RDPR Karnataka: ಪದವೀಧರರಿಗೆ ಸರ್ಕಾರಿ ಉದ್ಯೋಗ, ಮಾಸಿಕ ವೇತನ ₹ 24,000, ಬೆಂಗಳೂರಿನಲ್ಲಿ ಕೆಲಸ

ಡಿಸೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

RDPR

RDPR

  • Share this:

RDPR Karnataka Recruitment 2021: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ(Rural Development and Panchayath Raj Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 35 ತಾಲೂಕ್ ಸೋಶಿಯಲ್ ಎಕ್ಸ್​​ಪ್ಲೋರೇಷನ್ ರಿಸೋರ್ಸ್​ ಪರ್ಸನ್​ ಮತ್ತು ಡಿಸ್ಟ್ರಿಕ್ಟ್​ ಸೋಶಿಯಲ್ ಎಕ್ಸ್​​ಪ್ಲೋರೇಷನ್​ ರಿಸೋರ್ಸ್​ ಪರ್ಸನ್ ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ rdpr.kar.nic.in ಗೆ ಭೇಟಿ ನೀಡಬಹುದು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ
ಹುದ್ದೆಯ ಹೆಸರುತಾಲೂಕ್ ಸೋಶಿಯಲ್ ಎಕ್ಸ್​​ಪ್ಲೋರೇಷನ್ ರಿಸೋರ್ಸ್​ ಪರ್ಸನ್​ ಮತ್ತು ಡಿಸ್ಟ್ರಿಕ್ಟ್​ ಸೋಶಿಯಲ್ ಎಕ್ಸ್​​ಪ್ಲೋರೇಷನ್​ ರಿಸೋರ್ಸ್​ ಪರ್ಸನ್
ಒಟ್ಟು ಹುದ್ದೆಗಳು35
ವಿದ್ಯಾರ್ಹತೆಪದವಿ
ಉದ್ಯೋಗದ ಸ್ಥಳಬೆಂಗಳೂರು
ವೇತನಮಾಸಿಕ ₹ 18,000-24,000
ಅರ್ಜಿ ಸಲ್ಲಿಕೆ ವಿಧಾನಆಫ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ17/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ05/01/2022



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05/01/2022

ಇದನ್ನೂ ಓದಿ: KPSC ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 82,400 ಸಂಬಳ

ಹುದ್ದೆಯ ಮಾಹಿತಿ:
ಡಿಸ್ಟ್ರಿಕ್ಟ್​ ಸೋಶಿಯಲ್ ಎಕ್ಸ್​​ಪ್ಲೋರೇಷನ್​ ರಿಸೋರ್ಸ್​ ಪರ್ಸನ್- 01
ತಾಲೂಕ್ ಸೋಶಿಯಲ್ ಎಕ್ಸ್​​ಪ್ಲೋರೇಷನ್ ರಿಸೋರ್ಸ್​ ಪರ್ಸನ್​- 34

ವಿದ್ಯಾರ್ಹತೆ:
ತಾಲೂಕ್ ಸೋಶಿಯಲ್ ಎಕ್ಸ್​​ಪ್ಲೋರೇಷನ್ ರಿಸೋರ್ಸ್​ ಪರ್ಸನ್​ ಮತ್ತು ಡಿಸ್ಟ್ರಿಕ್ಟ್​ ಸೋಶಿಯಲ್ ಎಕ್ಸ್​​ಪ್ಲೋರೇಷನ್​ ರಿಸೋರ್ಸ್​ ಪರ್ಸನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು. ಜೊತೆಗೆ ಕನಿಷ್ಠ 5 ವರ್ಷಗಳ ಕಾರ್ಯಾನುಭವ ಇರಬೇಕು. ಕಂಪ್ಯೂಟರ್ ಬಳಕೆಯ ಜ್ಞಾನವಿರಬೇಕು.

ಉದ್ಯೋಗದ ಸ್ಥಳ:
ತಾಲೂಕ್ ಸೋಶಿಯಲ್ ಎಕ್ಸ್​​ಪ್ಲೋರೇಷನ್ ರಿಸೋರ್ಸ್​ ಪರ್ಸನ್​ ಮತ್ತು ಡಿಸ್ಟ್ರಿಕ್ಟ್​ ಸೋಶಿಯಲ್ ಎಕ್ಸ್​​ಪ್ಲೋರೇಷನ್​ ರಿಸೋರ್ಸ್​ ಪರ್ಸನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ಇದನ್ನೂ ಓದಿ: Bengaluru Metro: SSLC ಪಾಸಾದವರಿಗೆ ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ, ತಿಂಗಳಿಗೆ ₹ 60,000 ಸಂಬಳ

ವೇತನ:
ತಾಲೂಕ್ ಸೋಶಿಯಲ್ ಎಕ್ಸ್​​ಪ್ಲೋರೇಷನ್ ರಿಸೋರ್ಸ್​ ಪರ್ಸನ್​ ಮತ್ತು ಡಿಸ್ಟ್ರಿಕ್ಟ್​ ಸೋಶಿಯಲ್ ಎಕ್ಸ್​​ಪ್ಲೋರೇಷನ್​ ರಿಸೋರ್ಸ್​ ಪರ್ಸನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 18,000-24,000 ವೇತನ ನೀಡಲಾಗುತ್ತದೆ.

ಕೆಲಸ ಹುಡುಕುತ್ತಿದ್ದಾರಾ? ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: