SAIL Recruitment 2021: ಸ್ಟೀಲ್ ಅಥಾರಿಟಿ ಆಫ್​ ಇಂಡಿಯಾದಲ್ಲಿ 38 ಶಿಕ್ಷಕ ಹುದ್ದೆಗಳು ಖಾಲಿ; ನೇರ ಸಂದರ್ಶನ

ಒಟ್ಟು 38 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಪದವೀಧರರು, ಬಿ.ಎಡ್ ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.

SAIL

SAIL

  • Share this:
SAIL Recruitment 2021: ಸ್ಟೀಲ್​ ಅಥಾರಿಟಿ ಆಫ್ ಇಂಡಿಯಾ(Steel Authority of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 38 ಶಿಕ್ಷಕ ಹುದ್ದೆ(Teacher Posts)ಗಳು ಖಾಲಿ ಇದ್ದು, ಪದವೀಧರರು(Bachelor Degree), ಬಿ.ಎಡ್(B. Ed) ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 1ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಇಂಟರ್​ವ್ಯೂನಲ್ಲಿ ಪಾಲ್ಗೊಳ್ಳಬಹುದಾಗಿದೆ.



ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.





































ಸಂಸ್ಥೆಸ್ಟೀಲ್​ ಅಥಾರಿಟಿ ಆಫ್​ ಇಂಡಿಯಾ
ಹುದ್ದೆಯ ಹೆಸರುಶಿಕ್ಷಕ
ಒಟ್ಟು ಹುದ್ದೆಗಳು38
ವಿದ್ಯಾರ್ಹತೆಪದವಿ, ಬಿಎಡ್
ಉದ್ಯೋಗದ ಸ್ಥಳಬಾಕರೋ(ಜಾರ್ಖಂಡ್)
ವೇತನನಿಯಮಾನುಸಾರ
ಆಯ್ಕೆ ವಿಧಾನಸಂದರ್ಶನ
ಸಂದರ್ಶನ ನಡೆಯುವ ದಿನಾಂಕ1/12/2021



ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 12/11/2021
ಸಂದರ್ಶನ ನಡೆಯುವ ದಿನಾಂಕ: 1/12/2021

ಇದನ್ನೂ ಓದಿ: Koppal Anganwadi Recruitment 2021: ಕೊಪ್ಪಳದಲ್ಲಿ 161 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಕಾಲೇಜಿನಿಂದ ಕನಿಷ್ಠ ಬಿ.ಎಡ್​ ಪೂರ್ಣಗೊಳಿಸಿರಬೇಕು.

ಸಂಗೀತ ಮತ್ತು ದೈಹಿಕ ಶಿಕ್ಷಣ ವಿಷಯಗಳ ಬೋಧಕ ಹುದ್ದೆಗಳಿಗೆ ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಸಮಾನವಾದ ಪದವಿ ಪಡೆದ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಸೂಕ್ತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ವಾಣಿಜ್ಯ ಮತ್ತು ಸಂಸ್ಕೃತ ವಿಷಯಗಳ ಬೋಧಕ ಹುದ್ದೆಗಳಿಗೆ ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಕಾಲೇಜು / ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಸಮಾನವಾದ ಪದವಿಗಳನ್ನು ಪಡೆದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಸೂಕ್ತ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ವಯೋಮಿತಿ:

ಶಿಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 65 ವರ್ಷ ಮೀರಿರಬಾರದು.

ವೇತನ:

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಶಿಕ್ಷಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಇದನ್ನೂ ಓದಿ: India Railway Recruitment 2021: SSLC, ITI ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗ

ಸಂದರ್ಶನ ನಡೆಯುವ ಸ್ಥಳ:
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಡೆಸುತ್ತಿರುವ ಶಿಕ್ಷಕ ಹುದ್ದೆಗಳ ನೇಮಕಾತಿ ಸಂಬಂಧ ಡಿಸೆಂಬರ್ 1ರಂದು ಸಂದರ್ಶನ ನಡೆಯುತ್ತದೆ.

ಮಿನಿ ಆಡಿಟೋರಿಯಂ
ಹೆಚ್​ಆರ್​ಡಿ ಸೆಂಟರ್
ಬಿಎಸ್​ಎಲ್(ಇಸ್ಪತ್ ಭವನದ ಎದುರು)​​ ಬಾಕರೋ ಸ್ಟೀಲ್ ಸಿಟಿ
ಜಾರ್ಖಂಡ್ -827001

ಇಲ್ಲಿ ಸಂದರ್ಶನ ನಡೆಯಲಿದೆ.



ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: