Railway Recruitment 2021: ರೈಲ್ವೆ ಇಲಾಖೆಯಲ್ಲಿ 28 ಹುದ್ದೆಗಳು ಖಾಲಿ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಯಾವುದೇ ಪರೀಕ್ಷೆ ನಡೆಸುವುದಿಲ್ಲ. ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Railway Recruitment 2021: ಭಾರತೀಯ ರೈಲ್ವೆ ಇಲಾಖೆ(Indian Railway Department) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಪಡೆಯಲು ಇಚ್ಛಿಸುತ್ತಿರುವ ಅಭ್ಯರ್ಥಿಗಳು ಅಧಿಸೂಚನೆಯ ಅನುಸಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಉಪಾಧ್ಯಕ್ಷರು(Vice Chairman), ನ್ಯಾಯಾಂಗ ಸದಸ್ಯ(Judicial Member) ಮತ್ತು ತಾಂತ್ರಿಕ ಸದಸ್ಯರ(Technical Member) ನೇಮಕಾತಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 18 ಹಾಗೂ ನವೆಂಬರ್ 18, 2021.ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಉಪಾಧ್ಯಕ್ಷ (ನ್ಯಾಯಾಂಗ) 02
ಉಪಾಧ್ಯಕ್ಷ(ತಾಂತ್ರಿಕ) 02
ನ್ಯಾಯಾಂಗ ಸದಸ್ಯ 16
ತಾಂತ್ರಿಕ ಸದಸ್ಯ 07ಅರ್ಹತೆ: Eligibility

ವಿದ್ಯಾರ್ಹತೆ, ವೇತನ ಮತ್ತು ಅಭ್ಯರ್ಥಿ ನೇಮಕಾತಿಯ ಇತರ ನಿಯಮಗಳು ಮತ್ತು ಷರತ್ತುಗಳನ್ನು ನ್ಯಾಯಾಧಿಕರಣ ನಿಯಮಗಳು 2021/ ನ್ಯಾಯಮಮಂಡಳಿ ಸುಧಾರಣಾ ಕಾಯ್ದೆ 2021ರ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: Selection Process 

ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಯಾವುದೇ ಪರೀಕ್ಷೆ ನಡೆಸುವುದಿಲ್ಲ. ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ:Eastern Railway Recruitment 2021: ಪೂರ್ವ ಮಧ್ಯ ರೈಲ್ವೆಇಲಾಖೆಯಲ್ಲಿ 3366 ಹುದ್ದೆಗಳು ಖಾಲಿ- ಅರ್ಜಿ ಸಲ್ಲಿಸಲು ಹೀಗೆ ಮಾಡಿ...

ಅರ್ಜಿ ಶುಲ್ಕ: ನಿಖರವಾಗಿಲ್ಲ.

ಹೆಚ್ಚಿನ ಮಾಹಿತಿಗಾಗಿ:(For More Information)

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ವೆಬ್​ಸೈಟ್​ https://www.indianrailways.gov.in/railwayboard ಅಥವಾ ರೈಲ್ವೆ ಕ್ಲೇಮ್ಸ್​ ಟ್ರಿಬ್ಯುನಲ್(RCT)ಯ ಅಧಿಕೃತ ವೆಬ್​ಸೈಟ್ https://claims.indianrail.gov.in/rct/index.jsp ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವುದು ಹೇಗೆ?(How to Apply)

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಸರಿಯಾದ ಚಾನೆಲ್ ಮೂಲಕ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ. ತಾಂತ್ರಿಕ ಸದಸ್ಯರು ಮತ್ತು ಉಪಾಧ್ಯಕ್ಷರು(ತಾಂತ್ರಿಕ)- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18/10/2021 ಕೊನೆಯ ದಿನಾಂಕವಾಗಿದೆ. ಅದೇ ರೀತಿ ನ್ಯಾಯಾಂಗ ಸದಸ್ಯ ಮತ್ತು ಉಪಾಧ್ಯಕ್ಷರು(ನ್ಯಾಯಾಂಗ)- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18/11/2021 ಕೊನೆಯ ದಿನಾಂಕವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

https://kannada.news18.com/news/jobs/jobs-in-karnataka-india-abroad-government-private-it-company-sector-business-own-interview-634247.html
Published by:Latha CG
First published: