• Home
  • »
  • News
  • »
  • jobs
  • »
  • Sahitya Akademi: ತಿಂಗಳಿಗೆ 1.77 ಲಕ್ಷ ಸಂಬಳ; Sub Editor, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

Sahitya Akademi: ತಿಂಗಳಿಗೆ 1.77 ಲಕ್ಷ ಸಂಬಳ; Sub Editor, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಒಟ್ಟು 10 ಸ್ಟೆನೋಗ್ರಾಫರ್(Stenographer), ಸಬ್​ ಎಡಿಟರ್(Sub editor) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

  • News18 Kannada
  • Last Updated :
  • Bangalore, India
  • Share this:

    Sahitya Akademi Recruitment 2022: ಸಾಹಿತ್ಯ ಅಕಾಡೆಮಿಯು(Sahitya Akademi) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಸ್ಟೆನೋಗ್ರಾಫರ್(Stenographer), ಸಬ್​ ಎಡಿಟರ್(Sub editor) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬೆಂಗಳೂರು ಹಾಗೂ ಕೊಲ್ಕತ್ತಾದಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ನವೆಂಬರ್ 28, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ sahitya-akademi.gov.in ಗೆ ಭೇಟಿ ನೀಡಬಹುದು.

    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಸಾಹಿತ್ಯ ಅಕಾಡೆಮಿ
    ಹುದ್ದೆಯ ಹೆಸರುಸ್ಟೆನೋಗ್ರಾಫರ್, ಸಬ್ ಎಡಿಟರ್
    ಒಟ್ಟು ಹುದ್ದೆ10
    ವಿದ್ಯಾರ್ಹತೆಸ್ನಾತಕೋತ್ತರ ಪದವಿ
    ಸ್ಥಳಬೆಂಗಳೂರು, ಕೊಲ್ಕತ್ತಾ
    ವೇತನಮಾಸಿಕ ₹ 35,400-1,77,500
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ29/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ28/11/2022


    ಹುದ್ದೆಯ ಮಾಹಿತಿ


    ಅಸಿಸ್ಟೆಂಟ್ ಎಡಿಟರ್ - 1
    ಸೇಲ್ಸ್​​ & ಎಕ್ಸಿಬಿಷನ್​ ಅಸಿಸ್ಟೆಂಟ್-1
    ಸೀನಿಯರ್ ಅಕೌಂಟೆಂಟ್​-1
    ಸಬ್​ ಎಡಿಟರ್-2
    ಟೆಕ್ನಿಕಲ್ ಅಸಿಸ್ಟೆಂಟ್-1
    ರೆಸಿಪ್ಶನಿಸ್ಟ್​ & ಟೆಲಿಫೋನ್ ಆಪರೇಟರ್-1
    ಸ್ಟೆನೋಗ್ರಾಫರ್ ಗ್ರೇಡ್-2 -3


    ಇದನ್ನೂ ಓದಿ:FACT Recruitment 2022: ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 32 ಸಾವಿರ


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಅಸಿಸ್ಟೆಂಟ್ ಎಡಿಟರ್ - ಸ್ನಾತಕೋತ್ತರ ಪದವಿ
    ಸೇಲ್ಸ್​​ & ಎಕ್ಸಿಬಿಷನ್​ ಅಸಿಸ್ಟೆಂಟ್-ಪದವಿ
    ಸೀನಿಯರ್ ಅಕೌಂಟೆಂಟ್​-ಸ್ನಾತಕೋತ್ತರ ಪದವಿ
    ಸಬ್​ ಎಡಿಟರ್-ಪದವಿ
    ಟೆಕ್ನಿಕಲ್ ಅಸಿಸ್ಟೆಂಟ್-ಡಿಪ್ಲೋಮಾ, ಪದವಿ
    ರೆಸಿಪ್ಶನಿಸ್ಟ್​ & ಟೆಲಿಫೋನ್ ಆಪರೇಟರ್-ಪದವಿ
    ಸ್ಟೆನೋಗ್ರಾಫರ್ ಗ್ರೇಡ್-2- ಪಿಯುಸಿ


    ವಯೋಮಿತಿ:
    ಅಸಿಸ್ಟೆಂಟ್ ಎಡಿಟರ್ - 40 ವರ್ಷ
    ಸೇಲ್ಸ್​​ & ಎಕ್ಸಿಬಿಷನ್​ ಅಸಿಸ್ಟೆಂಟ್-40 ವರ್ಷ
    ಸೀನಿಯರ್ ಅಕೌಂಟೆಂಟ್​-40 ವರ್ಷ
    ಸಬ್​ ಎಡಿಟರ್-35 ವರ್ಷ
    ಟೆಕ್ನಿಕಲ್ ಅಸಿಸ್ಟೆಂಟ್-35 ವರ್ಷ
    ರೆಸಿಪ್ಶನಿಸ್ಟ್​ & ಟೆಲಿಫೋನ್ ಆಪರೇಟರ್-30 ವರ್ಷ
    ಸ್ಟೆನೋಗ್ರಾಫರ್ ಗ್ರೇಡ್-30 ವರ್ಷ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸ್ಕಿಲ್ ಟೆಸ್ಟ್​
    ಸಂದರ್ಶನ


    ವೇತನ:
    ಅಸಿಸ್ಟೆಂಟ್ ಎಡಿಟರ್ - ಮಾಸಿಕ ₹ 56,100-1,77,500
    ಸೇಲ್ಸ್​​ & ಎಕ್ಸಿಬಿಷನ್​ ಅಸಿಸ್ಟೆಂಟ್-ಮಾಸಿಕ ₹ 35,400-1,12,400
    ಸೀನಿಯರ್ ಅಕೌಂಟೆಂಟ್​-ಮಾಸಿಕ ₹ 35,400-1,12,400
    ಸಬ್​ ಎಡಿಟರ್-ಮಾಸಿಕ ₹ 35,400-1,12,400
    ಟೆಕ್ನಿಕಲ್ ಅಸಿಸ್ಟೆಂಟ್-ಮಾಸಿಕ ₹ 35,400-1,12,400
    ರೆಸಿಪ್ಶನಿಸ್ಟ್​ & ಟೆಲಿಫೋನ್ ಆಪರೇಟರ್-ಮಾಸಿಕ ₹ 35,400-1,12,400
    ಸ್ಟೆನೋಗ್ರಾಫರ್ ಗ್ರೇಡ್- ಮಾಸಿಕ ₹25,500-81,100


    ಇದನ್ನೂ ಓದಿ: JOB ALERT: ಗುಪ್ತಚರ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಕೆಲಸ; ತಿಂಗಳಿಗೆ 69 ಸಾವಿರ ಸಂಬಳ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
    ಸೆಕ್ರೆಟರಿ
    ಸಾಹಿತ್ಯ ಅಕಾಡೆಮಿ
    ರವೀಂದ್ರ ಭವನ
    35 ಫಿರೋಜ್​ಶಾ ರಸ್ತೆ
    ನವದೆಹಲಿ-110001


    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/11/2022

    Published by:Latha CG
    First published: