IRCON Recruitment 2023: ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್(Indian Railway Construction Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 34 ವರ್ಕ್ಸ್ ಎಂಜಿನಿಯರ್ (Works Engineer) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 26, 2023ರಂದು ಸಂದರ್ಶನ (Walk-In-Interview)ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.
ಹೆಚ್ಚಿನ ಮಾಹಿತಿಗಾಗಿ https://www.ircon.org ಗೆ ಭೇಟಿ ನೀಡಬಹುದು. ಸರ್ಕಾರಿ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ |
ಹುದ್ದೆ | ವರ್ಕ್ಸ್ ಎಂಜಿನಿಯರ್ |
ಒಟ್ಟು ಹುದ್ದೆ | 34 |
ವಿದ್ಯಾರ್ಹತೆ | ಎಂಜಿನಿಯರಿಂಗ್ |
ವೇತನ | ಮಾಸಿಕ ₹ 36,000 |
ಉದ್ಯೋಗದ ಸ್ಥಳ | ಭಾರತ |
ಸಂದರ್ಶನ ನಡೆಯುವ ಸ್ಥಳ | ಏಪ್ರಿಲ್ 26, 2023 |
ವಿದ್ಯಾರ್ಹತೆ:
ವರ್ಕ್ ಎಂಜಿನಿಯರ್ / ಸಿವಿಲ್ ಆನ್ ಕಾಂಟ್ರ್ಯಾಕ್ಟ್ ಬೇಸಿಸ್- ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ವರ್ಕ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ ಆನ್ ಕಾಂಟ್ರ್ಯಾಕ್ಟ್ ಬೇಸಿಸ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ
ವರ್ಕ್ ಎಂಜಿನಿಯರ್ / S & T ಆನ್ ಕಾಂಟ್ರ್ಯಾಕ್ಟ್ ಬೇಸಿಸ್- ಎಂಜಿನಿಯರಿಂಗ್
ಇದನ್ನೂ ಓದಿ: Post Office Jobs: 8ನೇ ಕ್ಲಾಸ್ ಪಾಸಾಗಿದ್ರೆ ಪೋಸ್ಟ್ ಆಫೀಸ್ ಉದ್ಯೋಗ- ತಿಂಗಳಿಗೆ 63,000 ಸಂಬಳ
ವೇತನ:
ಮಾಸಿಕ ₹ 36,000
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ವಯೋಮಿತಿ:
ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಮಾರ್ಚ್ 1, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಇದನ್ನೂ ಓದಿ: Government Job: ಪಿಯುಸಿ ಪಾಸಾಗಿದ್ರೆ 52 ಸಾವಿರ ಸಂಬಳ- ಈಗಲೇ ಅರ್ಜಿ ಹಾಕಿ
ಸಂದರ್ಶನ ನಡೆಯುವ ಸ್ಥಳ:
ಪಶ್ಚಿಮ ಬಂಗಾಳ: ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್, 378, ಪ್ರಾಂತಿಕ್ ಪಾಲಿ, ಧನ್ಮತ್ ಕಸ್ಬಾ, ಕೋಲ್ಕತ್ತಾ-700107, ಪಶ್ಚಿಮ ಬಂಗಾಳ
ಪಂಜಾಬ್: 2ನೇ ಮಹಡಿ, ಕಟ್ಟಡ ಸಂಖ್ಯೆ. 1001, ಟಿಡಿಐ ನಗರ, ಕೆನಾಟ್ ಪ್ಯಾಲೇಸ್, ಟಿಡಿಐ ನಗರ, ಸೆಕ್ಟರ್-111, ಬನೂರ್ ಖರಾರ್ ರಸ್ತೆ, ಮೊಹಾಲಿ, ಎಸ್‌ಎಎಸ್ ನಗರ, ಪಂಜಾಬ್-140307
ಮಹಾರಾಷ್ಟ್ರ: IRCON ಪಶ್ಚಿಮ R.O. ಕಚೇರಿ, ಹೊಸ ಆಡಳಿತ. ಕಟ್ಟಡ, 7ನೇ ಮಹಡಿ, ಸೆಂಟ್ರಲ್ ರೈಲ್ವೇ, D. N. ರಸ್ತೆ, ಮುಂಬೈ CST-400001
ಕರ್ನಾಟಕ, ಚೆನ್ನೈ: IRCON ದಕ್ಷಿಣ ಪ್ರಾದೇಶಿಕ ಕಚೇರಿ, B2-318, III ಮಹಡಿ, ತುಂಗಭದ್ರಾ ಬ್ಲಾಕ್, ರಾಷ್ಟ್ರೀಯ ಕ್ರೀಡಾ ಗ್ರಾಮ, ಕೋರಮಂಗಲ, ಬೆಂಗಳೂರು-560047
ಒಡಿಶಾ: ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ ಪ್ರಾಜೆಕ್ಟ್ ಆಫೀಸ್, 5 ನೇ ಮಹಡಿ, OSHB ಕಟ್ಟಡ, ಸಚಿವಾಲಯ ಮಾರ್ಗ, ಭುವನೇಶ್ವರ-751001
ಮಧ್ಯಪ್ರದೇಶ: IRCON ಕಟ್ನಿ ಪ್ರಾಜೆಕ್ಟ್ ಆಫೀಸ್ 1 ನೇ ಮಹಡಿ, ಮಾರುತಿ ಸುಜುಕಿ ಶೋರೂಮ್ ಮೇಲೆ, ಜಿಂಜಾರಿ ಪೊಲೀಸ್ ಠಾಣೆ ಹತ್ತಿರ, NH07 ಜಬಲ್‌ಪುರ ರಸ್ತೆ ಕಟ್ನಿ-483501
ಹರಿಯಾಣ, ಉತ್ತರ ಪ್ರದೇಶ, ದೆಹಲಿ: ಉತ್ತರ ಪ್ರಾದೇಶಿಕ ಕಚೇರಿ, IRCON ಉತ್ತರ ಪ್ರಾದೇಶಿಕ ಕಚೇರಿ, B-40A, ಸೆಕ್ಟರ್ 01, ನೋಯ್ಡಾ-201301 (ಉತ್ತರ ಪ್ರದೇಶ)
ಸಂದರ್ಶನ ನಡೆಯುವ ದಿನಾಂಕಗಳು:
ಪಂಜಾಬ್, ಪಶ್ಚಿಮ ಬಂಗಾಳ - ಏಪ್ರಿಲ್ 17, 2023
ಮಹಾರಾಷ್ಟ್ರ- ಏಪ್ರಿಲ್ 18, 2023
ಮಧ್ಯಪ್ರದೇಶ- ಏಪ್ರಿಲ್ 19, 2023
ಒಡಿಶಾ- ಏಪ್ರಿಲ್ 20 & 21, 2023
ಕರ್ನಾಟಕ, ಹರಿಯಾಣ, ಚೆನ್ನೈ, ಉತ್ತರ ಪ್ರದೇಶ- ಏಪ್ರಿಲ್ 24, 2023
ದೆಹಲಿ-ಏಪ್ರಿಲ್ 26, 2023
ಪ್ರಮುಖ ದಿನಾಂಕಗಳು:
ನೋಟಿಫಿಕಶನ್ ಬಿಡುಗಡೆ ದಿನಾಂಕ: 27/03/2023
ಸಂದರ್ಶನ ನಡೆಯುವ ದಿನಾಂಕ: ಏಪ್ರಿಲ್ 26, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ