RRC Recruitment 2021: ರೈಲ್ವೆ ನೇಮಕಾತಿ ಸೆಲ್(Railway Recruitment Cell) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಗ್ರೂಪ್ C (Group C Posts) ಹುದ್ದೆಗಳು ಖಾಲಿ ಇದ್ದು, 12 ನೇ ತರಗತಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಕ್ರೀಡಾ ಕೋಟಾ(Sports Quota)ದಡಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ನವೆಂಬರ್ 3 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 11 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ RRC ಅಧಿಕೃತ ವೆಬ್ಸೈಟ್(Official Website) rrcmas.in ಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ರೈಲ್ವೆ ನೇಮಕಾತಿ ಸೆಲ್ |
ಹುದ್ದೆಯ ಹೆಸರು |
ಗ್ರೂಪ್ ಸಿ |
ಒಟ್ಟು ಹುದ್ದೆಗಳು |
21 |
ವಿದ್ಯಾರ್ಹತೆ |
12ನೇ ತರಗತಿ, ಕ್ರೀಡಾ ಕೋಟಾ |
ಉದ್ಯೋಗದ ಸ್ಥಳ |
ಚೆನ್ನೈ |
ವೇತನ |
ನಿಯಮಾನುಸಾರ |
ಅರ್ಜಿ ಸಲ್ಲಿಸುವ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
03/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
11/12/2021 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11/12/2021
ಇದನ್ನೂ ಓದಿ: Indian Coast Guard Recruitment 2021: SSLC, ITI ಪಾಸಾದವರಿಗೆ ಇಂಡಿಯನ್ ಕೋಸ್ಟ್ ಗಾರ್ಡ್ನಲ್ಲಿ ಉದ್ಯೋಗ
ಅರ್ಜಿ ಶುಲ್ಕ:
- ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ SC, ST, ಮಹಿಳಾ, ಆರ್ಥಿಕ ಹಿಂದುಳಿದ ಅಭ್ಯರ್ಥಿಗಳು 250ರೂ. ಅರ್ಜಿ ಶುಲ್ಕ ಪಾವತಿಸಬೇಕು.
- ಇತರೆ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕ ಕಟ್ಟಬೇಕು.
- ಆನ್ಲೈನ್ ಮೂಲಕ ಇಂಟರ್ನೆಟ್ ಬ್ಯಾಂಕಿಂಗ್/ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿ ಕಟ್ಟಬೇಕು.
ಹುದ್ದೆಯ ಮಾಹಿತಿ:
ಗ್ರೂಪ್ 'C' ಲೆವೆಲ್-4/ಲೆವೆಲ್-5- 05 ಹುದ್ದೆಗಳು
ಗ್ರೂಪ್ 'C' ಲೆವೆಲ್-2/ಲೆವೆಲ್-3- 16 ಹುದ್ದೆಗಳು
ವಿದ್ಯಾರ್ಹತೆ:
ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ 12ನೇ ತರಗತಿ ಪಾಸಾಗಿರಬೇಕು. ಕ್ರೀಡಾ ಕೋಟಾದಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ:
ಗ್ರೂಪ್ 'C' ಲೆವೆಲ್-4/ಲೆವೆಲ್-5: 18-25 ವರ್ಷ
ಗ್ರೂಪ್ 'C' ಲೆವೆಲ್-2/ಲೆವೆಲ್-3: 18-25 ವರ್ಷ
ಉದ್ಯೋಗದ ಸ್ಥಳ:
ಗ್ರೂಪ್ ಸಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಮಿಳುನಾಡಿನ ಚೆನ್ನೈನಲ್ಲಿ ಉದ್ಯೋಗ ನೀಡಲಾಗುತ್ತದೆ.
ವೇತನ:
ಗ್ರೂಪ್ 'C' ಲೆವೆಲ್-4/ಲೆವೆಲ್-5: 7ನೇ ವೇತನ ಆಯೋಗದ ಅನ್ವಯ
ಗ್ರೂಪ್ 'C' ಲೆವೆಲ್-2/ಲೆವೆಲ್-3: 7ನೇ ವೇತನ ಆಯೋಗದ ಅನ್ವಯ
ಇದನ್ನೂ ಓದಿ: Western Railway Recruitment 2021: SSLC, PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ