• Home
 • »
 • News
 • »
 • jobs
 • »
 • Railway Employees: ರೈಲ್ವೆ ಇಲಾಖೆಯಲ್ಲೂ ನೌಕರರಿಗೆ ಕತ್ತರಿ ಪ್ರಯೋಗ! ಸರಿಯಾಗಿ ಕೆಲಸ ಮಾಡದ ಉದ್ಯೋಗಿಗಳಿಗೆ ಗೇಟ್ ಪಾಸ್!

Railway Employees: ರೈಲ್ವೆ ಇಲಾಖೆಯಲ್ಲೂ ನೌಕರರಿಗೆ ಕತ್ತರಿ ಪ್ರಯೋಗ! ಸರಿಯಾಗಿ ಕೆಲಸ ಮಾಡದ ಉದ್ಯೋಗಿಗಳಿಗೆ ಗೇಟ್ ಪಾಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲಸದಲ್ಲಿ ಯಾವುದೇ ಸಾಧನೆ ಮಾಡದವರನ್ನು ಹಾಗೂ ಸರಿಯಾಗಿ ಕೆಲಸ ಮಾಡದವರನ್ನು ಸೇವೆಯಿಂದ ತೆಗೆದು ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ರೈಲ್ವೆ ಇಲಾಖೆಯಲ್ಲಿ ಈ ಕ್ರಮ ಜಾರಿಗೆ ತರಲಾಗಿದೆ.

 • Trending Desk
 • 2-MIN READ
 • Last Updated :
 • Karnataka, India
 • Share this:

ರೈಲ್ವೆ ಇಲಾಖೆಯಲ್ಲಿ ಭ್ರಷ್ಟಚಾರ (Corruption) ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Union Railway Minister Ashwini Vaishnaw) ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಇಲಾಖೆಯಲ್ಲಿನ ಭ್ರಷ್ಟರನ್ನು ಮನೆಗೆ ಕಳುಹಿಸಲಾಗುತ್ತಿದೆ. ಕಳೆದ 16 ತಿಂಗಳಲ್ಲಿ ರೈಲ್ವೇ ಇಲಾಖೆಯು ಪ್ರತಿ ಮೂರು ದಿನಗಳಿಗೊಮ್ಮೆ ಒಬ್ಬ ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಅಥವಾ ಭ್ರಷ್ಟ ಅಧಿಕಾರಿಯನ್ನು ಹೊರಹಾಕಿದೆ ಎಂದು ತಿಳಿದುಬಂದಿದೆ. ಅಲ್ಲದೇ 139 ಅಧಿಕಾರಿಗಳಿಗೆ ಸ್ವಯಂ ನಿವೃತ್ತಿ (Voluntary Retirement) ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.


ಜೊತೆಗೆ 38 ಮಂದಿಯನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿಗಷ್ಟೇ ಇಬ್ಬರು ಹಿರಿಯ ದರ್ಜೆ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಅವರಲ್ಲಿ ಒಬ್ಬರು ಹೈದರಾಬಾದ್‌ನಲ್ಲಿ ₹ 5 ಲಕ್ಷ ಲಂಚದೊಂದಿಗೆ ಸಿಬಿಐಗೆ ಸಿಕ್ಕಿಬಿದ್ದಿದ್ದಾರೆ. ಇನ್ನೊಬ್ಬರು ₹ 3 ಲಕ್ಷ ಹಣದೊಂದಿಗೆ ರಾಂಚಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.


ಕೇಂದ್ರ ರೈಲ್ವೆ ಸಚಿವ ಕಟ್ಟುನಿಟ್ಟಿನ ಆದೇಶ!


ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಜುಲೈ 2021 ರಲ್ಲಿ ರೈಲ್ವೇ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಅಧಿಕಾರಿಗಳು ಶಿಸ್ತಿನಿಂದ ಕಾರ್ಯ ನಿರ್ವಹಿಸದಿದ್ದರೆ ವಿಆರ್‌ ಎಸ್‌ ತೆಗೆದುಕೊಂಡು ಮನೆಯಲ್ಲಿ ಕುಳಿತುಕೊಳ್ಳಿ ಎಂದು ಪದೇ ಪದೇ ಎಚ್ಚರಿಸಿದ್ದರು. ಹಾಗಾಗಿ ಯಾವುದೇ ಸಾಧನೆ ಮಾಡದವರನ್ನು ಅಥವಾ ಸರಿಯಾಗಿ ಕೆಲಸ ಮಾಡದವರನ್ನು ಸೇವೆಯಿಂದ ತೆಗೆದುಹಾಕುವ ಕೇಂದ್ರದ ಪ್ರಯತ್ನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.


ಅಧಿಕಾರಿಗಳ ಕಾರ್ಯನಿರ್ವಹಣೆ ಮತ್ತು ಭ್ರಷ್ಟಾಚಾರದ ವಿಷಯಗಳಲ್ಲಿ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್‌ ಅವರು ಬಹಳ ಕಟ್ಟುನಿಟ್ಟಾಗಿದ್ದಾರೆ. ಅಲ್ಲದೇ ನಾವು ಜುಲೈ 2021 ರಿಂದ ಪ್ರತಿ ಮೂರು ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ರೈಲ್ವೆ ಇಲಾಖೆಯಿಂದ ಒಬ್ಬ ಭ್ರಷ್ಟ ಅಧಿಕಾರಿಯನ್ನು ಹೊರಹಾಕಿದ್ದೇವೆ ಎಂಬುದಾಗಿ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭ್ರಷ್ಟರಿಗೆ ನಿವೃತ್ತಿ ಅಥವಾ ವಜಾ!


ರೈಲ್ವೆ ಇಲಾಖೆ ಸಿಬ್ಬಂದಿ ಮತ್ತು ತರಬೇತಿ ಸೇವಾ ನಿಯಮಗಳ 56(ಜೆ) ನಿಯಮವನ್ನು ಜಾರಿಗೆ ತಂದಿದ್ದು, ಅದು ಸರ್ಕಾರಿ ನೌಕರನನ್ನು ನಿವೃತ್ತಿಗೆ ಒತ್ತಾಯಿಸಬಹುದು ಅಥವಾ ಕನಿಷ್ಠ ಮೂರು ತಿಂಗಳ ನೋಟಿಸ್ ನೀಡಿದ ನಂತರ ವಜಾಗೊಳಿಸಬಹುದು ಅಥವಾ ಇದೇ ಅವಧಿಗೆ ಪಾವತಿಸಬಹುದಾಗಿದೆ.


ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಅಡಿಯಲ್ಲಿ ಉದ್ಯೋಗಿಗೆ ಎರಡು ತಿಂಗಳ ವೇತನಕ್ಕೆ ಸಮಾನವಾದ ವೇತನವನ್ನು ಸರ್ವೀಸ್‌ ಮುಗಿಯುವವರೆಗೆ ಪ್ರತಿ ವರ್ಷ ನೀಡಲಾಗುತ್ತದೆ. ಆದರೆ ಇದೇ ರೀತಿಯ ಪ್ರಯೋಜನಗಳು ಕಡ್ಡಾಯ ನಿವೃತ್ತಿಯಲ್ಲಿ ಲಭ್ಯವಿಲ್ಲ.


ಅಕಾಲಿಕ ನಿವೃತ್ತಿಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಮೂಲಭೂತ ನಿಯಮಗಳು ಮತ್ತು ಸಿಸಿಎಸ್‌ (ಪಿಂಚಣಿ) ನಿಯಮಗಳು 1972ರ ಅಡಿಯಲ್ಲಿ ಎಫ್‌ ಆರ್ 56(j), ಎಫ್‌ ಆರ್ 56(I) ಅಥವಾ ನಿಯಮ 48 (1) (b) ಪ್ರಕಾರ ಸಾರ್ವಜನಿಕ ಹಿತಾಸಕ್ತಿಯಿಂದ ಅಗತ್ಯವಿದ್ದರೆ ಸರ್ಕಾರಿ ನೌಕರನನ್ನು ನಿವೃತ್ತಿಗೊಳಿಸುವ ಸಂಪೂರ್ಣ ಹಕ್ಕನ್ನು ಸೂಕ್ತ ಪ್ರಾಧಿಕಾರ ಹೊಂದಿದೆ.


ಸ್ವಯಂಪ್ರೇರಿತ ನಿವೃತ್ತಿ ಅಥವಾ ವಜಾಗೊಳಿಸಲಾದವರಲ್ಲಿ ಎಲೆಕ್ಟ್ರಿಕಲ್ ಮತ್ತು ಸಿಗ್ನಲಿಂಗ್, ವೈದ್ಯಕೀಯ ಮತ್ತು ನಾಗರಿಕ ಸೇವೆಗಳ ಅಧಿಕಾರಿಗಳು, ಟ್ರಾಫಿಕ್ ಮತ್ತು ಮೆಕ್ಯಾನಿಕಲ್ ವಿಭಾಗಗಳ ಸಿಬ್ಬಂದಿ ಸೇರಿದ್ದಾರೆ.


ಆದಾಗ್ಯೂ, 139 ಮಂದಿಯಲ್ಲಿ ಹಲವಾರು ಅಧಿಕಾರಿಗಳು ತಮ್ಮ ಪೇಪರ್‌ ಹಾಕಿದ್ದಾರೆ. ಅಲ್ಲದೇ ಬಡ್ತಿಯನ್ನು ನಿರಾಕರಿಸಿದ ನಂತರ ಅಥವಾ ರಜೆಯ ಮೇಲೆ ಕಳುಹಿಸಿದಾಗ VRS ಅನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಇವೆಲ್ಲದರ ಜೊತೆಗೆ ಅವರನ್ನು ನಿವೃತ್ತಿ ಆಯ್ಕೆಗೆ ಒತ್ತಾಯಿಸಲು ಸಂದರ್ಭಗಳನ್ನು ಸೃಷ್ಟಿಸಿದ ಪ್ರಕರಣಗಳೂ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Army Recruitment Fraud: ಸೇನಾ ನೇಮಕಾತಿ ಹೆಸರಲ್ಲಿ ವಂಚನೆ! ಐಡಿ, ಯುನಿಫಾರ್ಮ್ ಕೊಟ್ಟು ಪಂಗನಾಮ ಹಾಕಿದ್ರು


ಒಟ್ಟಾರೆಯಾಗಿ ರೈಲ್ವೆ ಇಲಾಖೆಯಲ್ಲಿ ಜಾರಿಗೆ ಬಂದಿರುವ ಈ ಕಠಿಣ ನಿಯಮಗಳಿಂದಾಗಿ ಭ್ರಷ್ಟಾಚಾರ ಕಡಿಮೆಯಾಗುವುದರ ಜೊತೆಗೆ ಅಧಿಕಾರಿಗಳು ಹೆಚ್ಚು ಪ್ರಾಮಾಣಿಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬರೀ ರೈಲ್ವೆ ಇಲಾಖೆ ಮಾತ್ರವಲ್ಲ ಎಲ್ಲ ಇಲಾಖೆಗಳಲ್ಲೂ ಇಂಥ ನಿಯಮಗಳು ಜಾರಿಗೆ ಬಂದರೆ ಅದೆಷ್ಟೋ ಜನಸಾಮಾನ್ಯರಿಗೆ ಒಳ್ಳೆಯದಾಗಬಹುದೇನೋ.

Published by:ಪಾವನ ಎಚ್ ಎಸ್
First published: