KRCL Recruitment 2023: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್(Konkan Railway Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಜೂನಿಯರ್ ಅಕೌಂಟ್ಸ್ ಮ್ಯಾನೇಜರ್(Junior Accounts Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಿ. ರೈಲ್ವೆ ಇಲಾಖೆ(Railway Department)ಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಜನವರಿ 11, 2023 ರಂದು ಸಂದರ್ಶನ(Walk-In-Interview) ನಡೆಯಲಿದೆ.
ಅಭ್ಯರ್ಥಿಗಳು ಸಂದರ್ಶನಕ್ಕೆ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ |
ಹುದ್ದೆ | ಜೂನಿಯರ್ ಅಕೌಂಟ್ಸ್ ಮ್ಯಾನೇಜರ್ |
ಒಟ್ಟು ಹುದ್ದೆ | 4 |
ವೇತನ | ಮಾಸಿಕ ₹ 65,688 |
ಉದ್ಯೋಗದ ಸ್ಥಳ | ರತ್ನಗಿರಿ, ಕಾರವಾರ |
ಇದನ್ನೂ ಓದಿ: Maharashtra Bank: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 314 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ:
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 1, 202ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ(NCL) ಅಭ್ಯರ್ಥಿಗಳು- 3 ವರ್ಷ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
ಎಕ್ಸಿಕ್ಯೂಟಿವ್ ಕ್ಲಬ್
ಕೊಂಕಣ ರೈಲ್ವೆ ವಿಹಾರ
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್
ಸೀವುಡ್ಸ್ ರೈಲ್ವೆ ಸ್ಟೇಷನ್ ಹತ್ತಿರ
ಸೆಕ್ಟರ್-40,
ಸೀವುಡ್ಸ್ (ವೆಸ್ಟ್)
ನವಿ ಮುಂಬೈ
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 09/12/2022
ಸಂದರ್ಶನ ನಡೆಯುವ ದಿನ: 11/01/2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ