• ಹೋಂ
  • »
  • ನ್ಯೂಸ್
  • »
  • Jobs
  • »
  • BMRCL Recruitment 2023: ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗಾವಕಾಶ- ಅರ್ಜಿ ಹಾಕಲು ನಾಳೆಯೇ ಲಾಸ್ಟ್​ ಡೇಟ್

BMRCL Recruitment 2023: ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗಾವಕಾಶ- ಅರ್ಜಿ ಹಾಕಲು ನಾಳೆಯೇ ಲಾಸ್ಟ್​ ಡೇಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಗಳು ಆನ್​​​ಲೈನ್ ​(Online) ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 24, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

BMRCL Recruitment 2023: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(Bengaluru Metro Rail Corporation Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 236 ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ (Train Operator) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಆನ್​​​ಲೈನ್ ​(Online) ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 24, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ (Last Date). ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್​ಸೈಟ್​ bmrc.co.inಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
ಹುದ್ದೆಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್
ಒಟ್ಟು ಹುದ್ದೆ236
ವಿದ್ಯಾರ್ಹತೆಐಟಿಐ, ಡಿಪ್ಲೊಮಾ, ಬಿಇ/ ಬಿ.ಟೆಕ್
ವೇತನಮಾಸಿಕ ₹ 40,000- 94,500
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 24, 2023

ಹುದ್ದೆಯ ಮಾಹಿತಿ:
ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್- 108
ಸೆಕ್ಷನ್ ಎಂಜಿನಿಯರ್- 14
ಮೇಂಟೈನರ್- 114


ಇದನ್ನೂ ಓದಿ: KPSC Recruitment 2023: ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ


ವೇತನ:
ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್- ಮಾಸಿಕ ₹ 35,000- 82,660
ಸೆಕ್ಷನ್ ಎಂಜಿನಿಯರ್- ಮಾಸಿಕ ₹ 40,000- 94,500
ಮೇಂಟೈನರ್- ಮಾಸಿಕ ₹ 25,000-59,060


ವಿದ್ಯಾರ್ಹತೆ:
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಐಟಿಐ, ಡಿಪ್ಲೊಮಾ, ಬಿಇ/ ಬಿ.ಟೆಕ್, ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.


ವಯೋಮಿತಿ:
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 22, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ:
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ


ಇದನ್ನೂ ಓದಿ: KHPT Recruitment 2023: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಕೆಲಸ ಖಾಲಿ ಇದೆ- ಡಿಗ್ರಿ ಪಾಸಾಗಿದ್ರೆ ಅಪ್ಲೈ ಮಾಡಿ


ಅರ್ಜಿ ಶುಲ್ಕ:
ಸಾಮಾನ್ಯ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 1180 + 18% GST
SC/ ST ಅಭ್ಯರ್ಥಿಗಳು- 590 + 18% GST


ಉದ್ಯೋಗದ ಸ್ಥಳ:
ಬೆಂಗಳೂರು



ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಮೆರಿಟ್ ಲಿಸ್ಟ್
ಸಂದರ್ಶನ


ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

top videos


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/03/2023
    ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 24, 2023 (ನಾಳೆ)
    ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಏಪ್ರಿಲ್ 27, 2023
    ಲಿಖಿತ ಪರೀಕ್ಷೆ ನಡೆಯುವ ದಿನ: ಜೂನ್​ 6th, 7th & 8th 2023

    First published: