RRC Western Railway Recruitment 2021 | ಕ್ರೀಡಾ ಕೋಟಾದಡಿ ಅರ್ಜಿ ಆಹ್ವಾನ: 92 ಸಾವಿರ ರೂ. ವರೆಗೆ ವೇತನ!

ಸೆಪ್ಟೆಂಬರ್ 13, ಹಾಗೂ ಈ ಹುದ್ದೆಯು ಯಾವುದೇ ಕೆಟಗರಿಗೆ ಮೀಸಲಾಗಿರದೇ ಎಲ್ಲಾ ಕೆಟಗರಿಯ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

JOB

JOB

  • Share this:

ಪಶ್ಚಿಮ ರೈಲ್ವೆ ವಲಯಕ್ಕೆ ವಿವಿಧ ಗ್ರೇಡ್ ಲೆವೆಲ್‌ನ 21 ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಪಶ್ಚಿಮ ರೈಲ್ವೆ ವಲಯಕ್ಕೆ ನೇಮಕಾತಿ ಮಾಡಲಿರುವ 21 ಹುದ್ದೆಗಳನ್ನು ಕ್ರೀಡಾ ಕೋಟಾದಡಿಯಲ್ಲಿ ನೇಮಕ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಅಗತ್ಯ ಕ್ರೀಡಾ ಅರ್ಹತೆ ಮತ್ತು ದಾಖಲೆಗಳು ಇದ್ದಲ್ಲಿ ಪಶ್ಚಿಮ ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 13, ಹಾಗೂ ಈ ಹುದ್ದೆಯು ಯಾವುದೇ ಕೆಟಗರಿಗೆ ಮೀಸಲಾಗಿರದೇ ಎಲ್ಲಾ ಕೆಟಗರಿಯ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಲು ಪಶ್ಚಿಮ ರೈಲ್ವೆ RRC-rrc-wr.com (https://rrc-wr.com/) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.ನೋಂದಣಿ ಪ್ರಕ್ರಿಯೆ ಆಗಸ್ಟ್ 4ರಿಂದ ಆರಂಭವಾಗಿದೆ. ಅಭ್ಯರ್ಥಿಗಳು ಅಧಿಕೃತ ಸೂಚನೆ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ (https://rrc-wr.com/rrwc/Sports/SPORTS_NOTIFICATION_2021-22.pdf)


ಆರ್ಆರ್ಸಿಪಶ್ಚಿಮರೈಲ್ವೆನೇಮಕಾತಿ2021ಅರ್ಹತೆ:-


ವಯಸ್ಸಿನನಿರ್ಬಂಧ:18 ರಿಂದ 25ರ ನಡುವಿನ ಎಲ್ಲಾ ಭಾರತೀಯ ನಿವಾಸಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವರ್ಗಕ್ಕೆ ಸೇರುವ ಅಭ್ಯರ್ಥಿಗಳಿಗೂ ಇದೇ ಕ್ರಮ ಅನ್ವಯವಾಗುತ್ತದೆ.


ಹಂತ 4/5: 4/5 ಹಂತದಲ್ಲಿರುವ ಪಶ್ಚಿಮ ರೈಲ್ವೆಯಲ್ಲಿ ಸಿ ಗುಂಪಿನ ಉದ್ಯೋಗ ಪಡೆಯಲು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ (ಹಿರಿಯ ವರ್ಗ) ಅಥವಾ ದೇಶವನ್ನು ಪ್ರತಿನಿಧಿಸಿರಬೇಕು ಅಥವಾ ಕನಿಷ್ಠ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನವನ್ನು ಪಡೆದಿರಬೇಕು (ಕಿರಿಯ/ಯುವ/ ಹಿರಿಯ ವರ್ಗ)/ ಏಷ್ಯನ್ ಆಟಗಳು (ಹಿರಿಯ ವರ್ಗ)/ ಕಾಮನ್ವೆಲ್ತ್ ಆಟಗಳು (ಹಿರಿಯ ವರ್ಗ)/ ವಿಶ್ವ ಚಾಂಪಿಯನ್‌ಶಿಪ್‌ಗಳು (ಜೂನಿಯರ್/ ಹಿರಿಯ ವರ್ಗ)/ ಯುವ ಒಲಿಂಪಿಕ್ಸ್/ ಚಾಂಪಿಯನ್ಸ್ ಟ್ರೋಫಿ (ಹಾಕಿ) ದೇಶವನ್ನು ಪ್ರತಿನಿಧಿಸಿರಬೇಕು.


ಹಂತ 2/3: 2/3 ಮಟ್ಟದಲ್ಲಿ ಪಶ್ಚಿಮ ರೈಲ್ವೆಯಲ್ಲಿ ಸಿ ಗುಂಪಿನ ಕೆಲಸ ಪಡೆಯಲು ಬಯಸುವ ಅಭ್ಯರ್ಥಿಗಳು ವಿಶ್ವಕಪ್ (ಜೂನಿಯರ್/ಯುವ/ಹಿರಿಯ ವರ್ಗ)/ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ (ಜೂನಿಯರ್/ಹಿರಿಯ ವಿಭಾಗ)/ದೇಶವನ್ನು ಪ್ರತಿನಿಧಿಸಿರಬೇಕು ಹಾಗೂ ಏಷ್ಯನ್ ಗೇಮ್ಸ್ (ಹಿರಿಯ ವಿಭಾಗ)/ಕಾಮನ್‌ವೆಲ್ತ್‌ ಗೇಮ್ಸ್ (ಹಿರಿಯ ವರ್ಗ)/ಯೂತ್ ಒಲಿಂಪಿಕ್ಸ್/ಚಾಂಪಿಯನ್ಸ್ ಟ್ರೋಫಿ (ಹಾಕಿ) ದೇಶವನ್ನು ಪ್ರತಿನಿಧಿಸಿರಬೇಕು.


ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಸ್ಥಾನವನ್ನು ಪಡೆದಿರಬೇಕು (ಕಿರಿಯ/ಹಿರಿಯ ವರ್ಗ/ಏಷ್ಯನ್ ಚಾಂಪಿಯನ್‌ಶಿಪ್/ಏಷ್ಯಾ ಕಪ್ (ಜೂನಿಯರ್/ಸೀನಿಯರ್ ವಿಭಾಗ)/ದಕ್ಷಿಣ ಏಷ್ಯನ್ ಫೆಡರೇಶನ್ ಆಟಗಳು (ಹಿರಿಯ ವಿಭಾಗ)/ಯುಎಸ್‌ಐಸಿ (ವಿಶ್ವ ರೈಲ್ವೆ) ಚಾಂಪಿಯನ್‌ಶಿಪ್ (ಹಿರಿಯ ವರ್ಗ)/ವಿಶ್ವ ವಿಶ್ವವಿದ್ಯಾಲಯ ಗೇಮ್ಸ್‌ಸರ್ಕಾರ್ಅಥವಾ ಹಿರಿಯ/ಯುವ/ಕಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಅವನು/ಅವಳು ಕನಿಷ್ಠ ಮೂರನೇ ಸ್ಥಾನ ಪಡೆದಿರಬೇಕು.


ಅಭ್ಯರ್ಥಿಗಳು 12ನೇ ತರಗತಿ ಪರೀಕ್ಷೆ ಅಥವಾ ಅದರ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


ನೇರವಾಗಿ ಆರ್ಜಿ ಸಲ್ಲಿಸಲು ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ -https://rrc-wr.com/Sports/Login/index


ಪೋಸ್ಟ್ಗಳಮೀಸಲಾತಿ:-ಯಾವುದೇ ಪೋಸ್ಟ್‌ಗಳನ್ನು ಕಾಯ್ದಿರಿಸಲಾಗಿಲ್ಲ.


ನೇಮಕಾತಿ ಪ್ರಕ್ರಿಯೆ:- ಅಧಿಕೃತ ಅಧಿಸೂಚನೆಯಲ್ಲಿ (https://rrcwr.com/rrwc/Sports/SPORTS_NOTIFICATION_2021-22.pdf), ಆರ್‌ಆರ್‌ಸಿ ಅಭ್ಯರ್ಥಿಗಳನ್ನು ಟ್ರಯಲ್ಸ್, ಕ್ರೀಡಾ ಸಾಧನೆಗಳ ಮೌಲ್ಯಮಾಪನ ಮತ್ತು ಶೈಕ್ಷಣಿಕ ಹಾಗೂ ವಿದ್ಯಾರ್ಹತೆಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದೆ.


ಸಂಬಳ:


ಹಂತ 4: ರೂ 25,500-81,100


ಹಂತ 5: ರೂ 29,200-92,300


ಹಂತ 2: ರೂ 19,900-63,200


ಹಂತ 3: ರೂ 21,700-69,100

First published: