RIE Mysore Recruitment: ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ 25 ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ

ಪ್ರಾಧ್ಯಾಪಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. ಒಟ್ಟಾರೆ 25 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು, ಹುದ್ದೆಗಳ ಕುರಿತ ವಿವರ ಇಲ್ಲಿದೆ.

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ

  • Share this:
    ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ (Regional Institute of Education Mysore) ಖಾಲಿಯಿರುವ ವಿವಿಧ ವಿಷಯಗಳ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ಭರ್ತಿ ಮಾಡಲಾಗುವುದು. ಸಂಬಂಧ ಪಟ್ಟ ವಿಷಯದಲ್ಲಿ ಪಿಎಚ್​ಡಿ, ಸ್ನಾತಕೋತ್ತರ ಪದವಿ ಹೊಂದಿದ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಜೂನ್​ 1 ರಿಂದ 4ನೇ ತಾರೀಖಿನವರೆಗೆ ವಾಕ್​-ಇನ್​- ಇಂಟರ್ವ್ಯೂ ನಡೆಯಲಿದೆ.

    ಪ್ರಾಧ್ಯಾಪಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. ಒಟ್ಟಾರೆ 25 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು, ಹುದ್ದೆಗಳ ಕುರಿತ ವಿವರ ಇಲ್ಲಿದೆ.

















































































































    ಹುದ್ದೆಗಳುಹುದ್ದೆ ಸಂಖ್ಯೆವಾಕ್​ ಇನ್​ ಇಂಟರ್​ವ್ಯೂ ನಡೆಯುವ ದಿನಾಂಕ
    ಭೌತಶಾಸ್ತ್ರ ಪ್ರಾಧ್ಯಾಪಕ1ಜೂನ್​ 1 ಬೆಳಗ್ಗೆ 10 ಗಂಟೆಗೆ
    ರಸಾಯನಶಾಸ್ತ್ರ ಪ್ರಾಧ್ಯಾಪಕ1 1 ಜೂನ್ ಬೆಳಗ್ಗೆ​ 11. 30ಕ್ಕೆ
    ರಸಾಯನಶಾಸ್ತ್ರ ಸಹಾಯಕ ಪ್ರಾಧ್ಯಾಪಕ (ಫಿಸಿಕಲ್, ಇನ್‌ಆರ್ಗ್ಯಾನಿಕ್, ಅನಾಲಿಟಿಕಲ್)031 ಜೂನ್​ ಮಧ್ಯಾಹ್ನ 2ಕ್ಕೆ
    ಜೂವಾಲಜಿ ಅಸಿಸ್ಟಂಟ್ ಪ್ರೊಫೆಸರ್11 ಜೂನ್​ ಸಂಜೆ 4. 30ಕ್ಕೆ
    ಪೆಡಾಗೊಜಿ ಆಫ್ ಫಿಸಿಕಲ್ ಸೈನ್ಸ್‌ ಸಹಾಯಕ ಪ್ರಾಧ್ಯಾಪಕ (ಫಿಸಿಕ್ಸ್‌):12 ಜೂನ್​ ಬೆಳಗ್ಗೆ 10ಗಂಟೆಗೆ
    ಪೆಡಾಗೊಜಿ ಆಫ್ ಫಿಸಿಕಲ್ ಸೈನ್ಸ್‌ ಸಹಾಯಕ ಪ್ರಾಧ್ಯಾಪಕ (ಕೆಮಿಸ್ಟ್ರಿ):12 ಜೂನ್​ ಬೆಳಗ್ಗೆ 11ಗಂಟೆಗೆ
    ವಿಶೇಷ ಶಿಕ್ಷಣ ಸಹಾಯಕ ಪ್ರಾಧ್ಯಾಪಕ12 ಜೂನ್​ ಮಧ್ಯಾಹ್ನ 12ಕ್ಕೆ
    ಮನಃಶಾಸ್ತ್ರ ಸಹಾಯಕ ಪ್ರಾಧ್ಯಾಪಕ12 ಜೂನ್​ ಮಧ್ಯಾಹ್ನ 2ಕ್ಕೆ
    ಪೆಡಾಗೋಜಿ ಆಫ್‌ ಮ್ಯಾಥೆಮೆಟಿಕ್ಸ್‌ ಸಹಾಯಕ ಪ್ರಾಧ್ಯಾಪಕ12 ಜೂನ್​ ಮಧ್ಯಾಹ್ನ 2. 30ಕ್ಕೆ
    ಮನಃಶಾಸ್ತ್ರ / ಮಾರ್ಗದರ್ಶಿ ಮತ್ತು ಕೌನ್ಸಿಲರ್ ಸಹಾಯಕ ಪ್ರಾಧ್ಯಾಪಕ12 ಜೂನ್​ ಮಧ್ಯಾಹ್ನ 4. 30ಕ್ಕೆ
    ಶಿಕ್ಷಣ, ಆರೋಗ್ಯ/ ಫಿಸಿಕಲ್ ಎಜುಕೇಷನ್‌ ಸಹಾಯಕ ಪ್ರಾಧ್ಯಾಪಕ13 ಜೂನ್​ ಬೆಳಗ್ಗೆ 10ಕ್ಕೆ
    ಪೆಡಾಗೊಜಿ ಆಫ್ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ13 ಜೂನ್​ ಬೆಳಗ್ಗೆ 11ಕ್ಕೆ
    ಐಸಿಟಿ ಶಿಕ್ಷಣ ಸಹಾಯಕ ಪ್ರಾಧ್ಯಾಪಕ13 ಜೂನ್​ ಬೆಳಗ್ಗೆ 12ಕ್ಕೆ
    ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ13 ಜೂನ್​ ಮಧ್ಯಾಹ್ನ 2ಕ್ಕೆ
    ಭೂಗೋಳಶಾಸ್ತ್ರ ಸಹಾಯಕ ಪ್ರಾಧ್ಯಾಪಕ13 ಜೂನ್​ ಮಧ್ಯಾಹ್ನ 3.30ಕ್ಕೆ
    ಇತಿಹಾಸ ಸಹಾಯಕ ಪ್ರಾಧ್ಯಾಪಕ13 ಜೂನ್​ ಮಧ್ಯಾಹ್ನ 4.30ಕ್ಕೆ
    ಪ್ರೊಡ್ಯುಸರ್ ಗ್ರೇಡ್‌14 ಜೂನ್​ ಬೆಳಗ್ಗೆ 10ಕ್ಕೆ
    ಸೌಂಡ್ ರೆಕಾರ್ಡ್‌ಡಿಸ್ಟ್‌14 ಜೂನ್​ ಬೆಳಗ್ಗೆ 11ಕ್ಕೆ
    ಟೆಕ್ನಿಷಿಯನ್ ಗ್ರೇಡ್‌14 ಜೂನ್​ ಬೆಳಗ್ಗೆ 12ಕ್ಕೆ
    ಲ್ಯಾಬ್ ಅಸಿಸ್ಟಂಟ್ (ಭೌತಶಾಸ್ತ್ರ)14 ಜೂನ್​ ಮಧ್ಯಾಹ್ನ 2ಕ್ಕೆ
    ಲ್ಯಾಬ್ ಅಸಿಸ್ಟಂಟ್ (ಕಂಪ್ಯೂಟರ್​ ಸೈನ್ಸ್​)14 ಜೂನ್​ ಮಧ್ಯಾಹ್ನ 4.30ಕ್ಕೆ

    ವಿದ್ಯಾರ್ಹತೆ: ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎಂಎ/ ಎಂಎಸ್ಸಿ ಪದವಿ ಹೊಂದಿರಬೇಕು. ಜೊತೆಗೆ ಕೆಎಸ್‌ಇಟಿ, ಎನ್‌ಇಟಿ, ಪಿಹೆಚ್‌ಡಿ ಪದವಿ ಪಾಸ್ ಮಾಡಿರಬೇಕು. ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ನಿಗದಿಪಡಿಸಿದ ಕನಿಷ್ಠ ಕಾರ್ಯಾನುಭವ, ಇತರೆ ಅರ್ಹತೆಗಳನ್ನು ಹೊಂದಿರಬೇಕು.

    ಇದನ್ನು ಓದಿ: ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ

    ವಯೋಮಿತಿ: ಅಧಿಕೃತ ಅಧಿಸೂಚನೆ ಹಾಗೂ ಯುಜಿಸಿ, ಎಸ್ಇ ಇಆರ್​ಟಿ ಮತ್ತು ಸರ್ಕಾರದ ವಯೋಮಿತಿ ಅನುಸಾರ

    ವಯೋಮಿತಿ ಸಡಿಲಿಕೆ:
    ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸರ್ಕಾರಿ ನಿಯಮ ಅನುಸಾರ

    ವೇತನ:
    ಪ್ರಾಧ್ಯಾಕರ ಹುದ್ದೆಗಳಿಗೆ 1 ಲಕ್ಷ ರೂ ಮಾಸಿಕ
    ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ 45 ಸಾವಿರ ಮಾಸಿಕ, ಉಳಿದಂತೆ ಆಯಾ ಹುದ್ದೆಗಳಿಗೆ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ನಿಗದಿ ಪಡಿಸಿದ ನಿಯಮದ ಅನುಸಾರ

    ಇದನ್ನು ಓದಿ: ಸಹಾಯಕ ಅಧಿಕಾರಿ ಹುದ್ದೆ ನೇಮಕಾತಿ; ಮಾಸಿಕ 1,20,000 ರೂವರೆಗೆ ವೇತನ

    ಆಯ್ಕೆ ವಿಧಾನ
    ವಾಕ್​-ಇನ್​-ಇಂಟರ್​ವ್ಯೂ

    ಪ್ರಮುಖ ದಿನಾಂಕ
    ಅಧಿಸೂಚನೆ ಹೊರಡಿಸಿದ ದಿನಾಂಕ ಮೇ 12, 2022
    ವಾಕ್​ ಇನ್​ ಇಂಟರ್​ ವ್ಯೂ ನಡೆಯುವ ದಿನಾಂಕ ಜೂನ್​​ 1 ರಿಂದ ಜೂನ್​ 4

    ಪ್ರಮುಖ ಲಿಂಕ್​ಗಳು
    ಅಧಿಸೂಚನೆಗೆ ನೋಡಲು ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್​: http://riemysore.ac.in/

    ಸೂಚನೆ :

    -ವಾಕ್​ ಇನ್​ ಇಂಟರ್​ವ್ಯೂ ನಲ್ಲಿ ಭಾಗಿಯಾಗು ಅಭ್ಯರ್ಥಿಗಳು ನಿಖರ ಮತ್ತು ಸರಿಯಾದ ದಾಖಲೆ ಸಮೇತ ನೇರ ಸಂದರ್ಶನಕ್ಕೆ ನಿಗದಿ ಪಡಿಸಿದ ಸಮಯದಲ್ಲಿ ಹಾಜರಾಗತಕ್ಕದ್ದು,
    ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಭಾಗಿಯಾದಲ್ಲಿ ಸ್ವಯಂ ದೃಡೀಕೃತ ಮಾಹಿತಿ ದಾಖಲೆಗಳು ಮತ್ತು ಪಾಸ್​ಪೋರ್ಟ್​ ಸೈಜ್​​ ಪೋಟೋವನ್ನು ವರಿಫಿಕೇಷನ್​ಗೆ ನೀಡಬೇಕು.

    -ಸಂದರ್ಶನಕ್ಕೆ ನೀಡಬೇಕಾದ ದಾಖಲೆಗಳು: ಪಾಸ್​​ಫೋರ್ಟ್​ ಸೈಜ್​ ಫೋಟೋ, ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಪಾಸ್ ಸರ್ಟಿಫಿಕೇಟ್, ಹುದ್ದೆಗೆ ನಿಗದಿತ ಶೈಕ್ಷಣಿಕ ದಾಖಲೆ, ಎನ್‌ಇಟಿ, ಕೆಎಸ್‌ಇಟಿ, ಪಿಹೆಚ್‌ಡಿ ಪಾಸ್ ಸರ್ಟಿಫಿಕೇಟ್, ಕಾರ್ಯಾನುಭವ ದಾಖಲೆ, ಇತರೆ

    -ಈಗಾಗಲೇ ಸಂಸ್ಥೆಯಲ್ಲಿ ಮೂರು ಅವಧಿಗೆ ಕಾರ್ಯ ನಿರ್ವಹಿಸಿರುವ ಅಭ್ಯರ್ಥಿಗಳು ಈ ಮೇಲ್ಕಂಡ ಹುದ್ದೆ ಸಂದರ್ಶನಕ್ಕೆ ಹಾಜರಾಗಲು ಅರ್ಹರಾಗಿರುವುದಿಲ್ಲ.
    Published by:Seema R
    First published: