನೆಯದಾಗಿ, ಮಹಿಳೆಯರು ಸೆಪ್ಟೆಂಬರ್ 23 ರಂದು ರಿಯಾದ್ ಮತ್ತು ಜೆಡ್ಡಾದಲ್ಲಿ ವಾರ್ಷಿಕ ಸೌದಿ ರಾಷ್ಟ್ರೀಯ ದಿನದ ಸೇನಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಸೌದಿ ಅರೇಬಿಯಾ ಸಾಮ್ರಾಜ್ಯದ 91ನೇ ರಾಷ್ಟ್ರೀಯ ದಿನಾಚರಣೆಯ ಮೆರವಣಿಗೆಯಲ್ಲಿ ವಿವಿಧ ಶ್ರೇಣಿಯ ಮಹಿಳಾ ಸೈನಿಕರು ಭಾಗವಹಿಸಿದ್ದರು.

ಇದನ್ನೂ ಓದಿ: Bharat Bandh| ರೈತರು ಕರೆ ನೀಡಿರುವ ಭಾರತ್ ಬಂದ್; ಪಂಜಾಬ್-ಹರಿಯಾಣ-ಬಂಗಾಳ ಸ್ತಬ್ಧ, ಚೆನ್ನೈನಲ್ಲಿ ರೈಲ್ ರೋಖೋ!

ಸೌದಿ ಅರೇಬಿಯಾ ಸಾಮ್ರಾಜ್ಯದ 91 ನೇ ರಾಷ್ಟ್ರೀಯ ದಿನದ ಸ್ಮರಣಾರ್ಥವಾಗಿ, ಐನ್ ದುಬೈನಲ್ಲಿ ನಡೆದ ಸಮಾರಂಭದಲ್ಲಿ ಸೌದಿ ಅರೇಬಿಯಾವು ವಿಶ್ವದ ಅತಿದೊಡ್ಡ ಮತ್ತು ಅತಿ ಎತ್ತರದ ವೀಕ್ಷಣಾ ಚಕ್ರ, 250 ಮೀ ಗಿಂತಲೂ ಹೆಚ್ಚು ಎತ್ತರದಲ್ಲಿ ನಿಂತು, ವಿಶೇಷ ಬೆಳಕಿನ ಪ್ರದರ್ಶನದೊಂದಿಗೆ ಹಸಿರು ಬಣ್ಣದಲ್ಲಿ ಕಂಗೊಳಿಸಿತು ಮತ್ತು '#ಒಟ್ಟಾಗಿ ಇರೋಣ ಕೆಎಸ್‍ಎ-ಯುಎಇ' ಎಂಬ ಸಂದೇಶವನ್ನು ಸಾರಿತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: