ರೈಲ್ವೆ ಇಲಾಖೆಯಲ್ಲಿ(Railway department) ಕೆಲಸ(Job) ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಇದ್ದು, ರೈಲ್ವೆ ನೇಮಕಾತಿ ಸೆಲ್, ಸೆಂಟ್ರಲ್ ರೈಲ್ವೇ (CR) ಹಂತ 1 ಮತ್ತು 2 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ rrccr.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಇಲಾಖೆ |
ಕೇಂದ್ರ ರೈಲ್ವೆ ಇಲಾಖೆ |
ಹುದ್ದೆಗಳ ಸಂಖ್ಯೆ |
12 |
ಹಂತ 1 |
10 |
ಹಂತ 2 |
2 |
ವಿದ್ಯಾರ್ಹತೆ (ಹಂತ 1) |
10 ನೇ ತರಗತಿ ಉತ್ತೀರ್ಣ ಅಥವಾ ಐಟಿಐ ಅಥವಾ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (ಎನ್ಎಸಿ) ಪಡೆದಿರಬೇಕು. |
ವಿದ್ಯಾರ್ಹತೆ (ಹಂತ 2) |
12 ನೇ (+2 ಹಂತ) ಉತ್ತೀರ್ಣ, ಐಟಿಐ ಪ್ರಮಾಣಪತ್ರ ಕಡ್ಡಾಯ |
ವಯೋಮಿತಿ (ಹಂತ 1) |
18 ರಿಂದ 30 ವರ್ಷದೊಳಗೆ |
ವಯೋಮಿತಿ (ಹಂತ 2) |
18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು. |
ಅರ್ಜಿ ಶುಲ್ಕ(ಇತರೆ) |
500 ಶುಲ್ಕ |
ಅರ್ಜಿ ಶುಲ್ಕ |
ಎಸ್ಸಿ/ಎಸ್ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ರೂ. 250 |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ |
ಡಿಸೆಂಬರ್ 20 2021 |
ಒಟ್ಟು 12 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹಂತ 1 ರಲ್ಲಿ 10 ಪೋಸ್ಟ್ಗಳು ಹಾಗೂ ಹಂತ 2 ರಲ್ಲಿ 2 ಪೋಸ್ಟ್ಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದಾಗಿದೆ. ಸೆಂಟ್ರಲ್ ರೈಲ್ವೇ ಇಲಾಖೆಯ ಹಂತ 1 ರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಲ್ಲಿ ಮುಂಬೈ, ಭೂಸಾವಲ್, ನಾಗ್ಪುರ, ಪುಣೆ ಮತ್ತು ಸೋಲಾಪುರ ವಿಭಾಗಕ್ಕೆ ತಲಾ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ವಿದ್ಯಾರ್ಹತೆ
ಹಂತ 2 – 12 ನೇ (+2 ಹಂತ) ಉತ್ತೀರ್ಣ ಅಥವಾ ಕನಿಷ್ಠ ಶೇ. 50 ಅಂಕ ಪಡೆದಿರಬೇಕು. ಆಕ್ಟ್ ಅಪ್ರೆಂಟಿಸ್ಶಿಪ್ನೊಂದಿಗೆ 10ನೇ ತರಗತಿ ತೇರ್ಗಡೆಯಾಗಿರಬೇಕು.
ಹಂತ 1- 10 ನೇ ತರಗತಿ ಉತ್ತೀರ್ಣ ಅಥವಾ ಐಟಿಐ ಅಥವಾ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (ಎನ್ಎಸಿ) ಪಡೆದಿರಬೇಕು. 10ನೇ ತರಗತಿ ತೇರ್ಗಡೆ ಜೊತೆಗೆ ಎನ್ ಸಿವಿಟಿ ಇಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (ಎನ್ಎಸಿ) ಪಡೆದಿರಬೇಕು. 10ನೇ ತರಗತಿ ತೇರ್ಗಡೆ ಜೊತೆಗೆ ಐಟಿಐ ಪ್ರಮಾಣಪತ್ರ ಪಡೆದಿರಬೇಕು.
ವಯೋಮಿತಿ
ಲೆವೆಲ್ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಹಂತ 1 ಹುದ್ದೆಗಳಿಗೆ, ಅಭ್ಯರ್ಥಿಗಳು 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು.
ಅರ್ಜಿ ಶುಲ್ಕ
ಎಸ್ಸಿ/ಎಸ್ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ರೂ. 250 ಅನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಆದರೆ, ಇತರ ವರ್ಗದ ಅಭ್ಯರ್ಥಿಗಳು ರೂ. 500 ಶುಲ್ಕವನ್ನು ಪಾವತಿಸಬೇಕು.
ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ಅರ್ಜಿ ಹಾಕುವ ಪ್ರಕ್ರಿಯೆ ಇಂದಿನಿಂದ ಅಂದರೆ ಡಿಸೆಂಬರ್ 6 ರಿಂದ ಆರಂಭವಾಗಿದ್ದು, ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ