ಕ್ರೀಡಾ ಕೋಟಾದಡಿ (Sports Quota) ಸರ್ಕಾರಿ ಕೆಲಸವನ್ನು (Govt Jobs) ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಇದೀಗ ಬಂದಿದೆ. ನೈರುತ್ಯ ರೈಲ್ವೆ ಸ್ಪೋರ್ಟ್ಸ್ ಕ್ಯಾಟಗೆರಿಯಲ್ಲಿ ಹುದ್ದೆಗಳ (Sports Quota Railway Jobs) ಭರ್ತಿಗೆ ಮುಂದಾಗಿದೆ. ನೇಮಗಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಡಿಸೆಂಬರ್ 17ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 16 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದೆ. ಒಟ್ಟು 21 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಬೇಕು.
ಸಂಸ್ಥೆ: | ನೈರುತ್ಯ ರೈಲ್ವೆ ವಿಭಾಗ |
ನೇಮಕಾತಿ: | ಕ್ರೀಡಾ ಕೋಟಾದಡಿ ನೇಮಕಾತಿ |
ಒಟ್ಟು ಹುದ್ದೆ: | 21 |
ಶೈಕ್ಷಣಿಕ ಅರ್ಹತೆ: | 10ನೇ ತರಗತಿಯಿಂದ ಪದವಿವರೆಗೆ |
ವಯೋಮಿತಿ: | 25 ವರ್ಷ ಮೀರಿರಬಾರದು |
ಅರ್ಜಿ ಸಲ್ಲಿಕೆ ವಿಳಾಸ: | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿದಾರರ ವಯಸ್ಸು 18-25 ವರ್ಷ ಮೀರಿರಬಾರದು. SSLCಯಿಂದ ಪದವಿವರೆಗಿನ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ
ಕ್ರೀಡಾ ಸಾಧನೆಗಳ ಮೌಲ್ಯಮಾಪನ ಮತ್ತು ಶೈಕ್ಷಣಿಕ ಅರ್ಹತೆಯನ್ನು ಆಧರಿಸಿರುತ್ತದೆ.
ಇದನ್ನೂ ಓದಿ: Railway Job in Hubli: ಹುಬ್ಬಳ್ಳಿಯಲ್ಲಿ ಸರ್ಕಾರಿ ಉದ್ಯೋಗಾವಕಾಶ: ನಾಳೆಯೇ ಅರ್ಜಿ ಸಲ್ಲಿಕೆಗೆ ಕೊನೆ ದಿನ
ಪರೀಕ್ಷಾ ಶುಲ್ಕ
1) ಅಭ್ಯರ್ಥಿಗಳು ಪರೀಕ್ಷಾ ಶುಲ್ಕವಾಗಿ ರೂ.500 ಪಾವತಿಸಬೇಕು.
2) ಎಸ್ಸಿ/ಎಸ್ಟಿ/ಮಾಜಿ ಸೈನಿಕ ಅಭ್ಯರ್ಥಿಗಳು/ಮಹಿಳೆಯರು, ಅಲ್ಪಸಂಖ್ಯಾತರು, ಇಬಿಸಿ ಅಭ್ಯರ್ಥಿಗಳು ರೂ.250 ಶುಲ್ಕವನ್ನು ಪಾವತಿಸಬೇಕು.
ಅಭ್ಯರ್ಥಿಗಳೇ ಇವುಗಳನ್ನು ಮರೆಯಬೇಡಿ
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ