Sainik School Recruitment 2021: ಸೈನಿಕ್ ಸ್ಕೂಲ್ ಚಿತ್ತೋರ್ಘರ್, ರಾಜಸ್ಥಾನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 20 ಟಿಜಿಟಿ ಹಾಗೂ ಇತರೆ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸೈನಿಕ್ ಸ್ಕೂಲ್ನ ಅಧಿಕೃತ ವೆಬ್ಸೈಟ್ sschittorgarh.com ಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಸೈನಿಕ್ ಸ್ಕೂಲ್ ಚಿತ್ತೋರ್ಘರ್ |
ಹುದ್ದೆಯ ಹೆಸರು |
ಟಿಜಿಟಿ |
ಒಟ್ಟು ಹುದ್ದೆಗಳು |
20 |
ಅರ್ಜಿ ಶುಲ್ಕ |
500 ರೂ. |
ಆಯ್ಕೆ ವಿಧಾನ |
ಲಿಖಿತ ಪರೀಕ್ಷೆ |
ಅರ್ಜಿ ಸಲ್ಲಿಸುವ ವಿಧಾನ |
ಆಫ್ಲೈನ್ |
ಸೈನಿಕ ಸ್ಕೂಲ್ ನೇಮಕಾತಿ 2021: ಹುದ್ದೆಯ ಮಾಹಿತಿ
- ಟಿಜಿಟಿ- 2 ಹುದ್ದೆಗಳು
- ಜನರಲ್ ಎಂಪ್ಲಾಯೀಸ್- 17 ಹುದ್ದೆಗಳು
- ಪಿಇಎಂ/ಪಿಟಿ-ಕಮ್-ಮ್ಯಾಟ್ರನ್- 1 ಹುದ್ದೆ
ಇದನ್ನೂ ಓದಿ: NIELIT Scientist Recruitment 2021: ತಿಂಗಳಿಗೆ 2 ಲಕ್ಷ ರೂ. ಸಂಬಳ, ಎಂಜಿನಿಯರಿಂಗ್ ಪಾಸಾದವರು ಅರ್ಜಿ ಸಲ್ಲಿಸಿ
ಆಯ್ಕೆ ಪ್ರಕ್ರಿಯೆ:
ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆಗಳನ್ನು ನೀಡಲಾಗುತ್ತದೆ. ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹೆಸರನ್ನು ಸೈನಿಕ್ ಸ್ಕೂಲ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
ಸೈನಿಕ್ ಸ್ಕೂಲ್ ನೇಮಕಾತಿ 2021: ಅರ್ಜಿ ಶುಲ್ಕ
ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ.ಗಳನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಬೇಕು ಮತ್ತು ಬೇರೆ ಯಾವುದೇ ವಿಧಾನವನ್ನು ಸ್ವೀಕರಿಸಲಾಗುವುದಿಲ್ಲ.
ಅಧಿಕೃತ ಅಧಿಸೂಚನೆಯಲ್ಲಿ, “ಇದು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಇಲಾಖೆ/ಸಂಸ್ಥೆ ಅಲ್ಲ. ಸೇವೆಗಳನ್ನು ಸೈನಿಕ್ ಸ್ಕೂಲ್ಸ್ ಸೊಸೈಟಿ ನಿಯಮಗಳು ಮತ್ತು ನಿಯಮಗಳು 1997 ರ ಮೂಲಕ ನಿರ್ವಹಿಸಲಾಗುತ್ತದೆ, ಕಾಲಕಾಲಕ್ಕೆ ತಿದ್ದುಪಡಿ ಮತ್ತು ಪರಿಷ್ಕರಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಯು ಒಂದು ವರ್ಷದ ಅವಧಿಗೆ ಪ್ರೊಬೇಶನ್ನಲ್ಲಿರುತ್ತಾರೆ, ಇದನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದು‘‘ ಎಂದು ಹೇಳಲಾಗಿದೆ.
ಇದನ್ನೂ ಓದಿ: TCS is Hiring: ಟಿಸಿಎಸ್ ನೇಮಕಾತಿ; ಪದವೀಧರರು ಈಗಲೇ ಅರ್ಜಿ ಸಲ್ಲಿಸಿ
ಅರ್ಜಿಯನ್ನು ಸ್ಪೀಡ್ ಪೋಸ್ಟ್/ನೋಂದಾಯಿತ ಅಂಚೆ ಮೂಲಕ ಮಾತ್ರ ಕಳುಹಿಸಬೇಕು ಎಂಬುದು ಗಮನಿಸಬೇಕಾದ ಸಂಗತಿ. ಮೇಲ್/ಫ್ಯಾಕ್ಸ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ