ರಾಷ್ಟ್ರಪತಿ ಅಂಗರಕ್ಷಕ ರಾಷ್ಟ್ರಪತಿ ಭವನ(President Body Guard Rashtrapati Bhawan ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಅಶ್ವದಳ ನಿರ್ವಹಣೆ ಸಿಬ್ಬಂದಿ (ಗ್ರೂಮ್-Groom) ಪೋಸ್ಟ್ಗಳು ಖಾಲಿ ಇದ್ದು, 10ನೇ ತರಗತಿ ಪಾಸಾ(10th Passed)ಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 13ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್ಲೈನ್-Offline (ಪೋಸ್ಟಲ್) ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ joinindianarmy.nic.in ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಪಿಬಿಜಿ ರಾಷ್ಟ್ರಪತಿ ಭವನ |
ಹುದ್ದೆಯ ಹೆಸರು |
ಅಶ್ವದಳ ನಿರ್ವಹಣೆ ಸಿಬ್ಬಂದಿ |
ಒಟ್ಟು ಹುದ್ದೆಗಳು |
10 |
ವಿದ್ಯಾರ್ಹತೆ |
10ನೇ ತರಗತಿ |
ಉದ್ಯೋಗದ ಸ್ಥಳ |
ನವದೆಹಲಿ |
ವೇತನ |
ಮಾಸಿಕ ₹ 18,000- 29,200 |
ಅರ್ಜಿ ಸಲ್ಲಿಸುವ ಬಗೆ |
ಆಫ್ಲೈನ್(ಪೋಸ್ಟಲ್) |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
13/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
13/12/2021 |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13/12/2021
ಇದನ್ನೂ ಓದಿ:BEL Recruitment 2021: ತಿಂಗಳಿಗೆ ₹ 1,60,000 ಸಂಬಳ; BE, B Tech ಅಭ್ಯರ್ಥಿಗಳಿಗೆ BELನಲ್ಲಿ ಉದ್ಯೋಗ
ಹುದ್ದೆಯ ಮಾಹಿತಿ:
ಅಶ್ವ ದಳ ನಿರ್ವಹಣೆ ಸಿಬ್ಬಂದಿ-10 ಹುದ್ದೆಗಳು
ಸಾಮಾನ್ಯ ವರ್ಗ-1
EWS-05
OBC-02
ST-2
ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್/ಶಿಕ್ಷಣ ಸಂಸ್ಥೆಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು. ಜೊತೆಗೆ ಕುದುರೆಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರಬೇಕು. ಅವುಗಳನ್ನು ಸ್ವಚ್ಛಗೊಳಿಸುವ, ನಿರ್ವಹಣೆ ಮಾಡುವ ಇತರೆ ಕೌಶಲ್ಯಗಳನ್ನು ಹೊಂದಿರಬೇಕು.
ವಯೋಮಿತಿ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳು- 18-25 ವರ್ಷ
- ಒಬಿಸಿ ವರ್ಗದ ಅಭ್ಯರ್ಥಿಗಳು- 28 ವರ್ಷ
- SC/ST ವರ್ಗದ ಅಭ್ಯರ್ಥಿಗಳು- 30 ವರ್ಷ ಮೀರಿರಬಾರದು.
ಉದ್ಯೋಗದ ಸ್ಥಳ:
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಇದನ್ನೂ ಓದಿ: Ministry of Culture Recruitment 2021: ಸಂಸ್ಕೃತಿ ಸಚಿವಾಲಯದಲ್ಲಿ ಉಪಕುಲಪತಿ ಹುದ್ದೆ ಖಾಲಿ; ಮಾಸಿಕ ವೇತನ ₹ 2,10,000
ವೇತನ:
ಗ್ರೂಮ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹18,000-29,200ರವರೆಗೆ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ಲಿಖಿತ ಪರೀಕ್ಷೆಯ ಅಂಕಗಳನ್ನೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ವಿಳಾಸ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ,
ಪಿಬಿಜಿ, ರಾಷ್ಟ್ರಪತಿ ಭವನ
ನವದೆಹಲಿ-110004
ಇವರಿಗೆ ಪೋಸ್ಟ್ ಮುಖಾಂತರ ಕಳುಹಿಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ