RRC Recruitment 2021: ಐಟಿಐ, 10th ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ..!

RRC Recruitment 2021: ಆಯ್ಕೆಯಾದ ಅಭ್ಯರ್ಥಿಗಳನ್ನು ಅಪ್ರೆಂಟಿಸ್​​ಗಳನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ಒಂದು ನಿರ್ದಿಷ್ಟ ಅವಧಿಗೆ ಅಪ್ರೆಂಟಿಸ್​ಶಿಪ್ ತರಬೇತಿ ನೀಡಲಾಗುತ್ತದೆ.

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

  • Share this:
RRC Recruitment 2021: ರೈಲ್ವೆ ಇಲಾಖೆಯು ಹಲವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ದಿನಾಂಕ ಮುಗಿಯುವುದರೊಳಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ರೈಲ್ವೆಯು(Northern Railway) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್(Apprentice) ಹುದ್ದೆಗಳನ್ನು ಭರ್ತಿ ಮಾಡಲು ಆನ್​ಲೈನ್(Online Mode)​ ಮೂಲಕ ಅರ್ಜಿ ಆಹ್ವಾನಿಸಿದೆ. ರೈಲ್ವೆ ನೇಮಕಾತಿ(Railway Recruitment) ಸೆಲ್ ನೀಡಿರುವ ಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ನಾಳೆಯಿಂದ ಅಂದರೆ ಸೆ.20ರಿಂದ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಬಳಿಕ ಅಪ್ಲಿಕೇಶನ್ ವಿಂಡೋವನ್ನು(Application window) ಅಕ್ಟೋಬರ್ 20ರ ನಂತರ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಹೇಳಿದೆ.

ಆರ್​ಆರ್​ಸಿ ನೇಮಕಾತಿ 2021(RRC Recruitment 2021)

  • ಹುದ್ದೆಗಳು-3093

  • ವಿದ್ಯಾರ್ಹತೆ-10ನೇ ತರಗತಿ/ ಐಟಿಐ ಪಾಸ್​

  • ನಾಳೆಯಿಂದಲೇ ಅರ್ಜಿ ಸಲ್ಲಿಕೆ ಪ್ರಾರಂಭ(ಸೆ.20)

  • ನೋಟಿಫಿಕೇಶನ್ ದಿನಾಂಕ- ಸೆಪ್ಟೆಂಬರ್ 16

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 20

  • ಹುದ್ದೆಯ ಹೆಸರು- ಅಪ್ರೆಂಟಿಸ್

  • ವಯೋಮಿತಿ-15-24 ವರ್ಷದೊಳಗಿನವರಾಗಿರಬೇಕು

  • ಆಯ್ಕೆ ಪ್ರಕ್ರಿಯೆ: ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. (ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು rrcnr.org ವೆಬ್​ಸೈಟ್​ಗೆ ಭೇಟಿ ನೀಡಬಹುದಾಗಿದೆ)

  • ಅಪ್ಲಿಕೇಶನ್ ಮೋಡ್: ಆನ್​ಲೈನ್

  • ಅಭ್ಯರ್ಥಿಗಳು ಕಡ್ಡಾಯವಾಗಿ 15 ವರ್ಷ ಮೇಲ್ಪಟ್ಟ ಹಾಗೂ 24 ವರ್ಷಕ್ಕಿಂತ ಕೆಳಗಿನವರಾಗಿರಬೇಕು.


ಇದನ್ನೂ ಓದಿ:IISc Bangalore Recruitment: ಮಾಸಿಕ ವೇತನ 1,66,541 ರೂ; ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ಎಸ್​ಎಸ್​ಎಲ್​ಸಿ(SSLC) ಹಾಗೂ ಐಟಿಐ(ITI) ಪಾಸಾದವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರು ಕೂಡಲೇ ಅರ್ಜಿ ಸಲ್ಲಿಸಿ.

ಆಯ್ಕೆಯಾದ ಅಭ್ಯರ್ಥಿಗಳನ್ನು ಅಪ್ರೆಂಟಿಸ್​​ಗಳನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ಒಂದು ನಿರ್ದಿಷ್ಟ ಅವಧಿಗೆ ಅಪ್ರೆಂಟಿಸ್​ಶಿಪ್ ತರಬೇತಿ ನೀಡಲಾಗುತ್ತದೆ. ಅವಧಿಯ ವಿವರಗಳು ಅಧಿಸೂಚನೆಯಲ್ಲಿ ಲಭ್ಯವಿರುತ್ತವೆ. ಅಭ್ಯರ್ಥಿಗಳಿಗೆ ಇತ್ತೀಚಿನ ಅಪ್​ಡೇಟ್​​ಗಳಿಗಾಗಿ ಅಧಿಕೃತ ವೆಬ್​ಸೈಟ್​​ನ್ನು ಟ್ರ್ಯಾಕ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ:IT Companies Hiring: ಐಟಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರಿಗೆ ಗುಡ್​ ನ್ಯೂಸ್: 120% ಸಂಬಳ ಹೆಚ್ಚಳ, ಬೋನಸ್ ಕೂಡ ಜಾಸ್ತಿ

ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Latha CG
First published: