RIE Mysore Recruitment 2021: ತಿಂಗಳ ಸಂಬಳ ₹45,000, ನೇರ ಸಂದರ್ಶನ, ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇದೇ ಅಕ್ಟೋಬರ್ 21ರಿಂದ 23ರವರೆಗೆ ಮೈಸೂರು ಪ್ರಾದೇಶಿಕ ಶಿಕ್ಷಣ(RIE) ಸಂಸ್ಥೆ ನಡೆಸುವ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ

  • Share this:
RIE Mysore Recruitment 2021: ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯು(Regional Institute of Education) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 11 ಹುದ್ದೆಗಳು ಖಾಲಿ ಇದ್ದು, ಬಿ.ಎಸ್ಸಿ(B.Sc), ಬಿಸಿಎ(BCA), ಎಂಎಸ್ಸಿ(M.Sc), ಮಾಸ್ಟರ್ ಡಿಗ್ರಿ(Master Degree), ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್(Master of Library Science) ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಹಾಯಕ ಪ್ರಾಧ್ಯಾಪಕ(Assistant Professor), ಕಂಪ್ಯೂಟರ್ ಸಹಾಯಕ(Computer Assistant), ಜೂನಿಯರ್ ಪ್ರಾಜೆಕ್ಟ್​ ಫೆಲೋ(Junior Project Fellow), ಸೆಮಿ-ಪ್ರೊಫೆಸನಲ್ ಅಸಿಸ್ಟೆಂಟ್(Semi-Professional Assistant), ಪ್ರೊಫೆಸನಲ್ ಅಸಿಸ್ಟೆಂಟ್(Professional Assistant) ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸಲಾಗುವುದಿಲ್ಲ. ಸಂದರ್ಶನದ(Walk-in-Interview) ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇದೇ ಅಕ್ಟೋಬರ್ 21ರಿಂದ 23ರವರೆಗೆ ಮೈಸೂರು ಪ್ರಾದೇಶಿಕ ಶಿಕ್ಷಣ(RIE) ಸಂಸ್ಥೆ ನಡೆಸುವ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.

ಮೈಸೂರಿನ ಆರ್​​ಐಇನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹೋಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಸಂದರ್ಶನ, ಸಂದರ್ಶನದ ಸ್ಥಳ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.



































  ಸಂಸ್ಥೆ ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು
ಹುದ್ದೆಯ ಹೆಸರು  ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಅಸಿಸ್ಟೆಂಟ್, ಜೂನಿಯರ್ ಪ್ರಾಜೆಕ್ಟ್​ ಫೆಲೋ, ಸೆಮಿ ಪ್ರೊಫೆಶನಲ್ ಅಸಿಸ್ಟೆಂಟ್, ಪ್ರೊಫೆಶನಲ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು 11
ವಿದ್ಯಾರ್ಹತೆ ಬಿಎಸ್ಸಿ, ಬಿಸಿಎ, ಎಂಎಡ್, ಎಂಸ್ಸಿ, ಮಾಸ್ಟರ್ ಡಿಗ್ರಿ, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್​
ಕೆಲಸದ ಸ್ಥಳ ಮೈಸೂರು
ಸಂಬಳ ಮಾಸಿಕ ವೇತನ ₹17,000- ₹45,000
ಆಯ್ಕೆ ಪ್ರಕ್ರಿಯೆ ಸಂದರ್ಶನ
ಸಂದರ್ಶನದ ದಿನಾಂಕ ಅಕ್ಟೋಬರ್ 21-ಅಕ್ಟೋಬರ್ 23, 2021

ಪ್ರಮುಖ ದಿನಾಂಕಗಳು

ನೋಟಿಫಿಕೇಶನ್ ದಿನಾಂಕ: 08/10/2021
ಸಂದರ್ಶನದ ದಿನಾಂಕ: ಅಕ್ಟೋಬರ್ 21ರಿಂದ ಅಕ್ಟೋಬರ್ 23, 2021

ಹುದ್ದೆಯ ಮಾಹಿತಿ

ಹುದ್ದೆಯ ಹೆಸರು
ಹುದ್ದೆಯ ಸಂಖ್ಯೆ

ಅಸಿಸ್ಟೆಂಟ್ ಪ್ರೊಫೆಸರ್
05

ಪ್ರೊಫೆಸನಲ್ ಅಸಿಸ್ಟೆಂಟ್
01

ಸೆಮಿ ಪ್ರೊಫೆಸನಲ್ ಅಸಿಸ್ಟೆಂಟ್
01

ಕಂಪ್ಯೂಟರ್ ಅಸಿಸ್ಟೆಂಟ್
01

ಜೂನಿಯರ್ ಪ್ರಾಜೆಕ್ಟ್​ ಫೆಲೋ
03

ಒಟ್ಟು
11

ವಿದ್ಯಾರ್ಹತೆ:

ಅಸಿಸ್ಟೆಂಟ್ ಪ್ರೊಫೆಸರ್- ಸ್ನಾತಕೋತ್ತರ ಪದವಿ

ಪ್ರೊಫೆಸನಲ್ ಅಸಿಸ್ಟೆಂಟ್- ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್, ಎಂಎಡ್, ಎಂ.ಪಿಎಡ್-ಶೇ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಸೆಮಿ ಪ್ರೊಫೆಸನಲ್ ಅಸಿಸ್ಟೆಂಟ್- ಕಲಾ/ವಿಜ್ಞಾನ/ವಾಣಿಜ್ಯ/ ಬ್ಯಾಚೆಲರ್ ಆಫ್ ಲೈಬ್ರರಿ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿರಬೇಕು, ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಕಂಪ್ಯೂಟರ್​ ಅಸಿಸ್ಟೆಂಟ್- ಬಿಎಸ್ಸಿ/ಎಂಎಸ್ಸಿ, ಬಿಸಿಎ(ಕಂಪ್ಯೂಟರ್ ಸೈನ್ಸ್​)

ಜೂನಿಯರ್ ಪ್ರಾಜೆಕ್ಟ್ ಫೆಲೋ- ಎಜುಕೇಶನ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು, ಎಂಎಡ್, ಬಿಎಸ್ಸಿ ಮಾಡಿರಬೇಕು.



ವಯೋಮಿತಿ:

ಅಸಿಸ್ಟೆಂಟ್ ಪ್ರೊಫೆಸರ್- ಯುಜಿಸಿ/ಎನ್​​ಸಿಇಆರ್​​ಟಿ/ಜಿಒಐ ನಿಯಮಗಳಾನುಸಾರ

ಪ್ರೊಫೆಸನಲ್ ಅಸಿಸ್ಟೆಂಟ್- 30 ವರ್ಷ ಮೀರಿರಬಾರದು

ಸೆಮಿ ಪ್ರೊಫೆಸನಲ್ ಅಸಿಸ್ಟೆಂಟ್- 27 ವರ್ಷ ಮೀರಿರಬಾರದು

ಕಂಪ್ಯೂಟರ್ ಅಸಿಸ್ಟೆಂಟ್-35 ವರ್ಷ ಮೀರಿರಬಾರದು

ಜೂನಿಯರ್ ಪ್ರಾಜೆಕ್ಟ್​ ಫೆಲೋ- 30 ವರ್ಷ ಮೀರಿರಬಾರದು



ಸಂಬಳ:

ಅಸಿಸ್ಟೆಂಟ್ ಪ್ರೊಫೆಸರ್ - ₹ 45,000

ಪ್ರೊಫೆಸನಲ್ ಅಸಿಸ್ಟೆಂಟ್- ₹23,000

ಸೆಮಿ-ಪ್ರೊಫೆಸನಲ್ ಅಸಿಸ್ಟೆಂಟ್- ₹19,000

ಕಂಪ್ಯೂಟರ್ ಅಸಿಸ್ಟೆಂಟ್- ₹ 17,000

ಜೂನಿಯರ್ ಪ್ರಾಜೆಕ್ಟ್​ ಫೆಲೋ- ₹23,000

ಆಯ್ಕೆ ಪ್ರಕ್ರಿಯೆ:

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


 

 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: