• Home
 • »
 • News
 • »
 • jobs
 • »
 • SAIL Recruitment: ತಿಂಗಳಿಗೆ 1.80 ಲಕ್ಷ ಸಂಬಳ; BE, B Tech​ ಆಗಿದ್ರೆ ಈಗಲೇ ಅರ್ಜಿ ಸಲ್ಲಿಸಿ

SAIL Recruitment: ತಿಂಗಳಿಗೆ 1.80 ಲಕ್ಷ ಸಂಬಳ; BE, B Tech​ ಆಗಿದ್ರೆ ಈಗಲೇ ಅರ್ಜಿ ಸಲ್ಲಿಸಿ

SAIL

SAIL

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 23, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ಮೀರಿರಬಾರದು.

 • News18 Kannada
 • Last Updated :
 • New Delhi, India
 • Share this:

  SAIL Recruitment 2022: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ(Steel Authority Of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 245 ಮ್ಯಾನೇಜ್​ಮೆಂಟ್ ಟ್ರೇನಿ(Management Trainee) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 23, 2022 ಕ್ಕೆ ಮುನ್ನ ಆಸಕ್ತರು ಅಪ್ಲಿಕೇಶನ್ ಹಾಕಿ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
  ಹುದ್ದೆಮ್ಯಾನೇಜ್​ಮೆಂಟ್ ಟ್ರೇನಿ
  ಹುದ್ದೆಯ ಸಂಖ್ಯೆ245
  ವಿದ್ಯಾರ್ಹತೆಬಿಇ/ಬಿ.ಟೆಕ್
  ಕೆಲಸದ ಸ್ಥಳಭಾರತ
  ವೇತನಮಾಸಿಕ ₹ 50,000-1,80,000
  ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ03/11/2022
  ಅರ್ಜಿ ಸಲ್ಲಿಸಲು ಕೊನೆಯ ದಿನ23/11/2022


  ಹುದ್ದೆಯ ಮಾಹಿತಿ:
  ಮೆಕ್ಯಾನಿಕಲ್ ಎಂಜಿನಿಯರಿಂಗ್- 65
  ಮೆಟಲುರ್ಜಿಕಲ್ ಎಂಜಿನಿಯರಿಂಗ್-52
  ಎಲೆಕ್ಟ್ರಿಕಲ್ ಎಂಜಿನಿಯರಿಂಗ್- 59
  ಇನ್​​ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್-13
  ಮೈನಿಂಗ್ ಎಂಜಿನಿಯರಿಂಗ್ -26
  ಕೆಮಿಕಲ್ ಎಂಜಿನಿಯರಿಂಗ್-14
  ಸಿವಿಲ್ ಎಂಜಿನಿಯರಿಂಗ್-16


  ಇದನ್ನೂ ಓದಿ: Government Job: ಪದವೀಧರರಿಗೆ ಕೇಂದ್ರ ಸರ್ಕಾರದ ಉದ್ಯೋಗ, ಮಾಸಿಕ ವೇತನ ₹ 67,000


  ವಿದ್ಯಾರ್ಹತೆ:
  ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.


  ವಯೋಮಿತಿ:
  ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 23, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ಮೀರಿರಬಾರದು.


  ವಯೋಮಿತಿ ಸಡಿಲಿಕೆ:
  ಒಬಿಸಿ(ಎನ್​ಸಿಎಲ್​) ಅಭ್ಯರ್ಥಿಗಳು- 3 ವರ್ಷ
  ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು - 5 ವರ್ಷ
  PWD (ಸಾಮಾನ್ಯ) ಅಭ್ಯರ್ಥಿಗಳು-10 ವರ್ಷ
  PWD (ಒಬಿಸಿ/ ಎನ್​ಸಿಎಲ್​) ಅಭ್ಯರ್ಥಿಗಳು- 13 ವರ್ಷ
  PWD (ಎಸ್​​ಸಿ/ಎಸ್​ಟಿ) ಅಭ್ಯರ್ಥಿಗಳು- 15 ವರ್ಷ


  ಅರ್ಜಿ ಶುಲ್ಕ:
  ಎಸ್​ಸಿ/ಎಸ್​ಟಿ/ PWD/ESM/ ಇಲಾಖೆಯ ಅಭ್ಯರ್ಥಿಗಳು- 200 ರೂ.
  ಜನರಲ್/ಒಬಿಸಿ/EWS ಅಭ್ಯರ್ಥಿಗಳು-700 ರೂ.
  ಪಾವತಿಸುವ ಬಗೆ: ಆನ್​ಲೈನ್


  ಆಯ್ಕೆ ಪ್ರಕ್ರಿಯೆ:
  GATE 2022 ಸ್ಕೋರ್​
  ಲಿಖಿತ ಪರೀಕ್ಷೆ
  ಗುಂಪು ಚರ್ಚೆ
  ಸಂದರ್ಶನ


  ಇದನ್ನೂ ಓದಿ: JOB ALERT: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಕೆಲಸ ಖಾಲಿ ಇದೆ, ಡಿಗ್ರಿ ಪಾಸಾದವರಿಗೆ ಅವಕಾಶ


  ಪ್ರಮುಖ ದಿನಾಂಕಗಳು
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03/11/2022
  ಅರ್ಜಿ ಸಲ್ಲಿಸಲು ಕೊನೆಯ ದಿನ: 23/11/2022

  Published by:Latha CG
  First published: