DRDO Recruitment: ಡಿಆರ್​ಡಿಒನಲ್ಲಿ 630 ಹುದ್ದೆಗಳಿಗೆ ನೇಮಕಾತಿ; ಬಿಇ ಆಗಿದ್ರೆ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪದವಿಯ ಅಂತಿಮ ಸೆಮಿಸ್ಟರ್​ನಲ್ಲಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಡಿಆರ್​ಡಿಒ

ಡಿಆರ್​ಡಿಒ

  • Share this:
    ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (Defence Research and Development Organisation-DRDO) ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರದಿಂದ (Recruitment and Assessment Centre-RAC) 630 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಜ್ಞಾನಿ (Scientist)  ಮತ್ತು ಇಂಜಿನಿಯರಿಂಗ್​ (Engineers) ಹುದ್ದೆಗಳ ಭರ್ತಿಗೆ ಸಂಸ್ಥೆ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪದವಿಯ ಅಂತಿಮ ಸೆಮಿಸ್ಟರ್​ನಲ್ಲಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 14 ಆಗಿದೆ. ಅರ್ಜಿಯನ್ನು ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಸಲ್ಲಿಸಬೇಕಿದೆ.

    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
     ಸಂಸ್ಥೆಯ ಹೆಸರು: ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರ (RAC)
    ಹುದ್ದೆಯ ಹೆಸರು: ವಿಜ್ಞಾನಿ ಹಾಗೂ ಇಂಜಿನಿಯರ್
    ಹುದ್ದೆಗಳ ಸಂಖ್ಯೆ: 630
    ಉದ್ಯೋಗ ಸ್ಥಳ: ಅಖಿಲ ಭಾರತ
    ಸಂಬಳ: ಸಂಸ್ಥೆಯ ನಿಯಮಗಳ ಅನುಸಾರ

























    ಹುದ್ದೆಹುದ್ದೆ ಸಂಖ್ಯೆವಯೋಮಿತಿ
    ವಿಜ್ಞಾನಿ – DRDO- ಬಿ57928
    ವಿಜ್ಞಾನಿ - DST -ಬಿ835
    ವಿಜ್ಞಾನಿ/ಇಂಜಿನಿಯರ್ – ಎಡಿಎ-ಬಿ4330

    ಶೈಕ್ಷಣಿಕ ಅರ್ಹತೆ:  ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂಜಿನಿಯರಿಂಗ್‌ನಲ್ಲಿ ಪದವಿ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

    ವಯೋಮಿತಿ ಸಡಿಲಿಕೆ
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ,ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

    ಇದನ್ನು ಓದಿ: MSW ಪದವೀಧರರಿಗೆ ನಿಮ್ಹಾನ್ಸ್​ನಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ

    ಅರ್ಜಿ ಶುಲ್ಕ:

    ಪ.ಜಾ, ಪ.ಪಂ, ವಿಕಲಚೇತನ ಹಾಗೂ ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಸಾಮಾನ್ಯ  ಮತ್ತು ಒಬಿಸಿ ಪುರುಷ ಅಭ್ಯರ್ಥಿಗಳು: 100 ರೂ

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ:
    ಗೇಟ್ ಅಂಕಗಳು, ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಜೂನ್​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜುಲೈ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: rac.gov.in

    ಇದನ್ನು ಓದಿ: 650 ಹುದ್ದೆಗಳಿಗೆ ನೇಮಕಾತಿ; ಬಿಇ ಆದವರಿಗೆ ಭರ್ಜರಿ ಅವಕಾಶ

    ಅರ್ಜಿ ಸಲ್ಲಿಕೆ ವಿಧಾನ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: