RMRC Recruitment 2022: ಸಂಶೋಧನಾ ಸಹಾಯಕ ಸೇರಿ 6 ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನ - ಬೇಗ ಇಮೇಲ್ ಮಾಡಿ

Job News: ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳ ಸ್ವಯಂ ದೃಢೀಕರಣ ಮಾಡಿ, obesityprojectska2022@gmail.com ಈ  ಮೇಲ್​ ಐಡಿಗೆ ಕಳುಹಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಭುವನೇಶ್ವರ್ (RMRC) ಸಂಶೋಧನಾ ಸಹಾಯಕ ( Research Assistant) , ಪ್ರಾಜೆಕ್ಟ್ ತಂತ್ರಜ್ಞ-III ಹುದ್ದೆಗಳನ್ನು  ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಳೆದ ಹಲವು ದಿನಗಳಿಂದ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಹಾಕಬಹುದಾಗಿದ್ದು, ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದೆ. ಹಾಗಾಗಿ ತಡಮಾಡದೇ ಬೇಗ ನಿಮ್ಮ ಅರ್ಜಿಯನ್ನು  ಇಮೇಲ್ ಮೂಲಕ ಕಳುಹಿಸಿ.

ಯಾವುದೇ ಹುದ್ದೆಗೆ ಅರ್ಜಿ ಹಾಕುವ ಮುನ್ನ ಅದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ವೇತ, ಅರ್ಜಿ ಸಲ್ಲಿಸುವ ರೀತಿ, ಅನುಭವದ ವಿವರ , ಶೈಕ್ಷಣಿಕ ಅರ್ಹತೆ ಸೇರಿದಂತೆ ವಿವಿಧ ಮಾಹಿತಿಗಳನ್ನು ನಾವಿಲ್ಲಿ ನೀಡಿದ್ದೇವೆ.











































ಸಂಸ್ಥೆಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಭುವನೇಶ್ವರ (RMRC ಭುವನೇಶ್ವರ)
ಹುದ್ದೆಗಳ ಸಂಖ್ಯೆ06
ಉದ್ಯೋಗ ಸ್ಥಳಮೈಸೂರು - ಕರ್ನಾಟಕ
ಹುದ್ದೆಸಂಶೋಧನಾ ಸಹಾಯಕ, ಪ್ರಾಜೆಕ್ಟ್ ತಂತ್ರಜ್ಞ-III
ವೇತನರೂ.18000-31000/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆಸ್ನಾತಕೋತ್ತರ ಪದವಿ, ಡಿಪ್ಲೊಮಾ
ವಯೋಮಿತಿಗರಿಷ್ಠ ವಯಸ್ಸು 30 ವರ್ಷಗಳು.
ಅರ್ಜಿ ಸಲ್ಲಿಸುವ ಮೇಲ್​ ಐಡಿobesityprojectska2022@gmail.com
ವೆಬ್​ಸೈಟ್​ಹೆಚ್ಚಿನ ಮಾಹಿತಿಗೆ 
ನೋಟಿಫಿಕೇಶನ್ಇಲ್ಲಿ ಕ್ಲಿಕ್ ಮಾಡಿ 

ಖಾಲಿ ಇರುವ ಒಟ್ಟು 6 ಸಂಶೋಧನಾ ಸಹಾಯಕ, ಪ್ರಾಜೆಕ್ಟ್ ತಂತ್ರಜ್ಞ-III ಹುದ್ದೆಗಳ ಭರ್ತಿಗೆ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಭುವನೇಶ್ವರ್ (RMRC)ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿಯನ್ನು ಮೇಲ್ ಮಾಡಬಹುದಾಗಿದೆ. ಇನ್ನು ಹುದ್ದೆಗೆ 30 ವರ್ಷ ಒಳಗಿನ ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು,. ಆಯ್ಕೆಯಾದ ಸಂಶೋಧನಾ ಸಹಾಯಕರಿಗೆ ತಿಂಗಳಿಗೆ 31,000 ರೂ, ಪ್ರಾಜೆಕ್ಟ್ ತಂತ್ರಜ್ಞ-III: 18,000 ರೂ ವೇತನ ನೀಡಲಾಗುತ್ತದೆ.





















ಹುದ್ದೆಸಂಖ್ಯೆವೇತನಶೈಕ್ಷಣಿಕ ಅರ್ಹತೆ
ಸಂಶೋಧನಾ ಸಹಾಯಕ431,000 ರೂನ್ಯೂಟ್ರಿಷನ್, ಮಾನವಶಾಸ್ತ್ರ, ಸಮಾಜಶಾಸ್ತ್ರ, ಮಾನವ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಪ್ರಾಜೆಕ್ಟ್ ತಂತ್ರಜ್ಞ-III218,000 ರೂವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಡಿಪ್ಲೊಮಾ, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು.

ಸಂಸ್ಥೆಯ ಹೆಸರು: ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಭುವನೇಶ್ವರ (RMRC ಭುವನೇಶ್ವರ)

ಹುದ್ದೆಗಳ ಸಂಖ್ಯೆ: ಒಟ್ಟು 6

ಉದ್ಯೋಗ ಸ್ಥಳ: ಮೈಸೂರು - ಕರ್ನಾಟಕ

ಹುದ್ದೆಯ ಹೆಸರು: ಸಂಶೋಧನಾ ಸಹಾಯಕ, ಪ್ರಾಜೆಕ್ಟ್ ತಂತ್ರಜ್ಞ-III

ವೇತನ: ರೂ.18000-31000/- ಪ್ರತಿ ತಿಂಗಳು

ಹುದ್ದೆಯ ವಿವರ

ಸಂಶೋಧನಾ ಸಹಾಯಕ: 4

ಪ್ರಾಜೆಕ್ಟ್ ತಂತ್ರಜ್ಞ-III: 2

ಇದನ್ನೂ ಓದಿ: SSLC ಆಗಿದ್ರೆ ಇಲ್ಲಿದೆ ಅವಕಾಶ - 41 ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆ  

ಸಂಶೋಧನಾ ಸಹಾಯಕ: ನ್ಯೂಟ್ರಿಷನ್, ಮಾನವಶಾಸ್ತ್ರ, ಸಮಾಜಶಾಸ್ತ್ರ, ಮಾನವ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಪ್ರಾಜೆಕ್ಟ್ ತಂತ್ರಜ್ಞ-III: ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಡಿಪ್ಲೊಮಾ, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು.

ಅನುಭವದ ವಿವರಗಳು ಹೀಗಿದೆ.

ಸಂಶೋಧನಾ ಸಹಾಯಕ: ಅಭ್ಯರ್ಥಿಗಳು ಕ್ಷೇತ್ರ ದತ್ತಾಂಶ ಸಂಗ್ರಹಣೆಯಲ್ಲಿ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು ಮತ್ತು ಸಾಹಿತ್ಯದ ವಿಮರ್ಶೆ, ಅಂಕಿಅಂಶಗಳ ಪ್ಯಾಕೇಜ್‌ಗಳನ್ನು ಬಳಸಿಕೊಂಡು ಡೇಟಾ ವಿಶ್ಲೇಷಣೆ, ವರದಿ ಬರವಣಿಗೆಯಲ್ಲಿ ಸಹಾಯ ಇತ್ಯಾದಿಗಳಲ್ಲಿ ಅನುಭವ ಹೊಂದಿರಬೇಕು.

ಪ್ರಾಜೆಕ್ಟ್ ತಂತ್ರಜ್ಞ-III: ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಲ್ಲಿ 1 ವರ್ಷದ ಅನುಭವದೊಂದಿಗೆ 1 ವರ್ಷದ DMLT ಹೊಂದಿರಬೇಕು.

ವಯಸ್ಸಿನ ಮಿತಿ:

ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಭುವನೇಶ್ವರ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷಗಳು.

ವಯೋಮಿತಿ ಸಡಿಲಿಕೆ: ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಭುವನೇಶ್ವರ ನೇಮಕಾತಿ ಅಧಿಸೂಚನೆಯ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ವರ್ಗವಾರು ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಸಂದರ್ಶನ

ವೇತನ ವಿವರ

ಸಂಶೋಧನಾ ಸಹಾಯಕ: 31,000 ರೂ

ಪ್ರಾಜೆಕ್ಟ್ ತಂತ್ರಜ್ಞ-III: 18,000 ರೂ

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳ ಸ್ವಯಂ ದೃಢೀಕರಣ ಮಾಡಿ, obesityprojectska2022@gmail.com ಈ  ಮೇಲ್​ ಐಡಿಗೆ ಕಳುಹಿಸಬೇಕು.

ವೆಬ್​ಸೈಟ್​: rmrcbbsr.gov.in

ಇತರ ಕೆಲಸಗಳ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 16-03-2022

ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 23-03-2022
Published by:Sandhya M
First published: