RDWSD Recruitment: ಚಿಕ್ಕಮಗಳೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ನೇಮಕಾತಿ

ಹೊರ ಗುತ್ತಿಗೆ ಆಧಾರದ ಮೇಲೆ ಮೇಲ್ಕಂಡ ಹುದ್ದೆಗೆ ಇಂಜಿನಿಯರಿಂಗ್​ , ಡಿಪ್ಲೊಮಾ  ಪದವೀಧರರಿಗೆ ಈ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಸರ್ಕಾರಿ ಕೆಲಸ

ಸರ್ಕಾರಿ ಕೆಲಸ

 • Share this:
  ಜಲ ಜೀವನ್ ಮಿಷನ್ ಅಡಿಯಲ್ಲಿ (Jal Jeevan Mission) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ (Rural Drinking Water and Sanitation Department )ಮತ್ತು ಉಪವಿಭಾಗಗಳಲ್ಲಿ ಖಾಲಿ ಇರುವ 18 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಚಿಕ್ಕಮಗಳೂರಿನಲ್ಲಿ ಖಾಲಿ ಇರುವ ಈ ಹುದ್ದೆಗಳನ್ನು ಮಾನವ ಸಂಪನ್ಮೂಲಕ ಸಂಸ್ಥೆಯ ಮೂಲಕ ಭರ್ತಿ ಮಾಡಲು ಆನ್​ಲೈನ್​ ಅರ್ಜಿಗಳನ್ನು ಆಹ್ವಾನಿಸಿದೆ. ಕಿರಿಯ ಸಮಾಲೋಚಕರ ಈ ಹುದ್ದೆಗೆ ಆಸಕ್ತಿ ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 24 ಆಗಿದೆ.

  ಹೊರ ಗುತ್ತಿಗೆ ಆಧಾರದ ಮೇಲೆ ಮೇಲ್ಕಂಡ ಹುದ್ದೆಗೆ ಇಂಜಿನಿಯರಿಂಗ್​ , ಡಿಪ್ಲೊಮಾ  ಪದವೀಧರರಿಗೆ ಈ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 11 ತಿಂಗಳ ಅವಧಿಗೆ ಈ ಹುದ್ದೆ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳ ಕಾರ್ಯ ಕ್ಷಮತೆ ಆಧಾರದ ಮೇಲೆ ಹುದ್ದೆ ವಿಸ್ತರಣೆ ಮಾಡಲಾಗುವುದು. ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸೇರಿದಂತೆ ಇತರೆ ಮಾಹಿತಿಗಳು ಈ ಕೆಳಗಿನಂತೆ ಇದೆ.

  ಸಂಸ್ಥೆಯ ಹೆಸರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ
  ಹುದ್ದೆ: ಜೂನಿಯರ್ ಕನ್ಸಲ್ಟೆಂಟ್ಸ್
  ಹುದ್ದೆಗಳ ಸಂಖ್ಯೆ: 18
  ಉದ್ಯೋಗ ಸ್ಥಳ: ಚಿಕ್ಕಮಗಳೂರು
  ಸಂಬಳ: 30000-40000 ರೂ ಪ್ರತಿ ತಿಂಗಳು
  ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
  ಜೂನಿಯರ್ ಕನ್ಸಲ್ಟೆಂಟ್ಸ್ (ಸಹಾಯಕ ಇಂಜಿನಿಯರ್)12ಪ್ರಥಮ ದರ್ಜೆಯಲ್ಲಿ ಸಿವಿಲ್​ ಇಂಜಿನಿಯರಿಂಗ್​ ಪದವಿಗರಿಷ್ಠ 30 ವರ್ಷ40000 ರೂ ಮಾಸಿಕ
  ಜೂನಿಯರ್ ಕನ್ಸಲ್ಟೆಂಟ್ಸ್ (ಜೂನಿಯರ್ ಇಂಜಿನಿಯರ್)6ಪ್ರಥಮ ದರ್ಜೆಯಲ್ಲಿ ಸಿವಿಲ್​ ಇಂಜಿನಿಯರಿಂಗ್​ ಡಿಪ್ಲೊಮಾ ಪದವಿಗರಿಷ್ಠ 28 ವರ್ಷ30000 ರೂ ಮಾಸಿಕ

  ಅನುಭವದ ವಿವರಗಳು
  ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 02 ವರ್ಷಗಳ ಅನುಭವವನ್ನು ಹೊಂದಿರಬೇಕು

  ವಯೋಮಿತಿ ಸಡಿಲಿಕೆ:
  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ನಿಯಮಾವಳಿಗಳ ಪ್ರಕಾರ

  ಅರ್ಜಿ ಶುಲ್ಕ:
  ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ

  ಆಯ್ಕೆ ಪ್ರಕ್ರಿಯೆ:
  ಅರ್ಹತೆ, ಅನುಭವ

  ಇದನ್ನು ಓದಿ: ಕ್ರೀಡಾ ಪ್ರಾಧಿಕಾರದಲ್ಲಿ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ

  ಪ್ರಮುಖ ದಿನಾಂಕಗಳು:
  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್​ 13, 2022
  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್​ 24, 2022

  ಅಧಿಸೂಚನೆ ಪ್ರಮುಖ ಲಿಂಕ್‌ಗಳು
  ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
  ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
  ಅಧಿಕೃತ ಜಾಲತಾಣ: chikkamagaluru.nic.in

  ವಿಶೇಷ ಸೂಚನೆ

  ಅರ್ಜಿಯನ್ನು ಸರ್ಕಾರದ ಕೆಲಸದ ಅವಧಿಯಲ್ಲಿ ಮಾತ್ರ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಸಲ್ಲಿಸತಕ್ಕದ್ದು.

  ಸರ್ಕಾರಿ ರಜೆ ದಿನಗಳು ಮತ್ತು ಭಾನುವಾರ ರಜೆ ಹುದ್ದೆಗೆ ಅರ್ಜಿ ಸಲ್ಲಿಸುವುದನ್ನು ಸ್ವೀಕೃತಿ ಮಾಡುವುದಿಲ್ಲ.

  ಇದನ್ನು ಓದಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ನೇಮಕಾತಿ; MBA, MSW ಆದವರಿಗೆ ಅವಕಾಶ

  ಅರ್ಜಿ ಸಲ್ಲಿಕೆ ವಿಧಾನ

  -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

  - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

  ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

  ಅನ್ವಯಿಸಿದರೆ, ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
  ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
  Published by:Seema R
  First published: