• ಹೋಂ
 • »
 • ನ್ಯೂಸ್
 • »
 • Jobs
 • »
 • IRCTC Recruitment 2023: ತಿಂಗಳಿಗೆ 30 ಸಾವಿರ ಸಂಬಳ- ಟೂರಿಸಂ ಮಾನಿಟರ್ ಹುದ್ದೆಗಳಿಗೆ ಅರ್ಜಿ ಹಾಕಿ

IRCTC Recruitment 2023: ತಿಂಗಳಿಗೆ 30 ಸಾವಿರ ಸಂಬಳ- ಟೂರಿಸಂ ಮಾನಿಟರ್ ಹುದ್ದೆಗಳಿಗೆ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ಮೇ 30, 2023 ರಂದು ಸಂದರ್ಶನ (Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

 • News18 Kannada
 • 5-MIN READ
 • Last Updated :
 • New Delhi, India
 • Share this:

IRCTC Recruitment 2023: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (The Indian Railway Catering and Tourism Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 34 ಟೂರಿಸಂ ಮಾನಿಟರ್ (Tourism Monitor) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮೇ 30, 2023 ರಂದು ಸಂದರ್ಶನ (Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಡಿಗ್ರಿ ಪಾಸಾಗಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ
ಹುದ್ದೆಟೂರಿಸಂ ಮಾನಿಟರ್
ಒಟ್ಟು ಹುದ್ದೆ34
ವಿದ್ಯಾರ್ಹತೆಬಿ.ಎಸ್ಸಿ, ಎಂಬಿಎ, ಬಿಬಿಎ
ವೇತನಮಾಸಿಕ ₹ 30,000
ಉದ್ಯೋಗದ ಸ್ಥಳನವದೆಹಲಿ
ಸಂದರ್ಶನ ನಡೆಯುವ ದಿನಾಂಕಮೇ 30, 2023

ವಿದ್ಯಾರ್ಹತೆ:
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಎಸ್ಸಿ, ಎಂಬಿಎ, ಬಿಬಿಎ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.


ಇದನ್ನೂ ಓದಿ: Railway Jobs: ರೈಲ್ ವಿಕಾಸ್ ನಿಗಮದಲ್ಲಿ ಬಂಪರ್ ಉದ್ಯೋಗ- ತಿಂಗಳಿಗೆ 2.80 ಲಕ್ಷ ಸಂಬಳ


ಉದ್ಯೋಗದ ಸ್ಥಳ:
ನವದೆಹಲಿ


ವೇತನ:
ಮಾಸಿಕ ₹ 30,000


ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ಸಂದರ್ಶನ


ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 09/05/2023
ಸಂದರ್ಶನ ನಡೆಯುವ ದಿನಾಂಕ: ಮೇ 30, 2023


ಇದನ್ನೂ ಓದಿ:Banking Jobs: ಇಂಡಿಯನ್ ಬ್ಯಾಂಕ್​​ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ- ಆಸಕ್ತರು ಅಪ್ಲೈ ಮಾಡಿ


ಸಂದರ್ಶನ ನಡೆಯುವ ಸ್ಥಳಗಳು:
ನವದೆಹಲಿ- ಭಾರತೀಯ ಪಾಕಶಾಲೆಯ ಸಂಸ್ಥೆ NCHMCT ಹತ್ತಿರ, A-35, ಬ್ಲಾಕ್ A, ಕೈಗಾರಿಕಾ ಪ್ರದೇಶ, ಸೆಕ್ಟರ್ 62, ನೋಯ್ಡಾ, ಉತ್ತರ ಪ್ರದೇಶ 201309.


ಲಕ್ನೋ- ಉತ್ತರ ಪ್ರದೇಶ- IRCTC LTD 2ನೇ ಮಹಡಿ, ಪರ್ಯಾತನ್ ಭವನ C-13 ವಿಪಿನ್ ಖಂಡ್, ಗೋಮತಿ ನಗರ ಲಕ್ನೋ-226010, ಉತ್ತರ ಪ್ರದೇಶ ದೂರವಾಣಿ ಸಂಖ್ಯೆ- 0522-2305522.


ಚಂಡೀಗಢ- ಚಂಡೀಗಢ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಸೆಕ್ಟರ್, 42D, ಚಂಡೀಗಢ-160036, 9779998086.

First published: