RLDA Recruitment 2022 : DGM, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಪೋಸ್ಟ್ಗಳನ್ನು ಭರ್ತಿ ಮಾಡಲು ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ (Rail Land Development Authority) (RLDA) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 18ರ ಮೊದಲು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನದನ್ನು ತಿಳಿಯಲು ಮುಂದೆ ಓದಿ.
ಸಂಸ್ಥೆಯ ಹೆಸರು |
ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ (RLDA) |
ಹುದ್ದೆಗಳ ಸಂಖ್ಯೆ |
07 |
ಉದ್ಯೋಗ ಸ್ಥಳ |
ಲಕ್ನೋ - ಬೆಂಗಳೂರು - ಭುವನೇಶ್ವರ - ಅಹಮದಾಬಾದ್ |
ಹುದ್ದೆಯ ಹೆಸರು |
ಡಿಜಿಎಂ, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ |
ಸಂಬಳ |
RLDA ಮಾನದಂಡಗಳ ಪ್ರಕಾರ |
ಶೈಕ್ಷಣಿಕ ಅರ್ಹತೆ |
ಡಿಪ್ಲೊಮಾ, ಎಂಜಿನಿಯರಿಂಗ್ |
ಅರ್ಜಿ ಕಳುಹಿಸುವ ವಿಳಾಸ |
ಜನರಲ್ ಮ್ಯಾನೇಜರ್, ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ, ಯುನಿಟ್ ನಂ. 702- ಬಿ, 7 ನೇ ಮಹಡಿ, ಕನೆಕ್ಟಸ್ ಟವರ್ - II, ಡಿಎಂಆರ್ಸಿ ಕಟ್ಟಡ, ಅಜ್ಮೇರಿ ಗೇಟ್, ದೆಹಲಿ - 110002 |
ಅರ್ಜಿ ಕಳುಹಿಸುವ ಇ-ಮೇಲ್ |
jgmhr@rlda.railnet.gov.in |
ವೆಬ್ಸೈಟ್ |
ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
18-04-2022 |
ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ಖಾಲಿ ಇರುವ 7 ಡಿಜಿಎಂ, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಲಕ್ನೋ, ಬೆಂಗಳೂರು, ಭುವನೇಶ್ವರ, ಅಹಮದಾಬಾದ್ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದ್ದು, ಅಭ್ಯರ್ಥಿಗಳು ಡಿಪ್ಲೊಮಾ, ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ಸಂಸ್ಥೆಯ ಹೆಸರು: ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ (RLDA)
ಹುದ್ದೆಗಳ ಸಂಖ್ಯೆ: 7
ಉದ್ಯೋಗ ಸ್ಥಳ: ಲಕ್ನೋ - ಬೆಂಗಳೂರು - ಭುವನೇಶ್ವರ - ಅಹಮದಾಬಾದ್
ಹುದ್ದೆಯ ಹೆಸರು: ಡಿಜಿಎಂ, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್
ಸಂಬಳ: RLDA ಮಾನದಂಡಗಳ ಪ್ರಕಾರ
ಶೈಕ್ಷಣಿಕ ಅರ್ಹತೆ:
RLDA ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, ಎಂಜಿನಿಯರಿಂಗ್ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: 4 ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗೆ ಆದೇಶ - ಏಪ್ರಿಲ್ 15 ಕೊನೆಯ ದಿನ
ಅನುಭವದ ವಿವರಗಳು
ಡೆಪ್ಯುಟಿ ಜನರಲ್ ಮ್ಯಾನೇಜರ್ (DGM): ಅಭ್ಯರ್ಥಿಗಳು ಎಸ್ಟೇಟ್ ನಿರ್ವಹಣೆಯಲ್ಲಿ ಹಣಕಾಸಿನ ಅಂಶದ ಅನುಭವವನ್ನು ಹೊಂದಿರಬೇಕು.
ಮ್ಯಾನೇಜರ್/ಅಸಿಸ್ಟೆಂಟ್ ಮ್ಯಾನೇಜರ್ (ಪ್ರಾಜೆಕ್ಟ್): ಅಭ್ಯರ್ಥಿಗಳು ಲ್ಯಾಂಡ್ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿದ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.
ಮ್ಯಾನೇಜರ್/ಅಸಿಸ್ಟೆಂಟ್ ಮ್ಯಾನೇಜರ್ (ಎಲೆಕ್ಟ್ರಿಕಲ್): ಅಭ್ಯರ್ಥಿಗಳು ಎಸ್ಟೇಟ್ ಮ್ಯಾನೇಜ್ಮೆಂಟ್ನಲ್ಲಿ ಎಲೆಕ್ಟ್ರಿಕಲ್ ಅಂಶದ ಹಿಂದಿನ ಅನುಭವವನ್ನು ಹೊಂದಿರಬೇಕು.
ವಯಸ್ಸಿನ ಮಿತಿ:
ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು RLDA ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ವಯಸ್ಸಿನ ಸಡಿಲಿಕೆ:
ರೈಲು ಭೂಮಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜನರಲ್ ಮ್ಯಾನೇಜರ್, ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ, ಯುನಿಟ್ ನಂ. 702- ಬಿ, 7 ನೇ ಮಹಡಿ, ಕನೆಕ್ಟಸ್ ಟವರ್ - II, ಡಿಎಂಆರ್ಸಿ ಕಟ್ಟಡ, ಅಜ್ಮೇರಿ ಗೇಟ್, ದೆಹಲಿ - 110002 ಗೆ ಕಳುಹಿಸಬೇಕಾಗುತ್ತದೆ. ಅಲ್ಲದೇ, ಅಪ್ಲಿಕೇಶನ್ಗಳನ್ನು ಇಮೇಲ್ನಲ್ಲಿಯೂ ರವಾನಿಸಬಹುದು:
ಈ-ಮೇಲ್ ವಿಳಾಸ:
jgmhr@rlda.railnet.gov.in
ವೆಬ್ಸೈಟ್:
rlda.indianrailways.gov.in
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-03-2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-04-2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ