• ಹೋಂ
 • »
 • ನ್ಯೂಸ್
 • »
 • Jobs
 • »
 • Bengaluru Metro Recruitment 2023: ತಿಂಗಳಿಗೆ 60 ಸಾವಿರ ಸಂಬಳ- ಮೆಟ್ರೋ ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ

Bengaluru Metro Recruitment 2023: ತಿಂಗಳಿಗೆ 60 ಸಾವಿರ ಸಂಬಳ- ಮೆಟ್ರೋ ಹುದ್ದೆಗಳಿಗೆ ನಾಳೆಯೊಳಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು ಮೆಟ್ರೋದಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ನೋಡಿ ಬಂಪರ್ ಅವಕಾಶ. ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅರ್ಜಿ ಹಾಕಿ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

BMRCL Recruitment 2023: ಬೆಂಗಳೂರು ಮೆಟ್ರೋದಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ನೋಡಿ ಬಂಪರ್ ಅವಕಾಶ. ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಅರ್ಜಿ ಹಾಕಿ. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಹೌದು, ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(Bengaluru Metro Rail Corporation Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 67 ಫೈಯರ್ ಮ್ಯಾನ್, ಸೆಕ್ಯುರಿಟಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು ಆನ್​​​ಲೈನ್ ​(Online) ಮತ್ತು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 20, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ (Last Date). ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
ಹುದ್ದೆಫೈಯರ್ ಮ್ಯಾನ್, ಸೆಕ್ಯುರಿಟಿ ಆಫೀಸರ್
ಒಟ್ಟು ಹುದ್ದೆ67
ವಿದ್ಯಾರ್ಹತೆಬಿ.ಎಸ್ಸಿ, ಪಿಯುಸಿ
ವೇತನಮಾಸಿಕ ₹ 60,000
ಉದ್ಯೋಗದ ಸ್ಥಳಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನಏಪ್ರಿಲ್ 20, 2023 (ನಾಳೆ)

ಹುದ್ದೆಯ ಮಾಹಿತಿ:
ಡೆಪ್ಯುಟಿ ಚೀಫ್ ಫೈಯರ್ ಆಫೀಸರ್- 1
ಫೈಯರ್ ಮ್ಯಾನ್- 25
ಡೆಪ್ಯುಟಿ ಚೀಫ್ ಸೆಕ್ಯುರಿಟಿ ಆಫೀಸರ್- 1
ಅಸಿಸ್ಟೆಂಟ್ ಚೀಫ್ ಸೆಕ್ಯುರಿಟಿ ಆಫೀಸರ್- 2
ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್- 38


ವಿದ್ಯಾರ್ಹತೆ:
ಡೆಪ್ಯುಟಿ ಚೀಫ್ ಫೈಯರ್ ಆಫೀಸರ್- ಬಿ.ಎಸ್ಸಿ
ಫೈಯರ್ ಮ್ಯಾನ್- 12 ನೇ ತರಗತಿ
ಡೆಪ್ಯುಟಿ ಚೀಫ್ ಸೆಕ್ಯುರಿಟಿ ಆಫೀಸರ್- ಅಧಿಸೂಚನೆ ಪರಿಶೀಲಿಸಿ
ಅಸಿಸ್ಟೆಂಟ್ ಚೀಫ್ ಸೆಕ್ಯುರಿಟಿ ಆಫೀಸರ್- ಅಧಿಸೂಚನೆ ಪರಿಶೀಲಿಸಿ
ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್- ಅಧಿಸೂಚನೆ ಪರಿಶೀಲಿಸಿ


ಇದನ್ನೂ ಓದಿ: NIT Karnataka Recruitment 2023: ಹಿಂದಿ ಟ್ರಾನ್ಸ್​ಲೇಟರ್ ಪೋಸ್ಟ್ ಖಾಲಿ ಇದೆ- ಸ್ಯಾಲರಿ ಕೇಳಿದ್ರೆ ಇವತ್ತೇ ಅಪ್ಲೈ ಮಾಡ್ತೀರಾ


ವಯೋಮಿತಿ:
ಡೆಪ್ಯುಟಿ ಚೀಫ್ ಫೈಯರ್ ಆಫೀಸರ್- 62 ವರ್ಷ
ಫೈಯರ್ ಮ್ಯಾನ್- 25 ವರ್ಷ
ಡೆಪ್ಯುಟಿ ಚೀಫ್ ಸೆಕ್ಯುರಿಟಿ ಆಫೀಸರ್- 62 ವರ್ಷ
ಅಸಿಸ್ಟೆಂಟ್ ಚೀಫ್ ಸೆಕ್ಯುರಿಟಿ ಆಫೀಸರ್- 62 ವರ್ಷ
ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್- 62 ವರ್ಷ
ವೇತನ:
ಡೆಪ್ಯುಟಿ ಚೀಫ್ ಫೈಯರ್ ಆಫೀಸರ್- ಮಾಸಿಕ ₹ 60,000
ಫೈಯರ್ ಮ್ಯಾನ್- ಮಾಸಿಕ ₹ 25,000
ಡೆಪ್ಯುಟಿ ಚೀಫ್ ಸೆಕ್ಯುರಿಟಿ ಆಫೀಸರ್- ಮಾಸಿಕ ₹ 60,000
ಅಸಿಸ್ಟೆಂಟ್ ಚೀಫ್ ಸೆಕ್ಯುರಿಟಿ ಆಫೀಸರ್- ಮಾಸಿಕ ₹ 50,000
ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್- ಮಾಸಿಕ ₹ 30,000
ಉದ್ಯೋಗದ ಸ್ಥಳ:
ಬೆಂಗಳೂರು


ಇದನ್ನೂ ಓದಿ: KAPL Recruitment 2023: ಧಾರವಾಡ & ಬೆಂಗಳೂರಿನಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನ- ತಿಂಗಳಿಗೆ 42,000 ಸಂಬಳ


ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


ಅಭ್ಯರ್ಥಿಗಳು ಆನ್​ಲೈನ್ ಮೂಲಕ ಇಲ್ಲಿ ಅರ್ಜಿ ಸಲ್ಲಿಸಿ.


BMRCL ನೋಟಿಫಿಕೇಶನ್- 2


BMRCL-ನೋಟಿಫಿಕೇಶನ್-1


42 ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.


26 ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.


ಅಭ್ಯರ್ಥಿಗಳು ಪೋಸ್ಟ್​/ ಆಫ್​ಲೈನ್ ಮೂಲಕವೂ ಅರ್ಜಿ ಹಾಕಬಹುದು. ಅದಕ್ಕೆ ಅಭ್ಯರ್ಥಿಗಳು ಮಾಡಬೇಕಿರೋದು ಇಷ್ಟೇ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
3ನೇ ಮಹಡಿ
BMTC ಕಾಂಪ್ಲೆಕ್ಸ್
K.H. ರಸ್ತೆ
ಶಾಂತಿನಗರ
ಬೆಂಗಳೂರು - 560027


top videos  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/03/2023
  ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 20, 2023
  ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 22, 2023

  First published: