• Home
  • »
  • News
  • »
  • jobs
  • »
  • Railway Jobs 2022: ರೈಲ್ವೆ ಇಲಾಖೆಯಲ್ಲಿನ ಹುದ್ದೆಗಳ ಭರ್ತಿಗೆ ಆಹ್ವಾನ: ಇಂದೇ ಅರ್ಜಿ ಸಲ್ಲಿಸಿ

Railway Jobs 2022: ರೈಲ್ವೆ ಇಲಾಖೆಯಲ್ಲಿನ ಹುದ್ದೆಗಳ ಭರ್ತಿಗೆ ಆಹ್ವಾನ: ಇಂದೇ ಅರ್ಜಿ ಸಲ್ಲಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗ್ರೂಪ್​ ಸಿ- ಟೆಕ್ನಿಷಿಯನ್ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಹಾಗೂ ಐಟಿಐ ಪಾಸಾಗಿರಬೇಕು. ಇತರೆ ಹುದ್ದೆಗಳಿಗೆ ಶೇ.50ರಷ್ಟು ಅಂಕಗಳೊಂದಿಗೆ 12ನೇ ತರಗತಿ/ಪಿಯುಸಿ ಪಾಸಾಗಿರಬೇಕು. ಗ್ರೂಪ್​ ಡಿ- ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

  • Share this:

    ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಸುವರ್ಣಾವಕಾಶ ಇಲ್ಲಿದೆ.  ಉತ್ತರ ಮಧ್ಯೆ ರೈಲ್ವೆ(North Central Railway)ಯಲ್ಲಿ 11 ಗ್ರೂಪ್​ C, ಗ್ರೂಪ್ D ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ(PUC), ಐಟಿಐ(ITI) ಪಾಸಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅಕ್ಟೋಬರ್ 27ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.


    ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಆಸಕ್ತರು ಈ ಕೂಡಲೇ ಆನ್​ಲೈನ್(Online) ಮೂಲಕ ಅರ್ಜಿ ಹಾಕಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಹುದ್ದೆಯ ಹೆಸರುಗ್ರೂಪ್​ ಸಿ, ಗ್ರೂಪ್​ ಡಿ
    ಒಟ್ಟು ಹುದ್ದೆ11
    ವಿದ್ಯಾರ್ಹತೆಪಿಯುಸಿ, ಐಟಿಐ
    ವೇತನನಿಯಮಾನುಸಾರ
    ಸ್ಥಳಪ್ಯಾನ್ ಇಂಡಿಯಾ
    ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ 27/10/2022

    ಅರ್ಜಿ ಸಲ್ಲಿಕೆ ಪ್ರಕ್ರಿಯೆ


    1) ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    2) ರೆಸ್ಯೂಮ್​​ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    3) ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ದಾಖಲಾತಿ ಪರಿಶೀಲನೆ
    ವೈಯಕ್ತಿಕ ಸಂದರ್ಶನ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 21/11/2022


    ಅರ್ಜಿ ಶುಲ್ಕ:
    ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ
    ಎಸ್​​ಸಿ/ಎಸ್​​ಟಿ/ ಮಾಜಿ ಸೈನಿಕ/ PWD/ ಮಹಿಳಾ/ ಅಲ್ಪಸಂಖ್ಯಾತ & EBC ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ


    ಇದನ್ನೂ ಓದಿ: CISF Recruitment: ತಿಂಗಳಿಗೆ ₹ 69,000 ಸಂಬಳ, SSLC ಪಾಸಾದವರಿಗೆ ಇಲ್ಲಿದೆ ಬಂಪರ್ ಉದ್ಯೋಗ


    ಹುದ್ದೆಯ ಮಾಹಿತಿ:
    ಗ್ರೂಪ್​ ಸಿ- 03
    ಗ್ರೂಪ್​ ಡಿ-08
    ಒಟ್ಟು-11 ಹುದ್ದೆ


    ವಿದ್ಯಾರ್ಹತೆ:
    ಗ್ರೂಪ್​ ಸಿ- ಟೆಕ್ನಿಷಿಯನ್ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಹಾಗೂ ಐಟಿಐ ಪಾಸಾಗಿರಬೇಕು. ಇತರೆ ಹುದ್ದೆಗಳಿಗೆ ಶೇ.50ರಷ್ಟು ಅಂಕಗಳೊಂದಿಗೆ 12ನೇ ತರಗತಿ/ಪಿಯುಸಿ ಪಾಸಾಗಿರಬೇಕು.


    ಗ್ರೂಪ್​ ಡಿ- ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.


    ವಯೋಮಿತಿ:
    ಗ್ರೂಪ್​ ಸಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ 18-30 ವರ್ಷದೊಳಗಿರಬೇಕು.
    ಗ್ರೂಪ್ ಡಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ 18-33 ವರ್ಷದೊಳಗಿರಬೇಕು.


    ಉದ್ಯೋಗದ ಸ್ಥಳ:
    ಗ್ರೂಪ್ ಸಿ, ಗ್ರೂಪ್​ ಡಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.


    ವೇತನ:
    ಗ್ರೂಪ್​ ಸಿ- ಲೆವೆಲ್ -2 ಗ್ರೇಡ್ ಪೇ 1900 ರೂ.
    ಗ್ರೂಪ್​ ಡಿ- ಲೆವೆಲ್ -1 ಗ್ರೇಡ್ ಪೇ 1800 ರೂ.


    ಇದನ್ನೂ ಓದಿ: IIT Dharwad Recruitment 2022: ಜೂನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

    Published by:Kavya V
    First published: