• Home
  • »
  • News
  • »
  • jobs
  • »
  • Railway Jobs: ಬೆಂಗಳೂರಿನಲ್ಲಿ ರೈಲ್ವೆ ಉದ್ಯೋಗಾವಕಾಶ - ಜ. 22ರೊಳಗೆ ಅರ್ಜಿ ಹಾಕಿ

Railway Jobs: ಬೆಂಗಳೂರಿನಲ್ಲಿ ರೈಲ್ವೆ ಉದ್ಯೋಗಾವಕಾಶ - ಜ. 22ರೊಳಗೆ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು 11 ಪ್ಲ್ಯಾನಿಂಗ್ ಎಂಜಿನಿಯರ್(Planning Engineer), ಸೇಫ್ಟಿ & ಹೆಲ್ತ್ ಎಕ್ಸ್​ಪರ್ಟ್(Safety & Health Expert)​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ.

  • News18 Kannada
  • Last Updated :
  • Bangalore [Bangalore], India
  • Share this:

RITES Recruitment 2023: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು(Rail India Technical and Economic Services) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 11 ಪ್ಲ್ಯಾನಿಂಗ್ ಎಂಜಿನಿಯರ್(Planning Engineer), ಸೇಫ್ಟಿ & ಹೆಲ್ತ್ ಎಕ್ಸ್​ಪರ್ಟ್(Safety & Health Expert)​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ರೈಲ್ವೆ ಇಲಾಖೆಯ ಕೆಲಸ(Job) ಪಡೆಯಬೇಕು ಎಂದು ಹಂಬಲಿಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅರ್ಜಿ ಹಾಕಲು ಜನವರಿ 22, 2023 ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮತ್ತು ಆಫ್​ಲೈನ್​ ಎರಡರ ಮೂಲಕವೂ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು
ಹುದ್ದೆಪ್ಲ್ಯಾನಿಂಗ್ ಎಂಜಿನಿಯರ್, ಸೇಫ್ಟಿ & ಹೆಲ್ತ್ ಎಕ್ಸ್​ಪರ್ಟ್
ಒಟ್ಟು ಹುದ್ದೆ11
ವಿದ್ಯಾರ್ಹತೆಬಿಇ/ಬಿ.ಟೆಕ್
ವೇತನನಿಯಮಾನುಸಾರ
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಜವರಿ 22, 2023

ಹುದ್ದೆಯ ಮಾಹಿತಿ:
ಕ್ವಾಲಿಟಿ ಕಂಟ್ರೋಲ್/ ಮೆಟಿರಿಯಲ್ ಎಂಜಿನಿಯರ್- 3
ಸೇಫ್ಟಿ & ಹೆಲ್ತ್ ಎಕ್ಸ್​ಪರ್ಟ್​- 6
ಪ್ಲ್ಯಾನಿಂಗ್ ಎಂಜಿನಿಯರ್- 2


ಇದನ್ನೂ ಓದಿ: JOBS: 10th, ಪಿಯು ಪಾಸಾದವರಿಗೆ ಬಂಪರ್ ಉದ್ಯೋಗ- ಲಕ್ಷಗಟ್ಟಲೇ ಸಂಬಳ


ವಿದ್ಯಾರ್ಹತೆ:
ಕ್ವಾಲಿಟಿ ಕಂಟ್ರೋಲ್/ ಮೆಟಿರಿಯಲ್ ಎಂಜಿನಿಯರ್- ಸಿವಿಲ್​ ಎಂಜಿನಿಯರಿಂಗ್​ನಲ್ಲಿ ಪದವಿ
ಸೇಫ್ಟಿ & ಹೆಲ್ತ್ ಎಕ್ಸ್​ಪರ್ಟ್​- ಸಿವಿಲ್​ ಎಂಜಿನಿಯರಿಂಗ್​ನಲ್ಲಿ ಪದವಿ
ಪ್ಲ್ಯಾನಿಂಗ್ ಎಂಜಿನಿಯರ್- ಎಂಜಿನಿಯರಿಂಗ್, ಎಂಎ, ಎಂಎಸ್ಸಿ


ವಯೋಮಿತಿ:
ರೈಲ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನ:
ನಿಗದಿಪಡಿಸಿಲ್ಲ.



ಉದ್ಯೋಗದ ಸ್ಥಳ:
ಬೆಂಗಳೂರು


ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


ಪೋಸ್ಟ್ ಮೂಲಕ ಅರ್ಜಿ ಹಾಕಲು ಈ ಮಾರ್ಗ ಅನುಸರಿಸಿ: ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.


(ಬಿ.ಕೆ. ನಂದಾ)
ಜಂಟಿ ಜನರಲ್ ಮ್ಯಾನೇಜರ್/HR
RITES ಲಿಮಿಟೆಡ್. (ಶಿಖರ್)
ಪ್ಲಾಟ್ ನಂ.1
ಸೆಕ್ಟರ್- 29
ಗುರ್ಗಾಂವ್ - 122001


ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 22, 2023

Published by:Latha CG
First published: