Agricultural University Recruitment: ರಾಯಚೂರು ಕೃಷಿ ವಿವಿಯಲ್ಲಿ ಸಂಶೋಧಕರ ಹುದ್ದೆಗೆ ವಾಕ್​-ಇನ್-ಇಂಟರ್​​ವ್ಯೂ​

ಇನ್ನು ಈ ಹುದ್ದೆಯೂ 179 ದಿನಗಳು ಅಥವಾ ಪ್ರಾಜೆಕ್ಟ್​ ಅವಧಿಯವರೆಗೆ ಮಾತ್ರ ನಿರ್ವಹಿಸಲ್ಪಡುತ್ತದೆ. ಈ ಹುದ್ದೆ ಆಯ್ಕೆ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ರಾಯಚೂರು ಕೃಷಿ ವಿವಿಯಲ್ಲಿ ನೇಮಕಾತಿ

ರಾಯಚೂರು ಕೃಷಿ ವಿವಿಯಲ್ಲಿ ನೇಮಕಾತಿ

  • Share this:
    ರಾಯಚೂರು ಕೃಷಿ  ವಿಜ್ಞಾನ ವಿಶ್ವ ವಿದ್ಯಾಲಯದಲ್ಲಿ (University of Agricultural Sciences Raichur) ಸಂಶೋಧಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹಿರಿಯ ಸಂಶೋಧಕರ (Senior Research Fellow) ಹುದ್ದೆಗೆ ನೇಮಕಾತಿಗೆ ಸಂಸ್ಥೆ ಮುಂದಾಗಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಜುಲೈ 1ರಂದು ವಾಕ್​ ಇನ್​ ಇಂಟರ್​ವ್ಯೂ (Walk-in-interview) ನಡೆಯಲಿದೆ.

    ಇನ್ನು ಈ ಹುದ್ದೆಯೂ 179 ದಿನಗಳು ಅಥವಾ ಪ್ರಾಜೆಕ್ಟ್​ ಅವಧಿಯವರೆಗೆ ಮಾತ್ರ ನಿರ್ವಹಿಸಲ್ಪಡುತ್ತದೆ. ಈ ಹುದ್ದೆ ಆಯ್ಕೆ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ವಿಶ್ವವಿದ್ಯಾಲಯದ ಹೆಸರುಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು
    ಹುದ್ದೆಯ ಹೆಸರುಸೀನಿಯರ್ ರಿಸರ್ಚ್ ಫೆಲೋ
    ಹುದ್ದೆಗಳ ಸಂಖ್ಯೆ2
    ಉದ್ಯೋಗ ಸ್ಥಳರಾಯಚೂರು
    ವೇತನ:31000-35000 ರೂ. ಪ್ರತಿ ತಿಂಗಳು

    ಶೈಕ್ಷಣಿಕ ಅರ್ಹತೆ:  ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ರಸಾಯನಶಾಸ್ತ್ರ/ಬಯೋಕೆಮಿಸ್ಟ್ರಿ/ಆರ್ಗ್ಯಾನಿಕ್ ಕೆಮಿಸ್ಟ್ರಿ/ಅನಾಲಿಟಿಕಲ್ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ, ಪಿಎಚ್‌ಡಿ, ಜೀವ ವಿಜ್ಞಾನದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

    ವಯಸ್ಸಿನ ಮಿತಿ: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ  ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

    ಇದನ್ನು ಓದಿ: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್​, ಜವಾನ ಹುದ್ದೆಗೆ ಅರ್ಜಿ ಆಹ್ವಾನ

    ವಯೋಮಿತಿ ಸಡಿಲಿಕೆ:
    ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನಿಯಮಾವಳಿ ಪ್ರಕಾರ

    ಆಯ್ಕೆ ಪ್ರಕ್ರಿಯೆ
    ನೇರ ಸಂದರ್ಶನ

    ನೇರ ಸಂದರ್ಶನದ ದಿನಾಂಕ: ಜುಲೈ 1, 2022 ಬೆಳಗ್ಗೆ 10ಕ್ಕೆ

    ನೇರ ಸಂದರ್ಶನ ನಡೆಯುವ ಸ್ಥಳ: ಕೀಟನಾಶಕ ನಿಯಂತ್ರಣ ಮತ್ತು ಆಹಾರ ಗುಣಮಟ್ಟ ವಿಶ್ಲೇಷಣೆ ಪ್ರಯೋಗಾಲಯ, ಕೃಷಿ ವಿಶ್ವವಿದ್ಯಾಲಯ, ರಾಯಚೂರು.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 10 ಜೂನ್​​ 2022

    ಇದನ್ನು ಓದಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಡೇಟಾ ಎಂಟ್ರಿ ಆಪರೇಟರ್​ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: uasraichur.edu.in

    ನೇರ ಸಂದರ್ಶನದ ವೇಳೆ ಈ ದಾಖಲೆ ಅವಶ್ಯ

    ರಾಯಚೂರು ಕೃಷಿ ವಿವಿ ಅಧಿಕೃತ ವೆಬ್​ಸೈಟ್ನಲ್ಲಿ ನೀಡಿದ ನಿಗದಿತ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಬೇಕಿದೆ. ಇದರ ಜೊತೆಗೆ ಈ ದಾಖಲೆಗಳನ್ನು ಲಗತ್ತಿಸುವುದು ಅವಶ್ಯವಾಗಿದೆ.

    -ಎರಡು ಪಾಸಪೋರ್ಸ್​ ಸೈಜ್​ ಫೋಟೋ
    -ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು
    -ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ ಇವುಗಳ ಒರಿಜಿನರಲ್​ ಹಾಗೂ ಎರಡು ಸೆಟ್​ ಪೋಟೋ ಕಾಪಿಗಳೊಂದಿಗೆ ನೇರ ಸಂದರ್ಶನದಲ್ಲಿ ಅಭ್ಯರ್ಥಿ ಹಾಜರಾಗಬೇಕಿದೆ.
    Published by:Seema R
    First published: