ಪಂಜಾಬ್ & ಸಿಂದ್ ಬ್ಯಾಂಕಿನಲ್ಲಿ(Punjab & Sind Bank ) ಹಲವು ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 40 ಐಟಿ ಮ್ಯಾನೇಜರ್(IT Manager) ಹಾಗೂ ರಿಸ್ಕ್ ಮ್ಯಾನೇಜರ್(Risk Manager) ಹುದ್ದೆಗಳು ಖಾಲಿ ಇವೆ. ಬಿಇ, ಬಿ.ಟೆಕ್, ಸಿಎ, ಎಂಬಿಎ, ಎಂ.ಇ, ಎಂಜಿನಿಯರಿಂಗ್ ಹಾಗೂ ICWA ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಪಂಜಾಬ್ & ಸಿಂಧ್ ಬ್ಯಾಂಕ್ |
ಹುದ್ದೆಯ ಹೆಸರು |
ಐಟಿ ಮ್ಯಾನೇಜರ್ ಹಾಗೂ ರಿಸ್ಕ್ ಮ್ಯಾನೇಜರ್ |
ಒಟ್ಟು ಹುದ್ದೆಗಳು |
40 |
ವಿದ್ಯಾರ್ಹತೆ |
ಬಿಇ, ಬಿ.ಟೆಕ್, ಸಿಎ, ಎಂಬಿಎ, ಎಂ.ಇ, ಎಂಜಿನಿಯರಿಂಗ್ ಹಾಗೂ ICWA |
ಉದ್ಯೋಗದ ಸ್ಥಳ |
ನವದೆಹಲಿ |
ವೇತನ |
ಮಾಸಿಕ ₹48,170-84,890 |
ಅರ್ಜಿ ಸಲ್ಲಿಸುವ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
19/11/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
28/11/2021 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/11/2021
ಇದನ್ನೂ ಓದಿ: Eastern Railway Recruitment 2021: ಪೂರ್ವ ರೈಲ್ವೆಯಲ್ಲಿ ವಿವಿಧ ಹುದ್ದೆಗಳು ಖಾಲಿ, PUC, ITI ಪಾಸಾದವರು ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ- 1003 ರೂ. ಅರ್ಜಿ ಶುಲ್ಕ
SC/ST/PWD ಅಭ್ಯರ್ಥಿಗಳಿಗೆ 177 ರೂ. ಅರ್ಜಿ ಶುಲ್ಕ
ಹುದ್ದೆಯ ಮಾಹಿತಿ:
ಐಟಿ ಮ್ಯಾನೇಜರ್ MMGS -II - 24 ಹುದ್ದೆಗಳು
ಐಟಿ ಮ್ಯಾನೇಜರ್ MMGS -III - 13 ಹುದ್ದೆಗಳು
ರಿಸ್ಕ್ ಮ್ಯಾನೇಜರ್ MMGS -III - 2 ಹುದ್ದೆಗಳು
ರಿಸ್ಕ್ ಮ್ಯಾನೇಜರ್ SMGS -IV - 1 ಹುದ್ದೆ
ಒಟ್ಟು 40 ಹುದ್ದೆಗಳು
ವಿದ್ಯಾರ್ಹತೆ:
ಪಂಜಾಬ್ & ಸಿಂದ್ ಬ್ಯಾಂಕ್ ನೇಮಕಾತಿಯ ರಿಸ್ಕ್ ಮ್ಯಾನೇಜರ್ ಮತ್ತು ಐಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕನಿಷ್ಟ ಶೇ.60 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಬಿಇ, ಬಿ.ಟೆಕ್, ಸಿಎ, ಎಂಬಿಎ, ಎಂ.ಇ, ಎಂಜಿನಿಯರಿಂಗ್ ಹಾಗೂ ICWA ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಐಟಿ ಮ್ಯಾನೇಜರ್ MMGS -II - ಕನಿಷ್ಠ 25- ಗರಿಷ್ಠ 35 ವರ್ಷ
ಐಟಿ ಮ್ಯಾನೇಜರ್ MMGS -III - ಕನಿಷ್ಠ 25- ಗರಿಷ್ಠ 35 ವರ್ಷ
ರಿಸ್ಕ್ ಮ್ಯಾನೇಜರ್ MMGS -III - ಕನಿಷ್ಠ 25-ಗರಿಷ್ಠ 35 ವರ್ಷ
ರಿಸ್ಕ್ ಮ್ಯಾನೇಜರ್ SMGS -IV - ಕನಿಷ್ಠ 30-ಗರಿಷ್ಠ 40 ವರ್ಷ
ಉದ್ಯೋಗದ ಸ್ಥಳ:
ರಿಸ್ಕ್ ಮ್ಯಾನೇಜರ್ ಮತ್ತು ಐಟಿ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಉದ್ಯೋಗ ನೀಡಲಾಗುತ್ತದೆ.
ಇದನ್ನೂ ಓದಿ: HAL Recruitment 2021: ತಿಂಗಳಿಗೆ ₹ 21,000 ಸಂಬಳ, ಡಿಪ್ಲೊಮಾ ಆದವರಿಗೆ ಬೆಂಗಳೂರಿನ HALನಲ್ಲಿ ಉದ್ಯೋಗ
ವೇತನ:
ರಿಸ್ಕ್ ಮ್ಯಾನೇಜರ್ ಮತ್ತು ಐಟಿ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹48,170-84,890 ವೇತನ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಶಾರ್ಟ್ ಲಿಸ್ಟಿಂಗ್
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ