• Home
  • »
  • News
  • »
  • jobs
  • »
  • Samsung Bangalore Hiring: ಸ್ಯಾಮ್​ಸಂಗ್​ನಲ್ಲಿದೆ ಬಿಇ ಪದವೀಧರರಿಗೆ ಉದ್ಯೋಗ; ಬೆಂಗಳೂರಿನಲ್ಲಿ ಕೆಲಸ

Samsung Bangalore Hiring: ಸ್ಯಾಮ್​ಸಂಗ್​ನಲ್ಲಿದೆ ಬಿಇ ಪದವೀಧರರಿಗೆ ಉದ್ಯೋಗ; ಬೆಂಗಳೂರಿನಲ್ಲಿ ಕೆಲಸ

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ಸಾಫ್ಟ್​ವೇರ್​​ ಇಂಜಿನಿಯರ್ (Software Engineer)​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಬಿಇ, ಬಿಟೆಕ್​ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

  • Share this:

    ಗ್ಯಾಜೆಟ್​ ಲೋಕದಲ್ಲಿ ಛಾಪು ಮೂಡಿಸಿರುವ ಸ್ಯಾಮ್​ಸಂಗ್​ (Samsung) ಇದೀಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬೆಂಗಳೂರಿನ ಸ್ಯಾಮ್​ಸಂಗ್​ ಕಚೇರಿಯಲ್ಲಿ ಅಭ್ಯರ್ಥಿಗಳ ಭರ್ತಿಗೆ ಸಂಸ್ಥೆ ಮುಂದಾಗಿದೆ. ಸಾಫ್ಟ್​ವೇರ್​​ ಇಂಜಿನಿಯರ್ (Software Engineer)​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಬಿಇ, ಬಿಟೆಕ್​ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಫ್ರೆಶರ್​​ಗಳಿಗೆ ಬಂಪರ್​ ಅವಕಾಶ ಇದಾಗಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಸ್ಯಾಮ್​ಸಂಗ್​ ಇಂಡಿಯಾ
    ಹುದ್ದೆಯ ಹೆಸರುಸಾಫ್ಟ್​ವೇರ್​ ಇಂಜಿನಿಯರ್​
    ಹುದ್ದೆ ಸಂಖ್ಯೆನಿರ್ದಿಷ್ಟಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು
    ವೇತನವಾರ್ಷಿಕ 14. 2 ಲಕ್ಷ ರೂ

    ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆ ಅನುಸಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಬಿಇ, ಬಿಟೆಕ್​ ಅಥವಾ ಎಂಇ, ಎಂಟೆಕ್​ ಪದವಿಯನ್ನು ಪಡೆದಿರಬೇಕು.


    ಇದನ್ನು ಓದಿ: ಟಿಸಿಎಸ್​ನಲ್ಲಿ ಬಿಇ ಫ್ರೆಶರ್ಸ್​​ ನೇಮಕಾತಿಗೆ ಚಾಲನೆ; ಇಲ್ಲಿದೆ ಅರ್ಜಿ ಸಲ್ಲಿಕೆ ಲಿಂಕ್​


    ವಿಶೇಷ ಸೂಚನೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2021 ಮತ್ತು 2022ರಲ್ಲಿ ಪದವಿಯನ್ನು ಪಡೆದಿರಬೇಕು. ಸಾಫ್ಟ್​ವೇರ್​ ಪ್ರೋಗ್ರಾಮಿಂಗ್​ನ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.


    ಹುದ್ದೆ ಜವಾಬ್ದಾರಿ
    ಸಾಫ್ಟ್‌ವೇರ್ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಉತ್ತಮವಾಗಿ ವಿನ್ಯಾಸಗೊಳಿಸಿದ ಮತ್ತು ಪರಿಣಾಮಕಾರಿ ಕೋಡ್ ರಚನೆಯ ಸಾಮರ್ಥ್ಯ ಹೊಂದಿರಬೇಕು.
    ದೋಷ ನಿವಾರಣೆ, ಡೀಬಗ್, ಮತ್ತು ಕೋಡ್‌ಗಳನ್ನು ನಿರ್ವಹಿಸಿ ಮತ್ತು ಅಗತ್ಯವಿರುವಾಗ ಮತ್ತು ಅವುಗಳನ್ನು ನವೀಕರಿಸಬೇಕು
    ಪ್ರಾಜೆಕ್ಟ್​ನ ಯೋಜನೆಗಳು ಮತ್ತು ಕಂಪನಿಯ ಮಾನದಂಡಗಳ ಅನುಸಾರ ಕಾರ್ಯ ನಿರ್ವಹಿಸಬೇಕು.
    ಯೋಜನೆಯ ಅಗತ್ಯತೆಗಳು ಮತ್ತು ಕಾರ್ಯಗಳ ಕಾರ್ಯಗತಗೊಳಿಸುವಿಕೆಯ ಸ್ಪಷ್ಟ ತಿಳುವಳಿಕೆ ಹೊಂದಿರಬೇಕು.


    ಅರ್ಜಿ ಸಲ್ಲಿಕೆ ವಿಧಾನ: ಆನ್​ಲೈನ್​


    ವಯೋಮಿತಿ: ಸಂಸ್ಥೆಯ ನಿಯಮ ಅನುಸಾರ


    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ


    ಇದನ್ನು ಓದಿ: ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದಲ್ಲಿ ಯುವ ವೃತ್ತಿಪರರ ಹುದ್ದೆಗೆ ಅರ್ಜಿ ಆಹ್ವಾನ


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: samsung.com/sri-b


    ಅರ್ಜಿ ಸಲ್ಲಿಕೆ ಪ್ರಕ್ರಿಯೆ


    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ


    - ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.


    ಅರ್ಜಿ ಸಲ್ಲಿಸುವವರು ಮೇಲಿನ ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.

    Published by:Seema R
    First published: