Create a Perfect Resume: ಬೇಗನೇ ಕೆಲಸ ಸಿಗಬೇಕು ಅಂದ್ರೆ ನಿಮ್ಮ ರೆಸ್ಯೂಮ್​ ಹೀಗಿರಲಿ..!

ಎಲ್ಲಾ ಕೌಶಲ್ಯಗಳು, ಅನುಭವಗಳನ್ನು ಹೊಂದಿದ್ದರೂ ನಿಮ್ಮ ರೆಸ್ಯೂಮ್‌ನಲ್ಲಿ ನೀವು ಆ ಅಂಶಗಳನ್ನು ಸ್ಪಷ್ಟವಾಗಿ ನಮೂದಿಸದೇ ಇದ್ದರೆ, ನೀವು ಅರ್ಜಿ ಸಲ್ಲಿಸಿರುವ ಉದ್ಯೋಗಕ್ಕೆ   ಅರ್ಹರಲ್ಲ ಎಂಬುದಾಗಿ ನಿರ್ಧರಿಸಲಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಭವಿಷ್ಯದಲ್ಲಿ ಉತ್ತಮ ಉದ್ಯೋಗ ಹೊಂದಿ ನೆಮ್ಮದಿಯ ಜೀವನ ನಡೆಸಬೇಕು ಎಂಬುದು ಪ್ರತಿಯೊಬ್ಬರ ಅಭಿಲಾಶೆಯಾಗಿರುತ್ತದೆ. ಈ ಉತ್ತಮ ಉದ್ಯೋಗ(Good Job) ಪಡೆಯಲು ಮುಖ್ಯವಾಗಿ ಬೇಕಾಗಿರುವುದು ಅತ್ಯುತ್ತಮ ಸಂವಹನ ಕೌಶಲ್ಯ ಹಾಗೂ ಆಕರ್ಷಕವಾಗಿರುವ ರೆಸ್ಯೂಮ್. ನಿಮ್ಮ ರೆಸ್ಯೂಮ್(Resume) ಆಕರ್ಷಕವಾಗಿದ್ದರೆ(Attractive) ಹಾಗೂ ವೃತ್ತಿಗೆ(Job) ಅಗತ್ಯವಾಗಿರುವ ಎಲ್ಲಾ ಅಂಶಗಳನ್ನು ರೆಸ್ಯೂಮ್ ಹೊಂದಿದ್ದರೆ ಮಾತ್ರವೇ ನೇಮಕಾತಿದಾರರು ನಿಮ್ಮೆಡೆಗೆ ಆಕರ್ಷಿತರಾಗಿ ನೀವು ಬಯಸುವ ಉದ್ಯೋಗ ನೀಡುತ್ತಾರೆ. ಒಂದು ಉತ್ತಮ ರೆಸ್ಯೂಮ್‌ನಲ್ಲಿರಬೇಕಾದ ಅಂಶಗಳೇನು..? ನೂರಾರು ಉದ್ಯೋಗ ಅರ್ಜಿಗಳಿದ್ದರೂ ನಿಮ್ಮ ರೆಸ್ಯೂಮ್ ಎದ್ದುಕಾಣುವಂತಿರಲು ಅದನ್ನು ಹೇಗೆ ಸಿದ್ಧಪಡಿಸಬೇಕು ಮೊದಲಾದ ಅಂಶಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ.

1. ಉದ್ಯೋಗದಲ್ಲಿ ನಿಮ್ಮ ಪಾತ್ರ ಹಾಗೂ ಜವಾಬ್ದಾರಿಗಳು (Roles and Responsibilities)

ನೀವು ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕುತ್ತೀರಿ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಉದ್ಯೋಗದಲ್ಲಿ ನಮೂದಿಸಿರುವ ಅಂಶಗಳು ನಿಮ್ಮ ರೆಸ್ಯೂಮ್‌ನಲ್ಲಿರುವ ಅಂಶಗಳಿಗೆ ಸರಿಹೊಂದುತ್ತದೆಯೇ ಎಂಬುದನ್ನು ಪರಿಶೀಲಿಸುವುದಾಗಿದೆ. ಹಾಗೆ ಇಲ್ಲದಿದ್ದರೆ ಉದ್ಯೋಗಕ್ಕೆ ತಕ್ಕಂತೆ ನಿಮ್ಮ ರೆಸ್ಯೂಮ್‌ನಲ್ಲಿರುವ ಅಂಶಗಳನ್ನು ಎಡಿಟ್ ಮಾಡಿ. ನಿಮ್ಮ ಹಿಂದಿನ ವೃತ್ತಿಯಲ್ಲಿ ನೀವು ಮಾಡುತ್ತಿದ್ದ ಕೆಲಸಗಳು ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ.

2. ವೃತ್ತಿ ಅನುಭವ( Experience)

ನಿಮ್ಮ ರೆಸ್ಯೂಮ್‌ನಲ್ಲಿ ನೀವು ನಮೂದಿಸಬೇಕಾಗಿರುವ ಇನ್ನೊಂದು ಅಂಶವೆಂದರೆ ವೃತ್ತಿ ಅನುಭವವಾಗಿದೆ. ಒಂದು ವೃತ್ತಿಯಲ್ಲಿ ಆರು ತಿಂಗಳ ಅನುಭವ ಇನ್ನೊಂದು ವೃತ್ತಿಯಲ್ಲಿ ನಾಲ್ಕು ವರ್ಷಗಳ ಅನುಭವ ಹೀಗೆ ವೃತ್ತಿಯಲ್ಲಿ ವೈವಿಧ್ಯಮಯವಾಗಿರುವ ಅನುಭವಗಳನ್ನು ನೀವು ಹೊಂದಿದ್ದರೆ ಅದನ್ನು ಪ್ರಸ್ತುತ ಉದ್ಯೋಗದ ಅಂಶಗಳಿಗೆ ತಕ್ಕಂತೆ ಉಲ್ಲೇಖಿಸಿ. ಯಾವುದಾದರೂ ಉನ್ನತ ಮಟ್ಟದ ಪ್ರಾಜೆಕ್ಟ್‌ನಲ್ಲಿ ನೀವು ಕೆಲಸ ಮಾಡಿದ್ದರೆ ಅದನ್ನು ತಪ್ಪದೆ ನಮೂದಿಸಿ.

ಇದನ್ನೂ ಓದಿ:Jobs in Flipkart: ಫ್ಲಿಪ್​ಕಾರ್ಟ್​ನಲ್ಲಿ Part Time ಕೆಲಸಗಳು ಖಾಲಿ ಇವೆ, ನೀವೂ ಟ್ರೈ ಮಾಡಬಹುದು ನೋಡಿ..!

3. ಕೌಶಲ್ಯಗಳು( Skills)

ನಿಮ್ಮ ಹಿಂದಿನ ವೃತ್ತಿ ಪಾತ್ರಗಳಿಗೆ ಅನುಗುಣವಾಗಿ ಸಂಬಂಧಿತ ಕೌಶಲ್ಯಗಳು ಹಾಗೂ ಅವಶ್ಯಕತೆಗಳನ್ನು ನಮೂದಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಕೌಶಲ್ಯಗಳು ವೃತ್ತಿಯಲ್ಲಿ ನೀವು ಹೊಂದಿರುವ ಪರಿಣಿತಿಯನ್ನು ಮೌಲ್ಯೀಕರಿಸುತ್ತದೆ.

4. ಫಲಿತಾಂಶಗಳು ಹಾಗೂ ಸಾಧನೆಗಳು( Results and Achievements)

ನೇಮಕಾತಿದಾರರು ಫಲಿತಾಂಶಗಳನ್ನು ನೋಡಲು ಇಷ್ಟಪಡುತ್ತಾರೆ. ಸೇಲ್ಸ್ ಮ್ಯಾನೇಜರ್ ಆಗಿ ನಿಮ್ಮ ಟಾರ್ಗೆಟ್ ಅನ್ನು ನೀವು ಸಾಧಿಸಿದ್ದರೆ ಉದಾಹರಣೆಗೆ ನಿಮ್ಮ ಟಾರ್ಗೆಟ್ ಅನ್ನು ಶೇಕಡಾವಾರಲ್ಲಿ ನಮೂದಿಸಿ ಹಾಗೂ ಇದನ್ನು ಹೇಗೆ ಸಾಧಿಸಿರುವಿರಿ ಎಂಬುದನ್ನು ವಿವರಿಸಿ

5. ಶಿಕ್ಷಣ( Education)


ನೀವು ಸಂಬಂಧಿತ ಶಿಕ್ಷಣ ಪ್ರಮಾಣಪತ್ರಗಳನ್ನು ನಮೂದಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಅಪ್ಲೈ ಮಾಡುತ್ತಿರುವ ಉದ್ಯೋಗದ ಅಂಶಗಳಿಗೆ ನಿಮ್ಮ ವಿದ್ಯಾಭ್ಯಾಸ ಮಾನದಂಡಗಳು ಸರಿಹೊಂದುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

6. ಓದಲು ಸುಲಭವಾಗಿರಲಿ( Easy to Read)

ಒಂದೇ ರೀತಿಯ ಅಕ್ಷರ ಗಾತ್ರಗಳನ್ನು ನಿರ್ವಹಿಸಿ. ಸಾಧನೆಗಳು, ಜವಬ್ದಾರಿಗಳು, ಕೌಶಲ್ಯಗಳು ಮೊದಲಾದವುಗಳನ್ನು ಪ್ರಸ್ತುತಪಡಿಸಲು ಬುಲೆಟ್ ಪಾಯಿಂಟ್‌ಗಳನ್ನು ಬಳಸಿ. ಕಾಗುಣಿತ ಮತ್ತು ವ್ಯಾಕರಣ ದೋಷಗಳು ನಿಮ್ಮ ರೆಸ್ಯೂಮ್‌ನಲ್ಲಿರದಂತೆ ಎಚ್ಚರವಹಿಸಿ.

7. ರೆಸ್ಯೂಮ್‌ನಲ್ಲಿ ಸ್ಥಿರತೆ ಇರಲಿ( No Inconsistencies)

ನಿಮ್ಮ ರೆಸ್ಯೂಮ್‌ನಲ್ಲಿ ಸ್ಥಿರತೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಧ್ಯವಾದಷ್ಟು ಸಂಕ್ಷಿಪ್ತವಾಗಿ ವಿವರಗಳನ್ನು ನಮೂದಿಸಿ. ಉದ್ಯೋಗಕ್ಕೆ ಬೇಕಾಗಿರುವ ಎಲ್ಲಾ ಅಂಶಗಳನ್ನು ಸ್ಪಷ್ಟವಾಗಿ ನಮೂದಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಇದನ್ನೂ ಓದಿ:Tips for Getting Jobs: ವಿಪ್ರೋ, ಇನ್ಫೋಸಿಸ್, ಟಾಟಾ ಕಂಪನಿಗಳಲ್ಲಿ ನೇಮಕಾತಿ ಪ್ರಕ್ರಿಯೆ ಹೇಗಿರುತ್ತೆ? ಇಲ್ಲಿದೆ ಮಾಹಿತಿ

8. ಸಂಬಂಧಿತ ಭಾಷೆ( Relevant Language)

ಪ್ರಮುಖ ಕೀವರ್ಡ್‌ಗಳನ್ನು ನಮೂದಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉದ್ಯೋಗ ವಿವರಣೆಯನ್ನು ಸ್ಕ್ಯಾನ್ ಮಾಡಿ ಇದರಿಂದ ಭಾಷಾ ದೋಷಗಳು ಪತ್ತೆಯಾಗುತ್ತವೆ. ನಿಮ್ಮ ರೆಸ್ಯೂಮ್‌ ಅನ್ನು ಆದಷ್ಟು ಸರಳವಾಗಿಸಿ ಹಾಗೂ ನೀವು ಯಾವ ರೀತಿಯ ಉದ್ಯೋಗ ಪಾತ್ರಕ್ಕಾಗಿ ಅರಸುತ್ತಿದ್ದೀರಿ ಎಂಬುದನ್ನು ನೇಮಕಾತಿದಾರರಿಗೆ ತಿಳಿಯುವಂತಿರಲಿ.

9. ಫಾರ್ಮ್ಯಾಟ್ ಹಾಗೂ ಲೇಬಲ್:

ನೇಮಕಾತಿದಾರರಿಗೆ ನಿಮ್ಮ ರೆಸ್ಯೂಮ್‌ ಸುಲಭವಾಗಿ ತೆರೆಯುವಂತಿರಲಿ. ನಿಮ್ಮ ರೆಸ್ಯೂಮ್‌ ವೀಕ್ಷಿಸಲು ನೇಮಕಾತಿ ವ್ಯವಸ್ಥಾಕರಿಗೆ ಸಾಫ್ಟ್‌ವೇರ್ ಅಳವಡಿಸುವ ಸಂದಿಗ್ಧತೆ ಏರ್ಪಡದಂತೆ ನೋಡಿಕೊಳ್ಳಿ. ನಿಮ್ಮ ರೆಸ್ಯೂಮ್‌ ಸೇವ್ ಮಾಡುವಾಗ ಸೇವ್ ಮಾಡಿದ ಶೀರ್ಷಿಕೆಯಲ್ಲಿ ನಿಮ್ಮ ಹೆಸರನ್ನು ಸೇರಿಸಿ. (ಉದಾ. ರೇಖಾ, ಸುಮ ರೆಸ್ಯೂಮ್‌) ನಿಮ್ಮ ರೆಸ್ಯೂಮ್‌ ಅನ್ನು 1MB ಒಳಗೆ ಇರಿಸಿ ಇದರಿಂದ ಇನ್‌ಬಾಕ್ಸ್‌ನಲ್ಲಿ ತೊಡಕನ್ನುಂಟು ಮಾಡುವುದಿಲ್ಲ.

ಎಲ್ಲಾ ಕೌಶಲ್ಯಗಳು, ಅನುಭವಗಳನ್ನು ಹೊಂದಿದ್ದರೂ ನಿಮ್ಮ ರೆಸ್ಯೂಮ್‌ನಲ್ಲಿ ನೀವು ಆ ಅಂಶಗಳನ್ನು ಸ್ಪಷ್ಟವಾಗಿ ನಮೂದಿಸದೇ ಇದ್ದರೆ, ನೀವು ಅರ್ಜಿ ಸಲ್ಲಿಸಿರುವ ಉದ್ಯೋಗಕ್ಕೆ   ಅರ್ಹರಲ್ಲ ಎಂಬುದಾಗಿ ನಿರ್ಧರಿಸಲಾಗುತ್ತದೆ.
Published by:Latha CG
First published: