ಸರ್ಕಾರಿ ಹುದ್ದೆ (Govt Jobs) ಕನಸು ಕಾಣುತ್ತಿರುವ ಕನ್ನಡಿಗರಿಗೆ ಒಂದೊಳ್ಳೆ ಅವಕಾಶ ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಈ ಉದ್ಯೋಗಾವಕಾಶ ಬಂಪರ್ ಅಂತಲೇ ಹೇಳಬಹುದು. ಪದವಿ ಮಾಡಿದವರು ರೈಲ್ವೆ ಇಲಾಖೆಯಲ್ಲಿ (Railway Department) ಕೆಲಸ ಮಾಡುವ ಅವಕಾಶ ಇದಾಗಿದೆ.
ನೈರುತ್ಯ ರೈಲ್ವೆ ಇಲಾಖೆ ನೇಮಕಾತಿಗೆ ಮುಂದಾಗಿದ್ದು, ಈ ಹುದ್ದೆಗೆ ಆಯ್ಕೆ ಆದವರು ಹುಬ್ಬಳ್ಳಿಯಲ್ಲೇ (Hubli) ಕೆಲಸ ಮಾಡಬಹುದಾಗಿದೆ. ಈ ಹುದ್ದೆಯ ವಿಶೇಷತೆ ಏನಂದರೆ 42 ವರ್ಷ ವಯಸ್ಸಿನೊಳಗೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಾಳೆಯೇ ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರುವುದರಿಂದ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಕೂಡಲೇ ಅರ್ಜಿ ಸಲ್ಲಿಸಿ.
ಸಂಸ್ಥೆ | ನೈರುತ್ಯ ರೈಲ್ವೆ ಇಲಾಖೆ |
ಹುದ್ದೆ | ಜೂನಿಯರ್ ಇಂಜಿನಿಯರ್ |
ಹುದ್ದೆಗಳ ಸಂಖ್ಯೆ | 02 |
ವಿದ್ಯಾರ್ಹತೆ | BCA, Bsc, PGDCA, ಬಿ.ಟೆಕ್ |
ವಯೋಮಿತಿ | 42 ವರ್ಷ ಮೀರಿರಬಾರದು |
ಉದ್ಯೋಗ ಸ್ಥಳ | ಹುಬ್ಬಳ್ಳಿ |
ವೇತನ | ಸರ್ಕಾರಿ ಸಂಬಳದ ನಿಯಮಾನುಸಾರ |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | 24-12-2022 |
ಅರ್ಜಿ ಸಲ್ಲಿಕೆ ವಿಧಾನ | gdcerrcswr2022@gmail.com ಮೇಲ್ ಮಾಡಿ |
ಅರ್ಜಿ ಸಲ್ಲಿಕೆ ಆರಂಭ: 25-11-2022
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 24-12-2022
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
ಇದನ್ನೂ ಓದಿ: Karnataka Revenue Department: ಕಂದಾಯ ಇಲಾಖೆಯಲ್ಲಿದೆ ಬಂಪರ್ ಉದ್ಯೋಗ-ಮಿಸ್ ಮಾಡದೇ ನಾಳೆಯೊಳಗೆ ಅಪ್ಲೈ ಮಾಡಿ
ಅರ್ಜಿ ಶುಲ್ಕ:
ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಟೆಸ್ಟ್
ದಾಖಲಾತಿ ಪರಿಶೀಲನೆ
ಮೆಡಿಕಲ್ ಎಕ್ಸಾಂ
ವಿದ್ಯಾರ್ಹತೆ ನಿಯಮ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ BCA, Bsc, PGDCA, ಬಿ.ಟೆಕ್ ಪದವಿ ಪಡೆದಿರುವುದು ಕಡ್ಡಾಯ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ. ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ