RDPR Recruitment: ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

RDPR

RDPR

  • Share this:
    ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​ ಯೋಜನೆ (Rural Development and Panchayat Raj )ಅಡಿ ಮಹಾತ್ಮಗಾಂಧಿ ನರೇಗಾ (NAREGA) ಯೋಜನೆಯ ವಿವಿಧ ಕಾರ್ಯಗಳ ಅನುಷ್ಠಾನದ ನಡೆಸಲು ವಿವಿಧ ರಾಜ್ಯ ಗುಣಮಟ್ಟದ ಮಾನಿಟರ್ ಖಾಲಿ ಹುದ್ದೆಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 2 ಕಡೆಯ ದಿನಾಂಕ ಆಗಿದೆ.

    ಸಂಸ್ಥೆಯ ಹೆಸರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕರ್ನಾಟಕ (RDPR)
    ಹುದ್ದೆಯ ಹೆಸರು: ಸ್ಟೇಟ್ ಕ್ವಾಲಿಟಿ ಮಾನಿಟರ್
    ಹುದ್ದೆಗಳ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲ
    ಉದ್ಯೋಗ ಸ್ಥಳ: ಬೆಂಗಳೂರು
    ಸಂಬಳ: ಗ್ರಾಮೀಣಾಭಿವೃದ್ಧಿ ಇಲಾಖೆ ಕರ್ನಾಟಕ ನಿಯಮಗಳ ಪ್ರಕಾರ

































    ಹುದ್ದೆವಿದ್ಯಾರ್ಹತೆವಯೋಮಿತಿ
    ರಾಜ್ಯ ಗುಣಮಟ್ಟದ ಮಾನಿಟರ್ (ಸಿವಿಲ್)ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಗರಿಷ್ಠ 65 ವರ್ಷ
    ರಾಜ್ಯ ಗುಣಮಟ್ಟದ ಮಾನಿಟರ್ (ಕೃಷಿ)ಕೃಷಿಯಲ್ಲಿ ಪದವಿಗರಿಷ್ಠ 65 ವರ್ಷ
    ರಾಜ್ಯ ಗುಣಮಟ್ಟದ ಮಾನಿಟರ್ (ತೋಟಗಾರಿಕೆ)ಕೃಷಿ/ತೋಟಗಾರಿಕೆ ವಿಜ್ಞಾನದಲ್ಲಿ ಪದವಿಗರಿಷ್ಠ 65 ವರ್ಷ
    ರಾಜ್ಯ ಗುಣಮಟ್ಟದ ಮಾನಿಟರ್ (ಅರಣ್ಯ)ಕೃಷಿ/ಅರಣ್ಯ/ವಿಜ್ಞಾನದಲ್ಲಿ ಪದವಿಗರಿಷ್ಠ 65 ವರ್ಷ
    ರಾಜ್ಯ ಗುಣಮಟ್ಟದ ಮಾನಿಟರ್ (ರೇಷ್ಮೆ ಕೃಷಿ)ಪದವಿಗರಿಷ್ಠ 65 ವರ್ಷ

    ವಯಸ್ಸಿನ ಸಡಿಲಿಕೆ:
    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕರ್ನಾಟಕ ನಿಯಮಗಳ ಪ್ರಕಾರ

    ಇದನ್ನು ಓದಿ: ವಾಣಿಜ್ಯ ಸಚಿವಾಲಯದಲ್ಲಿ 65 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಕೆ
    ಇಮೇಲ್​ ಮುಖಂತರ

    ಇಮೇಲ್​ ವಿಳಾಸ: careers.nrega@gmail.com

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15-06-2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-ಜುಲೈ-2022
    ಪ್ರಮುಖ ಲಿಂಕ್​ಗಳು:
    ಅಧಿಕೃತ ಅಧಿಸೂಚನೆ ಫಿಡಿಎಫ್​ಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್​​: rdpr.karnataka.gov.in

    ಇದನ್ನು ಓದಿ: ಗಡಿ ರಸ್ತೆಗಳ ಸಂಸ್ಥೆಯಲ್ಲಿ 876 ಹುದ್ದೆ ನೇಮಕ; SSLC, PUC ಆದವರಿಗೆ ಭರ್ಜರಿ ಉದ್ಯೋಗ

    ಅರ್ಜಿ ಸಲ್ಲಿಕೆ ವಿಧಾನ:

    -ನೇಮಕಾತಿ ಅಧಿಸೂಚನೆ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    -ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    -ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಈ ​ ವಿಳಾಸಕ್ಕೆ ಕಳುಹಿಸಬೇಕು.

    ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಸಹಾಯಕ ನಿರ್ದೇಶಕರು(ಆಡಳಿತ) ಇವರ ಕಚೇರಿ ದೂರವಾಣಿ ಸಂಖ್ಯೆ 080-22879464ಗೆ ಕರೆ ಮಾಡಬಹುದು
    Published by:Seema R
    First published: